Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ನೆಹೆಮೀಯ 7:67 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

67 ಈ ಸಂಖ್ಯೆಯಲ್ಲಿ ಲೆಕ್ಕಿಸಲ್ಪಡದ ಅವರ ಸೇವಕ ಸೇವಕಿಯರು ಏಳು ಸಾವಿರದ ಮುನ್ನೂರ ಮೂವತ್ತೇಳು ಮಂದಿ. ಅವರ ಗಾಯಕರೂ ಗಾಯಕಿಯರೂ ಇನ್ನೂರ ನಲ್ವತ್ತೈದು ಮಂದಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

67 ಈ ಸಂಖ್ಯೆಯಲ್ಲಿ ಎಣಿಕೆಯಾಗದ ಅವರ ದಾಸದಾಸಿಯರು ಏಳು ಸಾವಿರದ ಮುನ್ನೂರ ಮೂವತ್ತೇಳು ಮಂದಿ. ಅವರ ಗಾಯಕರೂ ಗಾಯಕಿಯರೂ ಇನ್ನೂರ ನಾಲ್ವತ್ತೈದು ಮಂದಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

67 ಈ ಸಂಖ್ಯೆಯಲ್ಲಿ ಲೆಕ್ಕಿಸಲ್ಪಡದ ಅವರ ದಾಸದಾಸಿಯರು ಏಳು ಸಾವಿರದ ಮುನ್ನೂರ ಮೂವತ್ತೇಳು ಮಂದಿ. ಅವರ ಗಾಯಕರೂ ಗಾಯಕಿಗಳೂ ಇನ್ನೂರ ನಾಲ್ವತ್ತೈದು ಮಂದಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

67 ಅವರ ಹೊರತಾಗಿ ಅವರ ದಾಸರೂ ದಾಸಿಯರೂ 7,337 ಮಂದಿಯೂ, ಅವರ ಹಾಡುಗಾರರೂ, ಹಾಡುಗಾರ್ತಿಯರೂ 245 ಮಂದಿಯೂ ಇದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ನೆಹೆಮೀಯ 7:67
7 ತಿಳಿವುಗಳ ಹೋಲಿಕೆ  

ಈ ಸಂಖ್ಯೆಯಲ್ಲಿ ಲೆಕ್ಕಿಸಲ್ಪಡದ ಅವರ ದಾಸದಾಸಿಯರು ಏಳು ಸಾವಿರದ ಮುನ್ನೂರ ಮೂವತ್ತೇಳು ಜನರು. ಅವರಲ್ಲಿ ಗಾಯಕರೂ, ಗಾಯಕಿಯರೂ ಇನ್ನೂರು ಜನರು ಇದ್ದರು.


ಅವನ ದೇಶಕ್ಕೆ ಕಾಲವು ಸಮೀಪಿಸುವ ತನಕ ಸಕಲ ಜನಾಂಗಗಳು ಅವನಿಗೂ, ಅವನ ಮಗನಿಗೂ ಮತ್ತು ಮೊಮ್ಮಗನಿಗೂ ಅಡಿಯಾಳಾಗಿ ಬಿದ್ದಿರುವವು; ಆ ಮೇಲೆ ಅನೇಕ ಜನಾಂಗಗಳೂ ಮಹಾರಾಜರೂ ಅವನನ್ನೇ ಅಡಿಯಾಳನ್ನಾಗಿ ಮಾಡಿಕೊಳ್ಳುವರು.


ಆದರೆ ಆ ಆಳು, ನನ್ನ ಯಜಮಾನನು ಬರುವುದಕ್ಕೆ ತಡವಾಗುತ್ತದೆಯೆಂದು ತನ್ನ ಮನಸ್ಸಿನಲ್ಲಿ ಅಂದುಕೊಂಡು ಗಂಡಾಳು ಹೆಣ್ಣಾಳುಗಳನ್ನು ಹೊಡೆಯುವುದಕ್ಕೂ ತೊಂದರೆಕೊಡುವುದಕ್ಕೂ ಮತ್ತು ಅಮಲೇರುವಷ್ಟು ತಿಂದು ಕುಡಿಯುವುದಕ್ಕೂ ತೊಡಗಿದರೆ,


ಈಗ ನಾನು ಎಂಬತ್ತು ವರ್ಷದವನು. ಒಳ್ಳೆಯದು, ಕೆಟ್ಟದ್ದು ಇವುಗಳ ಭೇದವು ನನಗಿನ್ನು ತಿಳಿಯುವುದೋ? ನಿನ್ನ ಸೇವಕನಾದ ನನಗೆ ಅನ್ನಪಾನಗಳ ರುಚಿಯು ಗೊತ್ತಾಗುವುದೋ? ಗಾಯನ ಮಾಡುವ ಸ್ತ್ರೀಪುರುಷರ ಸ್ವರಗಳು ನನಗೆ ಕೇಳಿಸುತ್ತವೋ? ನಾನು ನನ್ನ ಒಡೆಯನಾದ ಅರಸನಿಗೆ ಯಾಕೆ ಹೊರೆಯಾಗಿರಬೇಕು?


ಸರ್ವಸಮೂಹದವರ ಒಟ್ಟು ಸಂಖ್ಯೆಯು ನಲ್ವತ್ತೆರಡು ಸಾವಿರದ ಮುನ್ನೂರ ಅರವತ್ತಾಗಿತ್ತು.


ಅವರಿಗೆ ಏಳು ನೂರ ಮೂವತ್ತಾರು ಕುದುರೆಗಳೂ, ಇನ್ನೂರ ನಲ್ವತ್ತೈದು ಹೇಸರಗತ್ತೆಗಳೂ,


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು