ಆಗ ಹೆಸರು ಕೂಗಿದ ಪುರುಷರು ಎದ್ದು ಬಂದು ಸೆರೆಯವರಲ್ಲಿ ಬೆತ್ತಲೆಯಾದವರೆಲ್ಲರಿಗೆ ಕೊಳ್ಳೆಯಿಂದ ಉಡುವುದಕ್ಕೆ ಬಟ್ಟೆಗಳನ್ನೂ, ಕಾಲಿಗೆ ಚಪ್ಪಲಿಗಳನ್ನು ಕೊಟ್ಟರು. ಎಲ್ಲರಿಗೂ ಅನ್ನಪಾನಗಳನ್ನಿಟ್ಟು ತೈಲಹಚ್ಚಿದರು. ಬಳಲಿ ಹೋದವರನ್ನು ಕತ್ತೆಗಳ ಮೇಲೆ ಕುಳ್ಳಿರಿಸಿ, ಎಲ್ಲರನ್ನೂ ಯೆರಿಕೋವೆಂಬ ಖರ್ಜೂರ ನಗರಕ್ಕೆ ಕರೆದುಕೊಂಡು ಹೋಗಿ, ಅವರ ಬಂಧುಗಳ ಹತ್ತಿರ ಬಿಟ್ಟು, ಸಮಾರ್ಯಕ್ಕೆ ಹಿಂತಿರುಗಿ ಬಂದರು.
ತಗ್ಗು ಪ್ರದೇಶದಲ್ಲಿ ಒಟ್ಟಾಗಿ ಕೂಡಿದ್ದ ಸೊದೋಮಿನ ಅರಸನಾದ ಬೆರಗನು, ಗೊಮೋರದ ಅರಸನಾದ ಬಿರ್ಶಗನು, ಅದ್ಮಾಹದ ಅರಸನಾದ ಶಿನಾಬನು, ಚೆಬೋಯಿಮನ ಅರಸನಾದ ಶೆಮೇಬರನ, ಬೇಲಗ (ಅಂದರೆ ಚೋಗರದ) ಎಂಬ ಐದು ಅರಸರ ವಿರುದ್ಧವಾಗಿ ಯುದ್ಧ ಮಾಡಿದರು.