ನೆಹೆಮೀಯ 13:10 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201910 ಇದಲ್ಲದೆ, ಲೇವಿಯರಿಗೆ ಸಲ್ಲತಕ್ಕ ಭಾಗಗಳು ಅವರಿಗೆ ಸಿಕ್ಕಲಿಲ್ಲವೆಂದೂ, ಆರಾಧನೆ ನಡೆಸತಕ್ಕ ಲೇವಿಯರೂ, ಗಾಯಕರೂ ತಮ್ಮ ತಮ್ಮ ಭೂಸ್ವಾಸ್ಥ್ಯಗಳಿಗೆ ಹಿಂತಿರುಗಿ ಹೋಗಿಬಿಟ್ಟರೆಂದೂ ನನಗೆ ಗೊತ್ತಾಯಿತು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)10 ಇದಲ್ಲದೆ, ಲೇವಿಯರಿಗೆ ಸಲ್ಲತಕ್ಕ ಪಾಲುಗಳು ಅವರಿಗೆ ಸಿಕ್ಕಲಿಲ್ಲವೆಂದೂ ಆರಾಧನೆ ನಡೆಸತಕ್ಕ ಲೇವಿಯರೂ ಗಾಯಕರೂ ತಮ್ಮ ತಮ್ಮ ಆಸ್ತಿಯಿದ್ದಲ್ಲಿಗೆ ಹೋಗಿಬಿಟ್ಟರೆಂದೂ ನನಗೆ ಗೊತ್ತಾಯಿತು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)10 ಇದಲ್ಲದೆ ಲೇವಿಯರಿಗೆ ಸಲ್ಲತಕ್ಕ ಭಾಗಗಳು ಅವರಿಗೆ ಸಿಕ್ಕಲಿಲ್ಲವೆಂದೂ ಆರಾಧನೆ ನಡಿಸತಕ್ಕ ಲೇವಿಯರೂ ಗಾಯಕರೂ ತಮ್ಮ ತಮ್ಮ ಭೂಸ್ವಾಸ್ತ್ಯಗಳಿಗೆ ಹೋಗಿಬಿಟ್ಟರೆಂದೂ ನನಗೆ ಗೊತ್ತಾಯಿತು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್10 ಲೇವಿಯರಿಗೆ ಸಲ್ಲತಕ್ಕ ಪಾಲನ್ನು ಜನರು ಕೊಡಲಿಲ್ಲವೆಂಬ ಕಾರಣದಿಂದಾಗಿ ಲೇವಿಯರೂ ಗಾಯಕರೂ ಹೊಲದಲ್ಲಿ ಕೆಲಸ ಮಾಡಲು ತಮ್ಮ ಊರುಗಳಿಗೆ ಹೊರಟುಹೋದರೆಂಬ ವಿಷಯ ನನಗೆ ತಿಳಿಯಿತು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ10 ಲೇವಿಯರ ಪಾಲನ್ನು ಅವರಿಗೆ ಕೊಡಲಿಲ್ಲವೆಂದು ನನಗೆ ತಿಳಿಯಿತು. ಸೇವೆಯನ್ನು ಮಾಡುವ ಲೇವಿಯರೂ, ಹಾಡುಗಾರರೂ ತಮ್ಮ ತಮ್ಮ ಹೊಲಕ್ಕೆ ಓಡಿ ಹೋಗುತ್ತಿದ್ದರು. ಅಧ್ಯಾಯವನ್ನು ನೋಡಿ |
ಇಸ್ರಾಯೇಲರೂ ಮತ್ತು ಲೇವಿಯರೂ ಧಾನ್ಯ, ದ್ರಾಕ್ಷಾರಸ, ಎಣ್ಣೆ ಇವುಗಳನ್ನು, ದೇವರಿಗಾಗಿ ಪ್ರತ್ಯೇಕಿಸತಕ್ಕ ಕಾಣಿಕೆಗಳನ್ನು ತಂದು ದೇವಾಲಯದಲ್ಲಿ ಸೇವೆ ನಡೆಸುತ್ತಿರುವ ಯಾಜಕರೂ, ದ್ವಾರಪಾಲಕರು, ಗಾಯಕರು ಇರುವ ಕೊಠಡಿಗಳಲ್ಲಿಯೂ ಹಾಗು ಪವಿತ್ರಾಲಯದ ಪಾತ್ರೆಗಳನ್ನು ಇಡುವ ಕೊಠಡಿಗಳಲ್ಲಿಯೂ ಇರಿಸಬೇಕು. ಅಲ್ಲದೆ ನಮ್ಮ ದೇವರ ಆಲಯವನ್ನು ಎಂದೂ ಅಲಕ್ಷ್ಯ ಮಾಡುವುದಿಲ್ಲ ಎಂದು ಬರೆದುಕೊಟ್ಟರು.