ಧರ್ಮೋಪದೇಶಕಾಂಡ 20:5 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20195 ಮತ್ತು ಸೈನ್ಯಾಧಿಪತಿಗಳು ಅವರಿಗೆ, “ನಿಮ್ಮಲ್ಲಿ ಯಾವನಾದರೂ ಹೊಸ ಮನೆಯನ್ನು ಕಟ್ಟಿಸಿಕೊಂಡು ಇನ್ನು ಪ್ರತಿಷ್ಠೆ ಮಾಡದಿದ್ದರೆ ಅವನು ಆ ಮನೆಗೆ ಹೋಗಲಿ, ಅವನು ಯುದ್ಧಕ್ಕೆ ಬಂದು ಸತ್ತರೆ ಮತ್ತೊಬ್ಬನು ಆ ಮನೆಯಲ್ಲಿ ಗೃಹಪ್ರವೇಶ ಮಾಡಿಕೊಳ್ಳಬಹುದು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)5 “ಮತ್ತು ಸೇನಾಧಿಪತಿಗಳು ಅವರಿಗೆ, ‘ನಿಮ್ಮಲ್ಲಿ ಯಾವನಾದರು ಹೊಸ ಮನೆಯನ್ನು ಕಟ್ಟಿಸಿಕೊಂಡು ಇನ್ನು ಗೃಹಪ್ರವೇಶಮಾಡದಿದ್ದರೆ, ಅವನು ಮನೆಗೆ ಹೋಗಲಿ; ಅವನು ಕಾಳಗದಲ್ಲಿ ಸತ್ತರೆ ಮತ್ತೊಬ್ಬನು ಆ ಮನೆಯಲ್ಲಿ ಗೃಹಪ್ರವೇಶ ಮಾಡಿಕೊಂಡಾನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)5 ಮತ್ತು ಸೈನ್ಯಾಧಿಪತಿಗಳು ಅವರಿಗೆ - ನಿಮ್ಮಲ್ಲಿ ಯಾವನಾದರೂ ಹೊಸ ಮನೆಯನ್ನು ಕಟ್ಟಿಸಿಕೊಂಡು ಇನ್ನೂ ಗೃಹಪ್ರವೇಶ ಮಾಡದಿದ್ದರೆ ಅವನು ಮನೆಗೆ ಹೋಗಲಿ; ಅವನು ಕಾಳಗದಲ್ಲಿ ಸತ್ತರೆ ಮತ್ತೊಬ್ಬನು ಆ ಮನೆಯಲ್ಲಿ ಗೃಹಪ್ರವೇಶಮಾಡಿಕೊಂಡಾನು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್5 “ಆ ಲೇವಿಯ ಅಧಿಕಾರಿಗಳು ಸೈನಿಕರಿಗೆ, ‘ನಿಮ್ಮಲ್ಲಿ ಯಾರಾದರೂ ಹೊಸಮನೆಯನ್ನು ಕಟ್ಟಿ ಗೃಹಪ್ರವೇಶ ಮಾಡಿರದಿದ್ದರೆ ಅವನು ತನ್ನ ಮನೆಗೆ ಹೋಗಲಿ. ಒಂದುವೇಳೆ ಅವನು ರಣರಂಗದಲ್ಲಿ ಸತ್ತರೆ ಇನ್ನೊಬ್ಬನು ಅವನ ಮನೆಗೆ ಸೇರಿಕೊಳ್ಳಬಹುದು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ5 ಮತ್ತು ಅಧಿಕಾರಿಗಳು ಅವರಿಗೆ ಹೀಗೆ ಹೇಳಬೇಕು, “ನಿಮ್ಮಲ್ಲಿ ಯಾವನಾದರು ಹೊಸ ಮನೆಯನ್ನು ಕಟ್ಟಿ, ಗೃಹ ಪ್ರತಿಷ್ಠೆ ಇನ್ನು ಮಾಡದಿದ್ದರೆ, ಅವನು ತನ್ನ ಮನೆಗೆ ಹೋಗಲಿ. ಯುದ್ಧದಲ್ಲಿ ಸತ್ತರೆ ಬೇರೊಬ್ಬನು ಆ ಮನೆಯನ್ನು ಸೇರಿಕೊಂಡಾನು. ಅಧ್ಯಾಯವನ್ನು ನೋಡಿ |