ದಾನಿಯೇಲ 7:23 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201923 ಆಗ ಅವನು ನನಗೆ, “ಆ ನಾಲ್ಕನೆಯ ಮೃಗವು ಲೋಕದಲ್ಲಿ ಉಂಟಾಗುವ ನಾಲ್ಕನೆಯ ರಾಜ್ಯ; ಅದು ಉಳಿದ ರಾಜ್ಯಗಳಿಗಿಂತ ವಿಲಕ್ಷಣವಾಗಿ ಲೋಕವನ್ನೆಲ್ಲಾ ನುಂಗಿ ತುಳಿದು ಚೂರುಚೂರು ಮಾಡುವುದು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)23 ಆಗ ಅವನು ನನಗೆ ಕೊಟ್ಟ ವಿವರ ಇದು: “ಆ ನಾಲ್ಕನೆಯ ಮೃಗ ಲೋಕದಲ್ಲಿ ತಲೆಯೆತ್ತುವ ನಾಲ್ಕನೆಯ ರಾಜ್ಯ. ಅದು ಮಿಕ್ಕ ರಾಜ್ಯಗಳಿಗಿಂತ ವಿಲಕ್ಷಣವಾದುದು. ಲೋಕವನ್ನೇ ಕಾಲಿನಿಂದ ತುಳಿದು ಚೂರುಚೂರು ಮಾಡಿ ಕಬಳಿಸುವುದು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)23 ಆಗ ಅವನು ನನಗೆ - ಆ ನಾಲ್ಕನೆಯ ಮೃಗವು ಲೋಕದಲ್ಲಿ ಉಂಟಾಗುವ ನಾಲ್ಕನೆಯ ರಾಜ್ಯ; ಅದು ವಿುಕ್ಕ ರಾಜ್ಯಗಳಿಗಿಂತ ವಿಲಕ್ಷಣವಾಗಿ ಲೋಕವನ್ನೆಲ್ಲಾ ನುಂಗಿ ತುಳಿದು ಚೂರುಚೂರು ಮಾಡುವದು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್23 “ಅವನು ನನಗೆ ಈ ರೀತಿ ವಿವರಿಸಿದನು: ‘ನಾಲ್ಕನೆಯ ಮೃಗವು ಈ ಲೋಕದಲ್ಲಿ ಉಂಟಾಗುವ ನಾಲ್ಕನೆಯ ರಾಜ್ಯ. ಇದು ಬೇರೆಲ್ಲ ರಾಜ್ಯಗಳಿಂದ ಭಿನ್ನವಾಗಿರುತ್ತದೆ. ಆ ನಾಲ್ಕನೆಯ ರಾಜ್ಯವು ಜಗತ್ತಿನ ಜನರನ್ನೆಲ್ಲ ನಾಶಗೊಳಿಸುವುದು. ಇದು ಜಗತ್ತಿನ ಎಲ್ಲ ರಾಷ್ಟ್ರಗಳನ್ನು ತುಳಿದು ಪುಡಿಪುಡಿ ಮಾಡುವುದು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ23 “ಆಗ ಅವನು ನನಗೆ: ‘ಆ ನಾಲ್ಕನೆಯ ಮೃಗವು ಭೂಮಿಯ ಮೇಲಿರುವ ನಾಲ್ಕನೆಯ ರಾಜ್ಯವಾಗುವುದು. ಅದು ಎಲ್ಲಾ ರಾಜ್ಯಗಳಿಗಿಂತ ವ್ಯತ್ಯಾಸವಾಗಿಯೂ, ಭೂಮಿಯನ್ನೆಲ್ಲಾ ತುಳಿದು ತುಂಡುತುಂಡು ಮಾಡುವಂಥಾದ್ದಾಗಿಯೂ ಇರುವುದು. ಅಧ್ಯಾಯವನ್ನು ನೋಡಿ |
ನಾನು ರಾತ್ರಿ ಕಂಡ ಕನಸಿನಲ್ಲಿ ಸ್ವಲ್ಪ ಹೊತ್ತಿನ ಮೇಲೆ ಆಹಾ, ನಾಲ್ಕನೆಯ ಮೃಗವು ಕಾಣಿಸಿತು; ಅದು ಭಯಂಕರವಾಗಿತ್ತು, ಹೆದರಿಸುವಂಥದಾಗಿತ್ತು, ಅಧಿಕ ಬಲವುಳ್ಳದ್ದಾಗಿತ್ತು. ಅದಕ್ಕೆ ಕಬ್ಬಿಣದ ದೊಡ್ಡ ಹಲ್ಲುಗಳಿದ್ದವು. ಅದು ನುಂಗುತ್ತಾ, ಚೂರುಚೂರು ಮಾಡುತ್ತಾ ಉಳಿದದ್ದನ್ನು ಕಾಲುಗಳಿಂದ ತುಳಿಯುತ್ತಾ ಇತ್ತು. ಅದು ಹಿಂದಿನ ಎಲ್ಲಾ ಮೃಗಗಳಿಗಿಂತ ವಿಲಕ್ಷಣವಾಗಿತ್ತು. ಅದಕ್ಕೆ ಹತ್ತು ಕೊಂಬುಗಳಿದ್ದವು.