ನೆಹೆಮೀಯ 2:20 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201920 ನಾನು ಅವರಿಗೆ, “ಪರಲೋಕದ ದೇವರು ನಮಗೆ ಕಾರ್ಯವನ್ನು ಸಾಧಿಸಿಕೊಡುವನು. ಆದುದರಿಂದ ಆತನ ಸೇವಕರಾದ ನಾವು ಕಟ್ಟುವುದಕ್ಕೆ ಮನಸ್ಸುಮಾಡಿದ್ದೇವೆ. ನಿಮಗಾದರೋ ಯೆರೂಸಲೇಮಿನಲ್ಲಿ ಯಾವ ಪಾಲೂ, ಹಕ್ಕೂ, ಹೆಸರೂ, ಸ್ಮಾರಕವೂ ಇರುವುದಿಲ್ಲ” ಎಂದು ಉತ್ತರಕೊಟ್ಟೆನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)20 ನಾನು ಅವರಿಗೆ, “ಪರಲೋಕದೇವರು ನಮಗೆ ಸಫಲತೆಯನ್ನು ಅನುಗ್ರಹಿಸುವರು. ಆದುದರಿಂದ ಅವರ ದಾಸರಾದ ನಾವು ಕೋಟೆಯ ಗೋಡೆಯನ್ನು ಕಟ್ಟುವುದಕ್ಕೆ ಮನಸ್ಸು ಮಾಡಿದ್ದೇವೆ. ನಿಮಗಾದರೋ ಜೆರುಸಲೇಮಿನಲ್ಲಿ ಪಾಲಾಗಲಿ, ಹಕ್ಕಾಗಲಿ, ಸ್ಮಾರಕವಾಗಲಿ ಇರುವುದಿಲ್ಲ,” ಎಂದು ಉತ್ತರಕೊಟ್ಟೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)20 ನಾನು ಅವರಿಗೆ - ಪರಲೋಕದೇವರು ನಮಗೆ ಸಾಫಲ್ಯವನ್ನನುಗ್ರಹಿಸುವನು. ಆದದರಿಂದ ಆತನ ಸೇವಕರಾದ ನಾವು ಕಟ್ಟುವದಕ್ಕೆ ಮನಸ್ಸು ಮಾಡಿದ್ದೇವೆ. ನಿಮಗಾದರೋ ಯೆರೂಸಲೇವಿುನಲ್ಲಿ ಪಾಲೂ ಹಕ್ಕೂ ಹೆಸರೂ ಇರುವದಿಲ್ಲ ಎಂದು ಉತ್ತರಕೊಟ್ಟೆನು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್20 ನಾನು ಅವರಿಗೆ, “ಪರಲೋಕದ ದೇವರು ನಮ್ಮ ಕಾರ್ಯವನ್ನು ಸಫಲಪಡಿಸುವನು. ನಾವು ಆತನ ಸೇವಕರು ಮತ್ತು ನಾವು ಈ ಪಟ್ಟಣವನ್ನು ತಿರಿಗಿ ಕಟ್ಟುತ್ತೇವೆ. ನೀವು ನಮ್ಮ ಸಹಾಯಕ್ಕಾಗಿ ಬರುವುದು ಬೇಡ. ನಿಮ್ಮಲ್ಲಿ ಯಾರ ಕುಟುಂಬಗಳವರೂ ಈ ಜೆರುಸಲೇಮಿನಲ್ಲಿ ವಾಸಿಸಲಿಲ್ಲ ಮತ್ತು ಈ ಪ್ರಾಂತ್ಯದಲ್ಲಿ ನಿಮಗೆ ಸ್ವಂತ ಭೂಮಿಯೂ ಇಲ್ಲ. ಆದ್ದರಿಂದ ನಿಮಗೆ ಈ ಪ್ರಾಂತ್ಯದಲ್ಲಿ ಯಾವ ಹಕ್ಕೂ ಇಲ್ಲ” ಎಂದು ಹೇಳಿದೆನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ20 ಆಗ ನಾನು ಅವರಿಗೆ, “ಪರಲೋಕದ ದೇವರು ನಮಗೆ ಸಫಲತೆ ಅನುಗ್ರಹಿಸುವರು. ಅವರ ಸೇವಕರಾದ ನಾವು ಪುನಃ ಕಟ್ಟುವ ಕಾರ್ಯ ಪ್ರಾರಂಭಿಸುವೆವು. ಆದರೆ ನಿಮಗೆ ಯೆರೂಸಲೇಮಿನಲ್ಲಿ ಯಾವುದೇ ಪಾಲಾದರೂ ಹಕ್ಕಾದರೂ ಐತಿಹಾಸಿಕ ಬಾಧ್ಯತೆಯಾದರೂ ಇರುವುದಿಲ್ಲ,” ಎಂದು ಹೇಳಿದೆನು. ಅಧ್ಯಾಯವನ್ನು ನೋಡಿ |
“ಅರಸನು ತನ್ನ ಬಳಿಗೆ ಬರಲು ಹೇಳಿದ ಹೊರತು ಅವನ ಬಳಿಗೆ ಒಳಗಣ ಪ್ರಾಕಾರಕ್ಕೆ ಹೋಗುವವರು ಮರಣದಂಡನೆಗೆ ಪಾತ್ರರಾಗುವರು ಎಂಬ ಒಂದೇ ನಿಯಮವು ಎಲ್ಲಾ ಸ್ತ್ರೀಪುರುಷರಿಗುಂಟು. ಯಾರ ಕಡೆಗೆ ಅವನು ತನ್ನ ಸುವರ್ಣದಂಡವನ್ನು ಚಾಚುವನೋ ಅವರು ಮಾತ್ರ ಜೀವದಿಂದುಳಿಯುವರು ಎಂಬುದು ಅರಸನ ಎಲ್ಲಾ ಸೇವಕರಿಗೂ ಮತ್ತು ಸಂಸ್ಥಾನಗಳ ಎಲ್ಲಾ ಜನರಿಗೂ ಗೊತ್ತು. ನನಗಂತೂ ಮೂವತ್ತು ದಿನಗಳಿಂದ ಅರಸನ ಬಳಿಗೆ ಹೋಗುವುದಕ್ಕೆ ಆಮಂತ್ರಣವಾಗಲಿಲ್ಲ” ಎಂದು ಹೇಳಿಸಿದಳು.