ದಾನಿಯೇಲ 8:12 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201912 ಆತನ ಪವಿತ್ರ ಸ್ಥಾನವನ್ನು ಕೆಡವಿ ನಿತ್ಯ ಹೋಮವನ್ನು ಅಡಗಿಸುವುದಕ್ಕೆ ನೀಚತನದಿಂದ ಒಂದು ಸೈನ್ಯವನ್ನಿಳಿಸಿ ಸತ್ಯಧರ್ಮವನ್ನು ನೆಲಕ್ಕೆ ದೊಬ್ಬಿ, ತನ್ನ ಇಷ್ಟಾರ್ಥವನ್ನು ನೆರವೇರಿಸಿಕೊಂಡು ವೃದ್ಧಿಗೆ ಬಂತು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)12 ಆತನ ಪವಿತ್ರಾಲಯವನ್ನು ಕೆಡವಿತು. ಅನುದಿನದ ಬಲಿಯರ್ಪಣೆಯನ್ನು ಅಡಗಿಸುವುದಕ್ಕಾಗಿ ನೀಚತನದಿಂದ ಒಂದು ಸೈನ್ಯವನ್ನೆಬ್ಬಿಸಿತು. ಸತ್ಯಧರ್ಮವನ್ನು ನೆಲಕ್ಕೆ ದೊಬ್ಬಿತು. ತನ್ನ ಇಷ್ಟಾರ್ಥವನ್ನು ಈಡೇರಿಸಿಕೊಂಡು ವೃದ್ಧಿಗೆ ಬಂದಿತು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)12 ಆತನ ಪವಿತ್ರಸ್ಥಾನವನ್ನು ಕೆಡವಿ ನಿತ್ಯಹೋಮವನ್ನು ಅಡಗಿಸುವದಕ್ಕೆ ನೀಚತನದಿಂದ ಒಂದು ಸೈನ್ಯವನ್ನಿಳಿಸಿ ಸತ್ಯಧರ್ಮವನ್ನು ನೆಲಕ್ಕೆ ದೊಬ್ಬಿ ತನ್ನ ಇಷ್ಟಾರ್ಥವನ್ನು ನೆರವೇರಿಸಿಕೊಂಡು ವೃದ್ಧಿಗೆ ಬಂತು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್12 ಆ ಚಿಕ್ಕ ಕೊಂಬು ನಿತ್ಯಹೋಮಗಳನ್ನು ತಡೆಯುವ ಪಾಪವನ್ನು ಮಾಡಿತು. ಅದು ಒಳ್ಳೆಯತನವನ್ನು (ಸತ್ಯ, ಧರ್ಮವನ್ನು) ನೆಲಕ್ಕೆ ತಳ್ಳಿತು. ಇದೆಲ್ಲವನ್ನು ಮಾಡಿ ಆ ಚಿಕ್ಕ ಕೊಂಬು ತನ್ನ ಇಷ್ಟಾರ್ಥವನ್ನು ಸಾಧಿಸುವದರಲ್ಲಿ ಜಯ ಪಡೆಯಿತು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ12 ಪ್ರತಿದಿನ ಯಜ್ಞದ ಸಂಗಡ ಯೆಹೋವ ದೇವರ ಸೈನ್ಯವೂ ಸಹ ಅಪರಾಧದ ನಿಮಿತ್ತವಾಗಿ ಅದಕ್ಕೆ ಕೊಡಲಾಯಿತು. ಅದು ಸತ್ಯವನ್ನು ನೆಲಕ್ಕೆ ಕೆಡವಿ, ಇಷ್ಟಾರ್ಥವನ್ನು ಪೂರೈಸಿಕೊಂಡು ಅನುಕೂಲ ಪಡೆಯಿತು, ವೃದ್ಧಿಗೆ ಬಂದಿತು. ಅಧ್ಯಾಯವನ್ನು ನೋಡಿ |