Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ನೆಹೆಮೀಯ 9:12 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

12 ಹಗಲಿನಲ್ಲಿ ಮೇಘಸ್ತಂಭವಾಗಿಯೂ, ರಾತ್ರಿ ವೇಳೆಯಲ್ಲಿ ಅವರು ನಡೆಯತಕ್ಕ ದಾರಿಯಲ್ಲಿ ಬೆಳಕುಕೊಡುವುದಕ್ಕೆ ಅಗ್ನಿಸ್ತಂಭವಾಗಿಯೂ ಅವರ ಮುಂದೆ ನೀನು ನಡೆದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

12 ಹಗಲಲಿ ಅವರ ಮುಂದೆ ಸಾಗಿದಿರಿ ಮೇಘಸ್ತಂಭದಂತೆ ಇರುಳಲಿ ದಾರಿತೋರಿದಿರಿ ಬೆಳಕನೀವ ಅಗ್ನಿಸ್ತಂಭದಂತೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

12 ಹಗಲುಹೊತ್ತಿನಲ್ಲಿ ಮೇಘಸ್ತಂಭದಲ್ಲಿಯೂ ರಾತ್ರಿವೇಳೆಯಲ್ಲಿ ಅವರು ನಡೆಯ ತಕ್ಕ ದಾರಿಯಲ್ಲಿ ಬೆಳಕುಕೊಡುವದಕ್ಕೆ ಅಗ್ನಿ ಸ್ತಂಭದಲ್ಲಿಯೂ ಅವರ ಮುಂದೆ ಹೋದಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

12 ಹಗಲಿನಲ್ಲಿ ಅವರನ್ನು ನಡೆಸಲು ಮೇಘಸ್ತಂಭವನ್ನು ಉಪಯೋಗಿಸಿದೆ. ರಾತ್ರಿವೇಳೆಯಲ್ಲಿ ಅಗ್ನಿಸ್ತಂಭವನ್ನು ಉಪಯೋಗಿಸಿದೆ. ಹೀಗೆ ಅವರ ಮಾರ್ಗವನ್ನು ಬೆಳಕಿನಿಂದ ಹೊದಿಸಿದೆ. ಎಲ್ಲಿಗೆ ಹೋಗಬೇಕೆಂದು ಅವರಿಗೆ ತೋರಿಸಿದಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

12 ಇದಲ್ಲದೆ ಹಗಲಿನಲ್ಲಿ ಮೇಘಸ್ತಂಭದಿಂದಲೂ, ಅವರು ನಡೆಯಬೇಕಾದ ಮಾರ್ಗದಲ್ಲಿ ಅವರಿಗೆ ಬೆಳಕಾಗುವ ಹಾಗೆ ರಾತ್ರಿಯಲ್ಲಿ ಅಗ್ನಿ ಸ್ತಂಭದಿಂದಲೂ ಅವರನ್ನು ನಡೆಸಿದಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ನೆಹೆಮೀಯ 9:12
12 ತಿಳಿವುಗಳ ಹೋಲಿಕೆ  

ಕರುಣಾನಿಧಿಯಾದ ನೀನು ಅವರನ್ನು ಅರಣ್ಯದಲ್ಲಿ ಕೈಬಿಡಲಿಲ್ಲ, ಹಗಲಿನಲ್ಲಿ ಅವರಿಗೆ ದಾರಿ ತೋರಿಸುತ್ತಿದ್ದ ಮೇಘಸ್ತಂಭವೂ, ರಾತ್ರಿವೇಳೆಯಲ್ಲಿ ಅವರು ನಡೆಯತಕ್ಕ ದಾರಿಯಲ್ಲಿ ಬೆಳಕುಕೊಡುತ್ತಿದ್ದ ಅಗ್ನಿಸ್ತಂಭವೂ, ಅವರನ್ನು ಬಿಟ್ಟುಹೋಗದಂತೆ ಮಾಡಿದೆ.


ಹೊತ್ತಾರೆ ನಿನ್ನ ಕೃಪೆಯು ನನಗೆ ಪ್ರಕಟವಾಗಲಿ; ನಿನ್ನಲ್ಲಿ ಭರವಸವಿಟ್ಟಿದ್ದೇನಲ್ಲಾ. ನಾನು ನಡೆಯತಕ್ಕ ಮಾರ್ಗವನ್ನು ತಿಳಿಸು; ನನ್ನ ಮನಸ್ಸನ್ನು ನಿನ್ನಲ್ಲಿಯೇ ಇಟ್ಟಿದ್ದೇನೆ.


ಜನವಿರುವ ಊರನ್ನು ಸೇರುವಂತೆ, ಅವರನ್ನು ಸರಿಯಾದ ದಾರಿಯಲ್ಲಿ ನಡೆಸಿದನು.


ಅವರಿಗೆ ಹಗಲಲ್ಲಿ ನೆರಳಿಗೋಸ್ಕರ ಮೋಡವನ್ನು, ಇರುಳಲ್ಲಿ ಬೆಳಕಿಗೋಸ್ಕರ ಬೆಂಕಿಯನ್ನು ಮೇಲೆ ಹರಡಿದನು.


ಹಗಲಿನಲ್ಲಿ ಮೋಡದಿಂದಲೂ, ರಾತ್ರಿಯಲ್ಲಿ ಬೆಂಕಿಯ ಬೆಳಕಿನಿಂದಲೂ, ಆತನು ಅವರನ್ನು ಕರೆದೊಯ್ದನು.


ನಿನ್ನ ಒಡಂಬಡಿಕೆಯ ನಂಬಿಗಸ್ತಿಕೆಯಲ್ಲಿ ನೀನು ನಿನ್ನ ಪ್ರಜೆಯನ್ನು ಬಿಡುಗಡೆ ಮಾಡಿರುವೆ. ನಿನ್ನ ಶಕ್ತಿಯಿಂದ ಅವರನ್ನು ನೀನು ವಾಸಮಾಡುವ ಪರಿಶುದ್ಧ ನಿವಾಸಕ್ಕೆ ನಡೆಸಿರುವೆ.


ನಿತ್ಯವೂ ಹಾಗೆಯೇ ಕಾಣಿಸುತ್ತಿತ್ತು; ಮೇಘವು ದೇವದರ್ಶನದ ಗುಡಾರವನ್ನು ಆವರಿಸಿಕೊಂಡಿತು. ರಾತ್ರಿವೇಳೆಯಲ್ಲಿ ಆ ಮೇಘವು ಬೆಂಕಿಯಂತೆ ಕಾಣಿಸುತ್ತಿತ್ತು.


ನೀವು ಹೋಗಬೇಕಾದ ದಾರಿಯನ್ನು ತೋರಿಸುವುದಕ್ಕೂ, ದಂಡು ಇಳಿಯಬೇಕಾದ ಸ್ಥಳಗಳನ್ನು ಗೊತ್ತುಮಾಡುವುದಕ್ಕೂ ರಾತ್ರಿಯಲ್ಲಿ ಬೆಂಕಿಯೋಪಾದಿಯಲ್ಲಿಯೂ ಮತ್ತು ಹಗಲಿನಲ್ಲಿ ಮೇಘದೋಪಾದಿಯಲ್ಲಿಯೂ ನಿಮ್ಮ ಮಾರ್ಗದಲ್ಲಿ ನಿಮ್ಮನ್ನು ಮುನ್ನಡೆಸಿದ ದೇವರನ್ನು ನೀವು ನಂಬಲಿಲ್ಲ.


ಕೆಲವು ಸಮಯಗಳಲ್ಲಿ ಮೇಘವು ಸಾಯಂಕಾಲದಿಂದ ಬೆಳಗ್ಗಿನವರೆಗೆ ಇರುತ್ತಿತ್ತು. ಬೆಳಗ್ಗೆ ಅದು ಮೇಲಕ್ಕೆ ಏಳುವಾಗ ಜನರು ಪ್ರಯಾಣಮಾಡುತ್ತಿದ್ದರು. ಕೆಲವು ಸಮಯಗಳಲ್ಲಿ ಅದು ಹಗಲಿರುಳು ನಿಂತಿರುತ್ತಿತ್ತು. ಅದು ಯಾವಾಗ ಮೇಲೇಳುತ್ತಿತ್ತೋ ಆಗ ಜನರು ಹೊರಡುತ್ತಿದ್ದರು.


ಆ ದಿನದಲ್ಲಿ ನಾನು ಅವರಿಗೆ, ‘ಸಕಲ ದೇಶ ಶಿರೋಮಣಿಯಾದ ದೇಶವನ್ನು ನಿಮಗಾಗಿ ನೋಡಿದ್ದೇನೆ; ನಾನು ನಿಮ್ಮನ್ನು ಐಗುಪ್ತ ದೇಶದೊಳಗಿಂದ ಉದ್ಧರಿಸಿ ಹಾಲೂ ಮತ್ತು ಜೇನೂ ಹರಿಯುವ ಆ ದೇಶಕ್ಕೆ ಸೇರಿಸುವೆನು’ ಎಂದು ಪ್ರಮಾಣಮಾಡಿದೆನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು