ನೆಹೆಮೀಯ 13:18 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201918 ನಿಮ್ಮ ಪೂರ್ವಿಕರು ಹೀಗೆ ಮಾಡಿದರೋ? ನಮ್ಮ ದೇವರು ಈ ಎಲ್ಲಾ ಕೇಡನ್ನು ನಮ್ಮ ಮೇಲೆಯೂ, ನಮ್ಮ ಪಟ್ಟಣದ ಮೇಲೆಯೂ ಬರಮಾಡಿದ್ದನಲ್ಲವೇ? ಹೀಗಿರಲಾಗಿ ನೀವೂ ಸಬ್ಬತ್ ದಿನವನ್ನು ಅಶುದ್ಧಮಾಡಿ ಇಸ್ರಾಯೇಲರ ಮೇಲೆ ದೈವಕೋಪವನ್ನು ಹೆಚ್ಚಿಸುತ್ತೀರಿ” ಎಂದು ಹೇಳಿ ಅವರನ್ನು ಗದರಿಸಿದೆನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)18 ನಿಮ್ಮ ಪೂರ್ವಿಕರು ಹೀಗೆ ಮಾಡಿದ್ದರಿಂದಲೆ ನಮ್ಮ ದೇವರು ಎಲ್ಲಾ ಕೇಡನ್ನು ನಮ್ಮ ಮೇಲೂ ನಮ್ಮ ಪಟ್ಟಣದ ಮೇಲೂ ಬರಮಾಡಿದ್ದಾರೆ. ಹೀಗಿರಲಾಗಿ, ನೀವೂ ಸಬ್ಬತ್‍ದಿನವನ್ನು ಅಶುದ್ಧಮಾಡಿ ಇಸ್ರಯೇಲರ ಮೇಲಿದ್ದ ದೇವಕೋಪವನ್ನು ಹೆಚ್ಚಿಸಬೇಡಿ,” ಎಂದು ಹೇಳಿ ಅವರನ್ನು ಗದರಿಸಿದೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)18 ನಿಮ್ಮ ಪೂರ್ವಿಕರು ಹೀಗೆ ಮಾಡಿದ್ದರಿಂದ ನಮ್ಮ ದೇವರು ಈ ಎಲ್ಲಾ ಕೇಡನ್ನು ನಮ್ಮ ಮೇಲೆಯೂ ನಮ್ಮ ಪಟ್ಟಣದ ಮೇಲೆಯೂ ಬರಮಾಡಿದನಲ್ಲವೇ. ಹೀಗಿರಲಾಗಿ ನೀವೂ ಸಬ್ಬತ್ ದಿನವನ್ನು ಅಶುದ್ಧಮಾಡಿ ಇಸ್ರಾಯೇಲ್ಯರ ಮೇಲಿದ್ದ ದೇವಕೋಪವನ್ನು ಹೆಚ್ಚಿಸುತ್ತೀರೇನು ಎಂದು ಹೇಳಿ ಅವರನ್ನು ಗದರಿಸಿದೆನು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್18 ನಮ್ಮ ಪೂರ್ವಿಕರೂ ಇದೇ ರೀತಿ ಮಾಡಿದರು. ಆ ಕಾರಣದಿಂದ ನಮ್ಮ ದೇವರು ಇಂಥಾ ತೊಂದರೆಗಳನ್ನು ನಮ್ಮ ನಗರಕ್ಕೆ ತಂದೊಡ್ಡಿದನು. ನೀವು ಸಬ್ಬತ್ ದಿನವನ್ನು ಅಶುದ್ಧಮಾಡಿ ನಿಮ್ಮ ಮೇಲೆ ಇನ್ನೂ ಹೆಚ್ಚಿನ ಕೋಪವನ್ನು ಬರಮಾಡಿಕೊಳ್ಳುತ್ತಿದ್ದೀರಿ. ದೇವರು ಇದಕ್ಕಾಗಿ ಭಯಂಕರ ಶಿಕ್ಷೆಯನ್ನು ಕೊಡುವವನಾಗಿದ್ದಾನೆ” ಎಂದು ಹೇಳಿದೆನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ18 ನಿಮ್ಮ ತಂದೆಗಳು ಈ ಪ್ರಕಾರ ಮಾಡಿದ್ದರಿಂದ, ನಮ್ಮ ದೇವರು ನಮ್ಮ ಮೇಲೆಯೂ, ಪಟ್ಟಣದ ಮೇಲೆಯೂ ಈ ಕೇಡನ್ನೆಲ್ಲಾ ಬರಮಾಡಲಿಲ್ಲವೋ? ಆದರೆ ನೀವು ಸಬ್ಬತ್ ದಿನವನ್ನು ಅಪವಿತ್ರ ಮಾಡುವುದರಿಂದ ಇಸ್ರಾಯೇಲಿನ ಮೇಲೆ ಇನ್ನೂ ದೇವರ ಕೋಪವನ್ನು ಬರಮಾಡುವಿರಿ.” ಅಧ್ಯಾಯವನ್ನು ನೋಡಿ |