Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ನೆಹೆಮೀಯ 10:39 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

39 ಇಸ್ರಾಯೇಲರೂ ಮತ್ತು ಲೇವಿಯರೂ ಧಾನ್ಯ, ದ್ರಾಕ್ಷಾರಸ, ಎಣ್ಣೆ ಇವುಗಳನ್ನು, ದೇವರಿಗಾಗಿ ಪ್ರತ್ಯೇಕಿಸತಕ್ಕ ಕಾಣಿಕೆಗಳನ್ನು ತಂದು ದೇವಾಲಯದಲ್ಲಿ ಸೇವೆ ನಡೆಸುತ್ತಿರುವ ಯಾಜಕರೂ, ದ್ವಾರಪಾಲಕರು, ಗಾಯಕರು ಇರುವ ಕೊಠಡಿಗಳಲ್ಲಿಯೂ ಹಾಗು ಪವಿತ್ರಾಲಯದ ಪಾತ್ರೆಗಳನ್ನು ಇಡುವ ಕೊಠಡಿಗಳಲ್ಲಿಯೂ ಇರಿಸಬೇಕು. ಅಲ್ಲದೆ ನಮ್ಮ ದೇವರ ಆಲಯವನ್ನು ಎಂದೂ ಅಲಕ್ಷ್ಯ ಮಾಡುವುದಿಲ್ಲ ಎಂದು ಬರೆದುಕೊಟ್ಟರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

39 ಇಸ್ರಯೇಲರೂ ಲೇವಿಯರೂ ಧಾನ್ಯ, ದ್ರಾಕ್ಷಾರಸ, ಎಣ್ಣೆ ಇವುಗಳಲ್ಲಿ ದೇವರಿಗಾಗಿ ಪ್ರತ್ಯೇಕಿಸತಕ್ಕ ಭಾಗಗಳನ್ನು ತಂದು, ಸೇವೆ ನಡೆಸುತ್ತಿರುವ ಯಾಜಕರು, ದ್ವಾರಪಾಲಕರು, ಗಾಯಕರು ಇವರೂ, ಪವಿತ್ರಾಲಯದ ಪಾತ್ರೆಗಳೂ, ಇರುವ ಕೊಠಡಿಗಳಲ್ಲಿ ಇಡಬೇಕು; ನಮ್ಮ ದೇವರ ಆಲಯವನ್ನು ಎಂದೂ ಅಲಕ್ಷ್ಯ ಮಾಡುವುದಿಲ್ಲ,’ ಎಂದು ಬರೆದುಕೊಟ್ಟರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

39 ಇಸ್ರಾಯೇಲ್ಯರೂ ಲೇವಿಯರೂ ಧಾನ್ಯ, ದ್ರಾಕ್ಷಾರಸ, ಎಣ್ಣೆ ಇವುಗಳಲ್ಲಿ ದೇವರಿಗೋಸ್ಕರ ಪ್ರತ್ಯೇಕಿಸತಕ್ಕ ಭಾಗಗಳನ್ನು ತಂದು ಸೇವೆನಡಿಸುತ್ತಿರುವ ಯಾಜಕರು, ದ್ವಾರಪಾಲಕರು, ಗಾಯಕರು ಇವರೂ ಪವಿತ್ರಾಲಯದ ಪಾತ್ರೆಗಳೂ ಇರುವ ಕೊಠಡಿಗಳಲ್ಲಿ ಇಡಬೇಕು. ನಮ್ಮ ದೇವರ ಆಲಯವನ್ನು ಎಂದೂ ಅಲಕ್ಷ್ಯ ಮಾಡುವದಿಲ್ಲ ಎಂದು ಬರೆದುಕೊಟ್ಟರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

39 ಇಸ್ರೇಲ್ ಜನರು ಮತ್ತು ಲೇವಿಯರು ತಮ್ಮ ಕಾಣಿಕೆಗಳಾದ ದವಸಧಾನ್ಯ, ಹೊಸ ದ್ರಾಕ್ಷಾರಸ, ಎಣ್ಣೆ ಇವುಗಳನ್ನು ತಂದು ದೇವಾಲಯದ ಉಗ್ರಾಣಗಳಲ್ಲಿ ಇಡಬೇಕು. ದೇವಾಲಯಕ್ಕೋಸ್ಕರ ಮೀಸಲಾದ ಎಲ್ಲಾ ವಸ್ತುಗಳನ್ನು ಆ ಉಗ್ರಾಣಗಳಲ್ಲಿ ಇಡಬೇಕು. ಕೆಲಸದಲ್ಲಿ ನಿರತರಾಗಿರುವ ಯಾಜಕರು, ಗಾಯಕರು, ದ್ವಾರಪಾಲಕರು ಅಲ್ಲೇ ಇರಬೇಕು. “ನಮ್ಮ ದೇವರ ಆಲಯವನ್ನು ನಾವು ನೋಡಿಕೊಳ್ಳುವುದಾಗಿ ನಾವೆಲ್ಲರೂ ಪ್ರಮಾಣಮಾಡುತ್ತೇವೆ!”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

39 ಏಕೆಂದರೆ ಪರಿಶುದ್ಧ ಸ್ಥಾನದ ಸಲಕರಣೆಗಳೂ, ಸೇವೆ ಮಾಡುವ ಯಾಜಕರೂ, ದ್ವಾರಪಾಲಕರೂ, ಹಾಡುಗಾರರೂ ಇರುವ ಕೊಟ್ಟಡಿಗಳಿಗೆ ಇಸ್ರಾಯೇಲರೂ, ಲೇವಿಯರ ಮಕ್ಕಳೂ, ಕಾಣಿಕೆಯಾದ ಧಾನ್ಯವನ್ನೂ, ದ್ರಾಕ್ಷಾರಸವನ್ನೂ, ಎಣ್ಣೆಯನ್ನೂ ತರಬೇಕು. “ನಾವು ನಮ್ಮ ದೇವರ ಆಲಯವನ್ನು ಎಂದೂ ಅಲಕ್ಷ್ಯಮಾಡುವುದಿಲ್ಲ,” ಎಂದು ಬರೆದುಕೊಟ್ಟರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ನೆಹೆಮೀಯ 10:39
12 ತಿಳಿವುಗಳ ಹೋಲಿಕೆ  

ಸಭೆಯಾಗಿ ಸೇರುವ ರೂಢಿಯನ್ನು ಕೆಲವರು ಬಿಟ್ಟಂತೆ ನಾವು ಬಿಟ್ಟು ಬಿಡದೆ, ಆ ದಿನವು ಸಮೀಪಿಸುತ್ತಾ ಬರುತ್ತದೆಂದು ನೀವು ತಿಳಿದುಕೊಂಡಿರುವುದರಿಂದ ಒಬ್ಬರನ್ನೊಬ್ಬರು ಮತ್ತಷ್ಟು ಹೆಚ್ಚಾಗಿಯೇ ಪ್ರೋತ್ಸಾಹಿಸುತ್ತಿರೋಣ.


ಅವು ಸಿದ್ಧವಾದ ಮೇಲೆ ಜನರು ಕಾಣಿಕೆಗಳನ್ನೂ, ತಮ್ಮ ಆದಾಯದ ದಶಮಾಂಶವನ್ನೂ ಹಾಗು ದೇವರ ನೈವೇದ್ಯಕ್ಕಾಗಿ ಮುಡುಪಾಗಿ ಇಟ್ಟಿದ್ದನ್ನು ನಂಬಿಕೆಯಿಂದ ತಂದು ಅವುಗಳಲ್ಲಿ ಹಾಕುತ್ತಿದ್ದರು. ಈ ಎಲ್ಲಾ ಉಗ್ರಾಣಗಳ ಮೇಲ್ವಿಚಾರಣೆಗೆ ಲೇವಿಯನಾದ ಕೋನನ್ಯನು ಮುಖ್ಯಸ್ಥನಾಗಿದ್ದನು. ಅವನ ತಮ್ಮನಾದ ಶಿಮ್ಮಿಯು ದ್ವಿತೀಯ ಸ್ಥಾನದವನಾಗಿದ್ದನು.


ನಮ್ಮ ದೇವರಾದ ಯೆಹೋವನ ಮಂದಿರದ ನಿಮಿತ್ತವಾಗಿ, ನಿನ್ನ ಸುಕ್ಷೇಮಕ್ಕಾಗಿ ಪ್ರಾರ್ಥಿಸುತ್ತೇನೆ.


ಧಾನ್ಯ, ದ್ರಾಕ್ಷಿ, ಎಣ್ಣೇಕಾಯಿ ಈ ಬೆಳೆಗಳ ದಶಮಾಂಶಗಳನ್ನೂ, ದನ ಮತ್ತು ಕುರಿಗಳ ಚೊಚ್ಚಲು ಮರಿಗಳನ್ನೂ, ಹರಕೆಮಾಡಿದ ಪದಾರ್ಥಗಳನ್ನೂ, ಕಾಣಿಕೆಗಳನ್ನೂ, ಯಾಜಕರಿಗೋಸ್ಕರ ಪ್ರತ್ಯೇಕಿಸಿದ ಪದಾರ್ಥಗಳನ್ನೂ ನಿಮ್ಮ ನಿಮ್ಮ ಊರುಗಳಲ್ಲಿ ತಿನ್ನಬಾರದು.


ಆದುದರಿಂದ ನೀನು ಲೇವಿಯರಿಗೆ ಹೀಗೆ ಹೇಳಬೇಕು, ‘ನಿಮಗೆ ದೊರಕಿದ್ದರಲ್ಲಿ ನೀವು ಉತ್ತಮವಾದದ್ದನ್ನೇ ಪ್ರತ್ಯೇಕಿಸಿ ಸಮರ್ಪಿಸಿದ ಮೇಲೆ ಉಳಿದದ್ದನ್ನು ಕಣದಲ್ಲಿನ ದವಸದ ಹಾಗೂ, ದ್ರಾಕ್ಷಿತೊಟ್ಟಿಯ ರಸವೆಂದು ಭಾವಿಸಿ ಉಪಯೋಗಿಸಿಕೊಳ್ಳಬಹುದು.


ಊರಬಾಗಿಲಿಗೆ ಬಂದು ಕಾವಲುಗಾರರಿಗೆ, “ನಾವು ಅರಾಮ್ಯರ ಪಾಳೆಯಕ್ಕೆ ಹೋಗಿದ್ದೆವು. ಅಲ್ಲಿ ನಮಗೆ ಯಾರೂ ಕಾಣಿಸಲಿಲ್ಲ, ಮನುಷ್ಯರ ಶಬ್ದವೇ ಕೇಳಿಸಲಿಲ್ಲ. ಕತ್ತೆ ಕುದುರೆಗಳನ್ನು ಅಲ್ಲಲ್ಲಿ ಕಟ್ಟಿಹಾಕಲಾಗಿತ್ತು ಡೇರೆಗಳು ಇದ್ದ ಹಾಗೆಯೇ ಇವೆ” ಎಂದು ಕೂಗಿ ಹೇಳಿದರು.


“ನೀನು ಲೇವಿಯರಿಗೆ ಹೀಗೆ ಆಜ್ಞಾಪಿಸಬೇಕು, ‘ಇಸ್ರಾಯೇಲರ ಸ್ವಂತಕ್ಕಾಗಿ ನಾನು ನೇಮಿಸಿರುವ ಹತ್ತನೆಯ ಒಂದು ಭಾಗವನ್ನು ಪ್ರತ್ಯೇಕಿಸಿ ಯೆಹೋವನಿಗೆ ಸಮರ್ಪಿಸಬೇಕು.


ಆಗ ಹಿಜ್ಕೀಯನು ಯೆಹೋವನ ಆಲಯದಲ್ಲಿ ಕೊಠಡಿಗಳನ್ನು ಸಿದ್ಧಮಾಡಲು ಆಜ್ಞಾಪಿಸಿದನು.


ಜೆರುಬ್ಬಾಬೆಲ್ ಮತ್ತು ನೆಹೆಮೀಯ ಇವರ ಕಾಲಗಳಲ್ಲಿ ಎಲ್ಲಾ ಇಸ್ರಾಯೇಲರು ಗಾಯಕರಿಗೂ ದ್ವಾರಪಾಲಕರಿಗೂ ಪ್ರತಿದಿನ ಜೀವನಾಂಶವನ್ನು ಕೊಡುತ್ತಿದ್ದರು. ಇವರು ಅವುಗಳಲ್ಲಿ ದಶಮಾಂಶವನ್ನು ಲೇವಿಯರಿಗೂ ಮತ್ತು ಲೇವಿಯರು ತಮ್ಮದರಲ್ಲಿಯ ದಶಮಾಂಶವನ್ನು ಆರೋನನ ಮಕ್ಕಳಿಗೂ ಕೊಡುತ್ತಿದ್ದರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು