Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ನೆಹೆಮೀಯ 11:4 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

4 ಯೆರೂಸಲೇಮಿನಲ್ಲಿ, ಯೆಹೂದ ಮತ್ತು ಬೆನ್ಯಾಮೀನ್ ಕುಲಗಳವರಲ್ಲಿ ಕೆಲವರು ವಾಸವಾಗಿದ್ದರು. ಯೆಹೂದ ಕುಲದವರಲ್ಲಿ: ಅತಾಯನು, ಇವನು ಉಜ್ಜೀಯನ ಮಗ; ಇವನು ಜೆಕರ್ಯನ ಮಗ; ಇವನು ಅಮರ್ಯನ ಮಗ; ಇವನು ಶೆಫಟ್ಯನ ಮಗ; ಇವನು ಮಹಲಲೇಲನ ಮಗ, ಇವನು ಪೆರೆಚ್ ಸಂತಾನದವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

4 ಯೆರೂಸಲೇವಿುನಲ್ಲಿ ಯೆಹೂದ ಬೆನ್ಯಾಮೀನ್ ಕುಲಗಳವರಲ್ಲಿ ಕೆಲವರು ವಾಸವಾಗಿದ್ದರು.) ಯೆಹೂದ ಕುಲದವರಲ್ಲಿ - ಒಬ್ಬನು ಅತಾಯ; ಇವನು ಉಜ್ಜೀಯನ ಮಗನು; ಇವನು ಜೆಕರ್ಯನ ಮಗನು; ಇವನು ಅಮರ್ಯನ ಮಗನು; ಇವನು ಶೆಫಟ್ಯನ ಮಗನು; ಇವನು ಮಹಲಲೇಲನ ಮಗನು; ಇವನು ಪೆರೆಚ್ ಸಂತಾನದವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

4 ಯೆಹೂದ ಮತ್ತು ಬೆನ್ಯಾಮೀನನ ಕುಟುಂಬಗಳ ಇತರರು ಜೆರುಸಲೇಮ್ ನಗರದಲ್ಲಿ ವಾಸಿಸಿದರು.) ಜೆರುಸಲೇಮಿಗೆ ಬಂದ ಯೆಹೂದನ ಸಂತಾನದವರು ಯಾರೆಂದರೆ: ಉಜ್ಜೀಯನ ಮಗನಾದ ಅತಾಯ. (ಉಜ್ಜೀಯನು ಜೆಕರ್ಯನ ಮಗ; ಜೆಕರ್ಯನು ಅಮರ್ಯನ ಮಗ; ಅಮರ್ಯನು ಶೆಫಟ್ಯನ ಮಗ; ಶೆಫಟ್ಯನು ಮಹಲಲೇಲನ ಮಗ; ಮಹಲಲೇಲ ಪೆರೆಚನ ಸಂತಾನದವನು.)

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

4 ಯೆರೂಸಲೇಮಿನಲ್ಲಿ ಯೆಹೂದ ಮಕ್ಕಳಲ್ಲಿಯೂ, ಬೆನ್ಯಾಮೀನ್ಯರಲ್ಲಿಯೂ ಕೆಲವರು ವಾಸವಾಗಿದ್ದರು. ಯೆಹೂದನ ವಂಶಜರಲ್ಲಿ: ಒಬ್ಬನು ಅತಾಯನು, ಇವನು ಉಜ್ಜೀಯನ ಮಗ, ಜೆಕರ್ಯನ ಮಗ, ಅಮರ್ಯನ ಮಗ, ಶೆಫಟ್ಯನ ಮಗ, ಮಹಲಲೇಲನ ಮಗ, ಇವನು ಪೆರೆಚ್ ಸಂತಾನದವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ನೆಹೆಮೀಯ 11:4
7 ತಿಳಿವುಗಳ ಹೋಲಿಕೆ  

ಅದು ಕೈಯನ್ನು ಹಿಂದಕ್ಕೆ ತೆಗೆಯಲು, ಅದರೊಡನೆ ಇದ್ದ ಮತ್ತೊಂದು ಶಿಶುವು ಹೊರಗೆ ಬಂದಿತು. ಸೂಲಗಿತ್ತಿಯು ಇದನ್ನು ಕಂಡು, “ನೀನು ಛೇದಿಸಿಕೊಂಡು ಬಂದೆಯಾ?” ಎಂದು ಹೇಳಿ, ಅದಕ್ಕೆ “ಪೆರೆಚ್” ಎಂದು ಹೆಸರಾಯಿತು.


ನಹಶೋನನು ಅಮ್ಮಿನಾದಾಬನ ಮಗನು; ಅಮ್ಮಿನಾದಾಬನು ಅದ್ಮಿನನ ಮಗನು; ಅದ್ಮಿನನು ಆರ್ನೈಯನ ಮಗನು; ಆರ್ನೈಯನು ಎಸ್ರೋನನ ಮಗನು; ಎಸ್ರೋನನು ಪೆರೆಚನ ಮಗನು;


ಯೆಹೂದನಿಗೆ ತಾಮಾರಳಲ್ಲಿ ಪೆರೆಚನು, ಜೆರಹನು ಹುಟ್ಟಿದರು. ಪೆರೆಚನ ಮಗನು ಹೆಚ್ರೋನನು.


ಪೆರೆಚನ ವಂಶಾವಳಿ: ಪೆರೆಚನು ಹೆಚ್ರೋನನನ್ನು ಪಡೆದನು;


ಯೆರೂಸಲೇಮಿನಲ್ಲಿ ವಾಸಿಸುತ್ತಿದ್ದ ಯೆಹೂದ ಸಂಸ್ಥಾನ ಪ್ರಧಾನರು ಯಾರಾರೆಂದರೆ: ಇಸ್ರಾಯೇಲರೂ, ಯಾಜಕರೂ, ಲೇವಿಯರೂ, ದೇವಾಲಯದ ಸೇವಕರು, ಸೊಲೊಮೋನನ ಸೇವಕರ ವಂಶದವರೂ ತಮ್ಮ ತಮ್ಮ ಸ್ವತ್ತುಗಳಿರುವ ಯೆಹೂದ ದೇಶದ ಪಟ್ಟಣಗಳಲ್ಲಿ ವಾಸಿಸುತ್ತಿದ್ದರು.


ಇನ್ನೊಬ್ಬನು ಮಾಸೇಯ, ಇವನು ಬಾರೂಕನ ಮಗ; ಇವನು ಕೊಲ್ಹೋಜೆಯ ಮಗ; ಇವನು ಹಜಾಯನ ಮಗ; ಇವನು ಅದಾಯನ ಮಗ; ಇವನು ಯೋಯಾರೀಬನ ಮಗ; ಇವನು ಜೆಕರ್ಯನ ಮಗ, ಇವನು ಶೇಲಹನ ಸಂತಾನದವನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು