ನೆಹೆಮೀಯ 10:34 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201934 ಧರ್ಮಶಾಸ್ತ್ರವಿಧಿಗಳಿಗೆ ಅನುಸಾರವಾಗಿ ನಮ್ಮ ದೇವರಾದ ಯೆಹೋವನ ಯಜ್ಞವೇದಿಯ ಮೇಲೆ ಬೆಂಕಿ ಉರಿಸುವುದಕ್ಕಾಗಿ, ಪ್ರತಿ ವರ್ಷವೂ ನಿಯಮಿತ ಕಾಲಗಳಲ್ಲಿ ನಮ್ಮ ದೇವಾಲಯಕ್ಕೆ ಕಟ್ಟಿಗೆ ದೊರಕುವ ಹಾಗೆ, ಆಯಾ ಗೋತ್ರಾನುಸಾರ ಕಟ್ಟಿಗೆ ದಾನ ಮಾಡತಕ್ಕವರು ಇಂಥವರೇ ಎಂಬುದನ್ನು ಯಾಜಕರೂ, ಲೇವಿಯರೂ, ಸಾಧಾರಣ ಜನರೂ ಆಗಿರುವ ನಮ್ಮಲ್ಲಿ ಚೀಟು ಹಾಕಿ ಗೊತ್ತುಮಾಡಿಕೊಳ್ಳುತ್ತೇವೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)34 ಧರ್ಮಶಾಸ್ತ್ರವಿಧಿಗನುಸಾರ, ನಮ್ಮ ದೇವರಾದ ಸರ್ವೇಶ್ವರನ ಬಲಿಪೀಠದ ಮೇಲೆ ಬೆಂಕಿಯುರಿಸುವುದಕ್ಕಾಗಿ ವರ್ಷವರ್ಷವೂ ನೇಮಿತವಾದ ಕಾಲಗಳಲ್ಲಿ, ನಮ್ಮ ದೇವಾಲಯಕ್ಕೆ ಸೌದೆ ದೊರಕುವ ಹಾಗೆ ಆಯಾ ಗೋತ್ರಾನುಸಾರ ಕಟ್ಟಿಗೆ ದಾನಮಾಡತಕ್ಕವರು ಇಂತಿಂಥವರು ಎಂಬುದನ್ನು ಯಾಜಕರೂ ಲೇವಿಯರೂ ಜನಸಾಮಾನ್ಯರೂ ಸೇರಿ, ನಮ್ಮಲ್ಲೇ ಚೀಟುಹಾಕಿ ಗೊತ್ತುಮಾಡುತ್ತೇವೆ; ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)34 ಧರ್ಮಶಾಸ್ತ್ರವಿಧಿಗನುಸಾರವಾಗಿ ನಮ್ಮ ದೇವರಾದ ಯೆಹೋವನ ಯಜ್ಞವೇದಿಯ ಮೇಲೆ ಬೆಂಕಿಯುರಿಸುವದಕ್ಕಾಗಿ ವರುಷ ವರುಷ ನೇವಿುತವಾದ ಕಾಲಗಳಲ್ಲಿ ನಮ್ಮ ದೇವಾಲಯಕ್ಕೆ ಕಟ್ಟಿಗೆ ದೊರಕುವ ಹಾಗೆ ಆಯಾಗೋತ್ರಾನುಸಾರ ಕಾಷ್ಠದಾನ ಮಾಡತಕ್ಕವರು ಇಂಥವರು ಎಂಬದನ್ನು ಯಾಜಕರೂ ಲೇವಿಯರೂ ಸಾಧಾರಣ ಜನರೂ ಆಗಿರುವ ನಮ್ಮಲ್ಲಿ ಚೀಟುಹಾಕಿ ಗೊತ್ತುಮಾಡುತ್ತೇವೆ; ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್34 “ನಾವು ಅಂದರೆ ಯಾಜಕರು, ಲೇವಿಯರು ಮತ್ತು ಇತರ ಜನರು ಒಟ್ಟಾಗಿ ಸೇರಿ ದೇವಾಲಯದಲ್ಲಿ ಯಜ್ಞ ಹೋಮಗಳನ್ನರ್ಪಿಸುವುದಕ್ಕೆ ಬೇಕಾದ ಕಟ್ಟಿಗೆಯನ್ನು ಪ್ರತಿಯೊಂದು ಕುಟುಂಬವು ವರ್ಷಕ್ಕೊಮ್ಮೆ ತಮಗೆ ನಿಗದಿತವಾದ ಸಮಯದಲ್ಲಿ ತಂದು ಒದಗಿಸುವುದಕ್ಕೆ ಚೀಟು ಹಾಕಿದೆವು. ಧರ್ಮಶಾಸ್ತ್ರದಲ್ಲಿ ಬರೆದಂತೆಯೇ ನಾವು ಮಾಡಬೇಕಲ್ಲಾ! ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ34 ಮೋಶೆಯ ನಿಯಮದಲ್ಲಿ ಬರೆದ ಹಾಗೆ ನಮ್ಮ ದೇವರಾಗಿರುವ ಯೆಹೋವ ದೇವರ ಬಲಿಪೀಠದ ಮೇಲೆ ಅರ್ಪಿಸುವುದಕ್ಕೆ ನೇಮಿತವಾದ ಕಾಲಗಳಲ್ಲಿ, ವರ್ಷ ವರ್ಷಕ್ಕೆ ನಮ್ಮ ಪಿತೃಗಳ ಗೋತ್ರಗಳ ಪ್ರಕಾರ ನಮ್ಮ ದೇವಾಲಯದೊಳಗೆ ತೆಗೆದುಕೊಂಡು ಬರಬೇಕಾದ ಸೌದೆಯ ಅರ್ಪಣೆಗೋಸ್ಕರ ಯಾಜಕರಿಗೂ, ಲೇವಿಯರಿಗೂ, ಜನರಿಗೂ ಚೀಟಿಗಳನ್ನು ಹಾಕಿದೆವು. ಅಧ್ಯಾಯವನ್ನು ನೋಡಿ |