Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ನಹೂಮ 1:11 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

11 ನಿನವೆಯೇ, ಯೆಹೋವನಿಗೆ ವಿರುದ್ಧವಾಗಿ ದುಷ್ಟ ಆಲೋಚನೆ ಮಾಡಿ ಕೇಡನ್ನು ಕಲ್ಪಿಸುವವನು ನಿನ್ನೊಳಗಿಂದ ಹೊರಟಿದ್ದಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

11 ನಿನೆವೆಯೇ, ಸರ್ವೇಶ್ವರಸ್ವಾಮಿಗೆ ವಿರುದ್ಧವಾಗಿ ಕುಯುಕ್ತಿಯನ್ನು ಕಲ್ಪಿಸುವವನು ನಿನ್ನಿಂದಲೆ ಹೊರಟಿದ್ದಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

11 [ನಿನೆವೆಯೇ,] ಯೆಹೋವನಿಗೆ ವಿರುದ್ಧವಾಗಿ ದುರಾಲೋಚನೆಮಾಡಿ ಕೇಡನ್ನು ಸಂಕಲ್ಪಿಸುವವನು ನಿನ್ನೊಳಗಿಂದ ಹೊರಟಿದ್ದಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

11 ಅಶ್ಶೂರವೇ, ನಿನ್ನಿಂದ ಒಬ್ಬ ಮನುಷ್ಯನು ಬಂದು, ಯೆಹೋವನಿಗೆ ವಿರುದ್ಧವಾದ ಯೋಜನೆಗಳನ್ನು ಹಾಕಿದನು. ದುರಾಲೋಚನೆಯನ್ನು ಕೊಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

11 ನಿನೆವೆಯೇ ಯೆಹೋವ ದೇವರಿಗೆ ವಿರೋಧವಾಗಿ ದುರಾಲೋಚನೆ ಮಾಡಿ, ಕೇಡನ್ನು ಯೋಚಿಸುವವನು ನಿನ್ನೊಳಗಿಂದ ಹೊರಟಿದ್ದಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ನಹೂಮ 1:11
11 ತಿಳಿವುಗಳ ಹೋಲಿಕೆ  

ನೀವು ಯೆಹೋವನಿಗೆ ವಿರುದ್ಧವಾಗಿ ಯಾವರೀತಿಯ ಕುಯುಕ್ತಿಯನ್ನು ಕಲ್ಪಿಸುತ್ತೀರಿ? ಆತನು ಸಂಪೂರ್ಣವಾಗಿ ಹಾಳುಮಾಡುವನು; ಎರಡನೆಯ ಸಾರಿ ಅಪಾಯವು ತಲೆ ಎತ್ತದಂತೆ ಪೂರ್ಣವಾಗಿ ನಿಮ್ಮನ್ನು ನಾಶಮಾಡುವನು.


ಕಾಕಪೋಕರೂ ದುಷ್ಟರೂ ಆಗಿರುವ ಜನರು ಅವನನ್ನು ಕೂಡಿಕೊಂಡರು. ಆ ಸಮಯದಲ್ಲಿ ಎಳೇಪ್ರಾಯದವನೂ, ಮೃದುಸ್ವಭಾವವುಳ್ಳವನೂ, ತಮ್ಮೆದುರಿನಲ್ಲಿ ನಿಲ್ಲಲಾರದವನೂ ಆದ ಸೊಲೊಮೋನನ ಮಗ ರೆಹಬ್ಬಾಮನನ್ನು ಇವರು ಪ್ರತಿಭಟಿಸಿ ಬಲಗೊಂಡರು.


ಹಿಜ್ಕೀಯನು ನಿಮಗೆ, ‘ಯೆಹೋವನ ಮೇಲೆ ಭರವಸದಿಂದಿರಿ; ಆತನು ನಿಮ್ಮನ್ನು ಹೇಗೂ ರಕ್ಷಿಸುವನು. ಈ ಪಟ್ಟಣವು ಅಶ್ಶೂರದ ಅರಸನ ವಶವಾಗುವುದಿಲ್ಲ’ ಎಂಬುದಾಗಿ ಹೇಳಿದರೆ ಅವನ ಮಾತಿಗೆ ಕಿವಿಗೊಡಬೇಡಿರಿ, ಒಪ್ಪಬೇಡಿರಿ”


ಆಕಸ್ಮಾತ್ತಾಗಿ ಬೆನ್ಯಾಮೀನ ಕುಲದವನೂ, ಬಿಕ್ರೀಯ ಮಗನೂ ಆದ ಶೆಬನೆಂಬ ಒಬ್ಬ ದುಷ್ಟಮನುಷ್ಯನು ಅಲ್ಲಿ ಹೇಗೋ ಬಂದಿದ್ದನು. ಅವನು ಕಹಳೆಯನ್ನು ಊದಿ, “ಇಸ್ರಾಯೇಲರೇ, ದಾವೀದನಲ್ಲಿ ನಮಗೆ ಪಾಲಿಲ್ಲ. ಇಷಯನ ಮಗನಲ್ಲಿ ನಮಗೆ ಸ್ವತ್ತು ಇಲ್ಲ. ಪ್ರತಿಯೊಬ್ಬನೂ ನಮ್ಮ ನಮ್ಮ ನಿವಾಸಗಳಿಗೆ ಹೋಗೋಣ” ಎಂದನು.


ಏಲಿಯ ಮಕ್ಕಳು ಬಹುದುಷ್ಟರಾಗಿದ್ದರು; ಅವರು ಯೆಹೋವನನ್ನು ಲಕ್ಷಿಸುತ್ತಿರಲಿಲ್ಲ.


ಅಲ್ಲಿ ದೇವರು ನನಗೆ, “ನರಪುತ್ರನೇ, ಪಟ್ಟಣದಲ್ಲಿ ಕುತಂತ್ರಗಳನ್ನು ಕಲ್ಪಿಸಿ ದುರಾಲೋಚನೆಯನ್ನು ಹೇಳಿಕೊಡುವವರು ಈ ಜನರೇ.


ತಮ್ಮ ಹಾಸಿಗೆಯಲ್ಲಿ ಮಲಗಿರುವಾಗಲೇ ಅನ್ಯಾಯವನ್ನು ಯೋಚಿಸಿ, ಕೇಡನ್ನು ಕಲ್ಪಿಸುವವರ ಗತಿಯನ್ನು ಏನು ಹೇಳಲಿ. ಉದಯದ ಬೆಳಕಿನಲ್ಲಿ ಅದನ್ನು ನಡಿಸುವರು, ಅದು ಅವರ ಕೈವಶವಷ್ಟೇ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು