ನೆಹೆಮೀಯ 8:14 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201914 ಮೋಶೆಗೆ ಯೆಹೋವನಿಂದ ದೊರಕಿದ ಧರ್ಮಶಾಸ್ತ್ರದ ಪ್ರಕಾರ ಏಳನೆಯ ತಿಂಗಳಿನ ಜಾತ್ರೆಯಲ್ಲಿ ಇಸ್ರಾಯೇಲರು ಬಿಡಾರಗಳಲ್ಲಿ ವಾಸಮಾಡಬೇಕು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)14 ಏಳನೆಯ ತಿಂಗಳಿನ ಜಾತ್ರೆಯಲ್ಲಿ ಇಸ್ರಯೇಲರು ಪರ್ಣಕುಟೀರಗಳಲ್ಲಿ ವಾಸಿಸಬೇಕಾಗಿತ್ತು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)14 ಏಳನೆಯ ತಿಂಗಳಿನ ಜಾತ್ರೆಯಲ್ಲಿ ಇಸ್ರಾಯೇಲ್ಯರು ಪರ್ಣಶಾಲೆಗಳಲ್ಲಿ ವಾಸಿಸಬೇಕು; ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್14-15 ಅವರು ಅಭ್ಯಾಸಿಸಿದಾಗ ಧರ್ಮಶಾಸ್ತ್ರದಲ್ಲಿ ಈ ಆಜ್ಞೆಗಳನ್ನು ಕಂಡುಕೊಂಡರು: ಏಳನೆಯ ತಿಂಗಳಲ್ಲಿ ಯೆಹೋವನ ಆಜ್ಞೆಗನುಸಾರವಾಗಿ ವಿಶೇಷ ಹಬ್ಬವನ್ನು ಆಚರಿಸಲು ಜೆರುಸಲೇಮಿನಲ್ಲಿ ಸೇರಿಬಂದು ತಾತ್ಕಾಲಿಕವಾದ ಬಿಡಾರಗಳಲ್ಲಿ ವಾಸಿಸಬೇಕು. ಅವರು ತಮ್ಮ ಊರುಗಳ ಮತ್ತು ಜೆರುಸಲೇಮಿನ, “ಬೆಟ್ಟಪ್ರದೇಶಗಳಿಗೆ ಹೋಗಿ ಆಲೀವ್, ಖರ್ಜೂರ, ಕಾಡು ಆಲೀವ್, ಸುಗಂಧ ಮುಂತಾದ ಮರಗಳ ರೆಂಬೆಗಳನ್ನು ತೆಗೆದುಕೊಂಡು ಬಂದು ಅವುಗಳಿಂದ ಆ ಬಿಡಾರಗಳನ್ನು ಮಾಡಬೇಕು” ಎಂಬುದಾಗಿ ಯೆಹೋವನು ಮೋಶೆಗೆ ಕೊಟ್ಟಿದ್ದ ಆಜ್ಞೆಗಳೇ ಅವು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ14 ಆಗ ಅವರು ಏಳನೆಯ ತಿಂಗಳ ಹಬ್ಬದಲ್ಲಿ, ಇಸ್ರಾಯೇಲರು ಪರ್ಣಶಾಲೆಗಳಲ್ಲಿ ವಾಸವಾಗಿರಬೇಕೆಂದು ಯೆಹೋವ ದೇವರು ಮೋಶೆಯ ಮುಖಾಂತರ ಆಜ್ಞಾಪಿಸಿದ ವಿಷಯ ನಿಯಮದಲ್ಲಿ ಬರೆದದ್ದನ್ನು ಕಂಡರು. ಅಧ್ಯಾಯವನ್ನು ನೋಡಿ |