Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ನೆಹೆಮೀಯ 13:21 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

21 ಕೊನೆಗೆ ನಾನು ಅವರಿಗೆ, “ನೀವು ಗೋಡೆಯ ಹೊರಗೇಕೆ ಇಳಿದುಕೊಂಡಿದ್ದೀರಿ? ನೀವು ಪುನಃ ಹೀಗೆ ಮಾಡಿದರೆ ನಿಮ್ಮನ್ನು ಸೆರೆಹಿಡಿಸುವೆನು” ಎಂದು ಗದರಿಸಲು, ಅವರು ಅಂದಿನಿಂದ ಸಬ್ಬತ್ ದಿನದಲ್ಲಿ ಪುನಃ ಬರಲೇ ಇಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

21 ಕಡೆಗೆ ನಾನು ಅವರನ್ನು, “ನೀವು ಗೋಡೆಯ ಹೊರಗೇಕೆ ಇಳಿದುಕೊಂಡಿದ್ದೀರಿ? ನೀವು ಮತ್ತೆ ಹೀಗೆ ಮಾಡಿದರೆ ನಿಮ್ಮನ್ನು ಸೆರೆಹಿಡಿಸುವೆನು,” ಎಂದು ಗದರಿಸಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

21 ಕಡೆಯಲ್ಲಿ ನಾನು ಅವರನ್ನು - ನೀವು ಗೋಡೆಯ ಹೊರಗೇಕೆ ಇಳುಕೊಂಡಿದ್ದೀರಿ? ನೀವು ತಿರಿಗಿ ಹೀಗೆ ಮಾಡಿದರೆ ನಿಮ್ಮನ್ನು ಹಿಡಿಸುವೆನು ಎಂದು ಗದರಿಸಲು ಅವರು ಅಂದಿನಿಂದ ಸಬ್ಬತ್‍ದಿನದಲ್ಲಿ ತಿರಿಗಿ ಬರಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

21 ನಾನು ಆ ವ್ಯಾಪಾರಸ್ತರಿಗೆ, “ನೀವು ಬಾಗಿಲಿಗೆದುರಾಗಿ ನಗರದ ಹೊರಗೆ ರಾತ್ರಿ ಉಳಿದುಕೊಳ್ಳಬಾರದು. ಹಾಗೆ ಮಾಡಿದ್ದಲ್ಲಿ ನಿಮ್ಮನ್ನು ದಸ್ತಗಿರಿ ಮಾಡಬೇಕಾಗುವದು” ಎಂದು ಎಚ್ಚರಿಸಿದೆನು. ಅಂದಿನಿಂದ ಅವರು ಸಬ್ಬತ್ ದಿನದಲ್ಲಿ ನಗರಕ್ಕೆ ವ್ಯಾಪಾರಕ್ಕಾಗಿ ಬರುವುದನ್ನು ನಿಲ್ಲಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

21 ಆಗ ನಾನು ಅವರನ್ನು ಗದರಿಸಿ ಅವರಿಗೆ, “ನೀವು ಕೋಟೆಯ ಗೋಡೆಯ ಹೊರಗೆ ಏಕೆ ಇಳುಕೊಂಡಿದ್ದೀರಿ? ನೀವು ಇನ್ನು ಮೇಲೆ ಹಾಗೆ ಮಾಡಿದರೆ ನಿಮ್ಮನ್ನು ಸೆರೆಗೆ ಹಾಕುವೆನು,” ಎಂದೆನು. ಆ ದಿನದಿಂದ ಅವರು ಸಬ್ಬತ್ ದಿನದಲ್ಲಿ ಬರಲೇ ಇಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ನೆಹೆಮೀಯ 13:21
6 ತಿಳಿವುಗಳ ಹೋಲಿಕೆ  

ಅಥವಾ ಅರಸನಿಂದ ಕೆಟ್ಟ ನಡತೆಯುಳ್ಳವರನ್ನು ದಂಡಿಸುವುದಕ್ಕೂ ಒಳ್ಳೆ ನಡತೆಯುಳ್ಳವರನ್ನು ಪ್ರೋತ್ಸಾಹಪಡಿಸುವುದಕ್ಕೂ ಕಳುಹಿಸಲ್ಪಟ್ಟಂಥ ಅಧಿಪತಿಗಳಿಗಾಗಲಿ ನೀವು ಅಧೀನರಾಗಿರಿ.


ನಿನ್ನ ದೇವರ ಧರ್ಮಶಾಸ್ತ್ರವನ್ನೂ ಮತ್ತು ರಾಜಾಜ್ಞೆಯನ್ನೂ ಕೈಕೊಳ್ಳದವರಿಗೆಲ್ಲಾ ಮರಣದಂಡನೆ, ಬೇಡಿಹಾಕುವುದು ಈ ವಿಧವಾದ ಶಿಕ್ಷೆಯನ್ನು ತಪ್ಪದೆ ವಿಧಿಸಬೇಕು” ಎಂಬುದು ನಿಮಗೆ ತಿಳಿದಿರಲಿ.


ಆ ಕಾಲದಲ್ಲಿ ಯೆಹೂದದಲ್ಲಿ ಕೆಲವರು ಸಬ್ಬತ್ ದಿನದಲ್ಲಿ ತೊಟ್ಟಿಯೊಳಗೆ ದ್ರಾಕ್ಷಿ ತುಳಿಯುವುದನ್ನೂ, ಕಣದ ಕಾಳನ್ನು ಕೂಡಿಸಿ, ಆ ಕಾಳುಗಳನ್ನೂ, ದ್ರಾಕ್ಷಾರಸ, ದ್ರಾಕ್ಷಿ, ಅಂಜೂರದ ಹಣ್ಣು ಈ ಮುಂತಾದವುಗಳನ್ನು ಕತ್ತೆಗಳ ಮೇಲೆ ಹೇರಿಕೊಂಡು ಆ ದಿನದಲ್ಲೇ ಯೆರೂಸಲೇಮಿಗೆ ತರುವುದನ್ನೂ ಕಂಡೆನು. ಅವರು ಆ ಆಹಾರ ಪದಾರ್ಥಗಳನ್ನು ಮಾರುವುದಕ್ಕೆ ಬಂದಾಗ ನಾನು ಅವರನ್ನು ವಿರೋಧಿಸಿದೆನು.


ಇದರಿಂದ ವರ್ತಕರೂ, ಎಲ್ಲಾ ತರದ ದಿನನಿತ್ಯ ಬಳಕೆಯ ವಸ್ತುಗಳನ್ನು ಮಾರುವುದಕ್ಕೆ ಬಂದವರೂ, ಒಂದೆರಡು ಸಾರಿ ಯೆರೂಸಲೇಮಿನ ಹೊರಗೆ ಇಳಿದುಕೊಂಡರು.


ವರ್ಷಕ್ಕೆ ಒಂದು ಶೆಕೆಲಿನ ಮೂರನೆಯ ಒಂದು ಭಾಗವನ್ನು ದೇವಾಲಯದ ಸೇವೆಗಾಗಿ ಕೊಡಬೇಕೆಂಬ ನಿಯಮವನ್ನು ಪಾಲಿಸಿಕೊಳ್ಳುತ್ತೇವೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು