ನೆಹೆಮೀಯ 5:3 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20193 ಇನ್ನು ಕೆಲವರು, “ಬರಗಾಲದಲ್ಲಿ ಧಾನ್ಯವನ್ನು ಸಂಪಾದಿಸಿಕೊಳ್ಳಲು ನಮ್ಮ ಹೊಲ, ದ್ರಾಕ್ಷಿತೋಟ, ಮನೆಗಳನ್ನು ಒತ್ತೆ ಇಟ್ಟಿದ್ದೇವೆ” ಎಂದು ಹೇಳಿದರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)3 ಇನ್ನು ಕೆಲವರು, “ನಮ್ಮ ಹೊಲ, ತೋಟ, ಮನೆಗಳನ್ನು ಅಡವು ಇಟ್ಟಾಯಿತು; ಹಾಗೆ ಮಾಡಿಯಾದರೂ ಈ ಬರಗಾಲದಲ್ಲಿ ಧಾನ್ಯವನ್ನು ಸಂಪಾದಿಸಿಕೊಳ್ಳಬೇಕಾಗಿದೆ,” ಎಂದರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)3 ಇನ್ನು ಕೆಲವರು - ನಮ್ಮ ಹೊಲ ತೋಟಮನೆಗಳನ್ನು ಒತ್ತೆ ಹಾಕಿ ಆಯಿತು; ಈ ಬರಗಾಲದಲ್ಲಿ ಧಾನ್ಯವನ್ನು [ಹೇಗಾದರೂ] ಸಂಪಾದಿಸಿಕೊಳ್ಳೋಣ; ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್3 ಇನ್ನು ಕೆಲವರು, “ನಮಗೀಗ ಬರಗಾಲ ಪ್ರಾಪ್ತಿಯಾಗಿದೆ. ನಮಗೆ ದವಸಧಾನ್ಯ ಕೊಂಡುಕೊಳ್ಳಲು ನಮ್ಮ ಹೊಲಗದ್ದೆಗಳನ್ನು ಮಾರಬೇಕಾಗುತ್ತದೆ” ಅಂದರು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ3 ಕೆಲವರು, “ಈ ಬರಗಾಲದಲ್ಲಿ ನಾವು ಧಾನ್ಯ ಕೊಂಡುಕೊಳ್ಳುವ ಹಾಗೆ ನಮ್ಮ ಹೊಲಗಳನ್ನೂ, ದ್ರಾಕ್ಷಿತೋಟಗಳನ್ನೂ, ಮನೆಗಳನ್ನೂ ಒತ್ತೆ ಇಟ್ಟೆವು,” ಎಂದರು. ಅಧ್ಯಾಯವನ್ನು ನೋಡಿ |