ದಾನಿಯೇಲ 6:8 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20198 ರಾಜನೇ, ಈಗ ನೀನು ಈ ನಿಬಂಧನೆಯನ್ನು ವಿಧಿಸಿ, ಇದು ಮೇದ್ಯರ ಮತ್ತು ಪಾರಸಿಯರ ಧರ್ಮವಿಧಿಗಳಂತೆ ಎಂದಿಗೂ ರದ್ದಾಗದ ಧರ್ಮವಿಧಿಗಳ ಪ್ರಕಾರ ಬೇರೆಯಾಗದಂತೆ ಶಾಸನಕ್ಕೆ ಹಸ್ತಾಕ್ಷರ ಮಾಡು” ಎಂದು ಬಿನ್ನವಿಸಿದರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)8 ರಾಜರೇ, ಈ ಶಾಸನಕ್ಕೆ ನೀವು ಇದೀಗಲೇ ಹಸ್ತಾಕ್ಷರಗಳಿಂದ ರುಜುಹಾಕಬೇಕು. ಆಗ ಅದು ಮೇದ್ಯದ ಮತ್ತು ಪರ್ಷಿಯದ ಧರ್ಮವಿಧಿಗಳಂತೆ ಎಂದಿಗೂ ರದ್ದಾಗದೆ ಊರ್ಜಿತವಾಗುವುದು,” ಎಂದು ವಿನಂತಿಸಿದರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)8 ರಾಜನೇ, ಈಗ ನೀನು ಈ ನಿಬಂಧನೆಯನ್ನು ವಿಧಿಸಿ ಇದು ನಿಂತುಹೋಗದೆ ಮೇದ್ಯಯರ ಮತ್ತು ಪಾರಸಿಯರ ಎಂದಿಗೂ ರದ್ದಾಗದ ಧರ್ಮವಿಧಿಗಳ ಪ್ರಕಾರ ಊರ್ಜಿತವಾಗುವಂತೆ ಶಾಸನಕ್ಕೆ ಹಸ್ತಾಕ್ಷರಮಾಡು ಎಂದು ಬಿನ್ನವಿಸಲು ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್8 ಅರಸನೇ, ಈ ನಿಬಂಧನೆಯನ್ನು ಬರೆದ ಕಾಗದಕ್ಕೆ ನಿನ್ನ ಹಸ್ತಾಕ್ಷರ ಹಾಕಿ ಅದನ್ನು ಶಾಸನವನ್ನಾಗಿ ಮಾಡು. ಹೀಗೆ ಮಾಡಿದರೆ ಶಾಸನವನ್ನು ಬದಲಾಯಿಸಲಾಗುವುದಿಲ್ಲ. ಏಕೆಂದರೆ ಮೇದ್ಯಯರ ಮತ್ತು ಪಾರಸಿಯರ ಶಾಸನಗಳು ಎಂದಿಗೂ ರದ್ದಾಗುವದಿಲ್ಲ ಮತ್ತು ಅವುಗಳನ್ನು ಬದಲಾಯಿಸಲಾಗುವುದಿಲ್ಲ.” ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ8 ರಾಜನೇ, ಈಗ ನೀನು ಈ ನಿಬಂಧನೆಯನ್ನು ವಿಧಿಸಿ, ಇದು ಬದಲಾಗದ ಮೇದ್ಯರ ಮತ್ತು ಪಾರಸಿಯರ ನಿಯಮಗಳ ಪ್ರಕಾರ ಇದು ರದ್ದಾಗದಂತೆ ನಿರ್ಣಯವನ್ನು ರೂಪಿಸಿ, ಶಾಸನಕ್ಕೆ ರುಜುಹಾಕು,” ಎಂದು ವಿನಂತಿಸಿದರು. ಅಧ್ಯಾಯವನ್ನು ನೋಡಿ |
ಅವರು ರಾಜನ ಬಳಿಗೆ ಬಂದು ರಾಜಾಜ್ಞೆಯ ಪ್ರಸ್ತಾಪವನ್ನೆತ್ತಿ, “ರಾಜನೇ, ಯಾರಾದರೂ ಮೂವತ್ತು ದಿನಗಳ ತನಕ ನಿನ್ನ ಹೊರತು ಬೇರೆ ಯಾವ ದೇವರಿಗಾಗಲಿ, ಮನುಷ್ಯನಿಗಾಗಲಿ ಪ್ರಾರ್ಥನೆವಿಜ್ಞಾಪನೆ ಮಾಡಿದರೆ ಅವನು ಸಿಂಹಗಳ ಗವಿಯಲ್ಲಿ ಹಾಕಲ್ಪಡಬೇಕು ಎಂಬ ನಿಬಂಧನೆಗೆ ರುಜು ಹಾಕಿದ್ದೀಯಲ್ಲಾ” ಎಂದು ಕೇಳಲು, ರಾಜನು, “ಹೌದು, ಮೇದ್ಯರ ಮತ್ತು ಪಾರಸಿಯರ ರದ್ದಾಗದ ಧರ್ಮವಿಧಿಗಳಂತೆ ಇದು ಸ್ಥಿರವಾದ ನಿಬಂಧನೆ” ಎಂದು ಉತ್ತರಕೊಟ್ಟನು.
ಮೊದಲನೆಯ ತಿಂಗಳಿನ ಹದಿಮೂರನೆಯ ದಿನದಲ್ಲಿ ರಾಜಲೇಖಕರು ಕೂಡಿ ಬರಬೇಕು ಎಂದು ಅಪ್ಪಣೆಯಾಯಿತು. ಅವರು ಹಾಮಾನನ ಆಜ್ಞಾನುಸಾರ ಉಪರಾಜರಿಗೂ, ಆಯಾ ಸಂಸ್ಥಾನಗಳ ಅಧಿಕಾರಿಗಳಿಗೂ, ಆಯಾ ಜನಾಂಗಗಳ ಅಧಿಪತಿಗಳಿಗೂ ಪತ್ರಗಳನ್ನು ಬರೆದರು. ಆಯಾ ಸಂಸ್ಥಾನಗಳ ಬರಹದಲ್ಲಿಯೂ ಆಯಾ ಜನಾಂಗಗಳ ಭಾಷೆಯಲ್ಲಿಯೂ ಇದ್ದ ಆ ಪತ್ರಗಳು ಅರಸನಾದ ಅಹಷ್ವೇರೋಷನ ಹೆಸರಿನಲ್ಲೇ ಲಿಖಿತವಾಗಿದ್ದವು; ಅವುಗಳಿಗೆ ರಾಜಮುದ್ರೆಯನ್ನು ಹಾಕಲಾಗಿತ್ತು.