Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ದಾನಿಯೇಲ 5:20 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

20 “ಹೀಗೆ ಅವನ ಹೃದಯವು ಉಬ್ಬಿ, ಅವನ ಸ್ವಭಾವವು ಕಠಿಣವಾಗಿ ಅವನಿಗೆ ಸೊಕ್ಕೇರಲು ಅವನನ್ನು ರಾಜಾಸನದಿಂದ ತಳ್ಳಿ, ಮಾನವನ್ನು ತೆಗೆದುಬಿಟ್ಟರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

20 ಹಾಗೆ ಅವರ ಎದೆ ಗರ್ವದಿಂದ ಉಬ್ಬಿಹೋಯಿತು. ಮನಸ್ಸಿಗೆ ಸೊಕ್ಕೇರಿಹೋಯಿತು. ಅವರನ್ನೂ ರಾಜಾಸ್ಥಾನದಿಂದ ತಳ್ಳಲಾಯಿತು. ಮಾನ ಕಳೆದುಹೋಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

20 ಹೀಗೆ ಅವನ ಹೃದಯವು ಉಬ್ಬಿ ಅವನ ಸ್ವಭಾವವು ಜಡವಾಗಿ ಅವನಿಗೆ ಸೊಕ್ಕೇರಲು ಅವನನ್ನು ರಾಜಾಸನದಿಂದ ತಳ್ಳಿ ಮಾನವನ್ನು ತೆಗೆದುಬಿಟ್ಟನು;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

20 “ಆದರೆ ನೆಬೂಕದ್ನೆಚ್ಚರನು ಬಹಳ ಅಹಂಕಾರಿಯಾಗಿದ್ದನು ಮತ್ತು ಹಟಮಾರಿಯಾಗಿದ್ದನು. ಆದ್ದರಿಂದ ಅವನ ಅಧಿಕಾರವನ್ನು ಕಸಿದುಕೊಳ್ಳಲಾಯಿತು. ರಾಜಸಿಂಹಾಸನದಿಂದ ಇಳಿಸಿ ಅವನ ಎಲ್ಲ ಘನತೆಗೌರವಗಳನ್ನು ಕಿತ್ತುಕೊಳ್ಳಲಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

20 ಆದರೆ ಅವನ ಹೃದಯವು ಹೆಮ್ಮೆಯಿಂದ ಉಬ್ಬಿಕೊಂಡಾಗ ಮತ್ತು ಅವನ ಹೃದಯವು ಗಟ್ಟಿಯಾದಾಗ, ಅವನನ್ನು ಸಿಂಹಾಸನದಿಂದ ತೆಗೆದುಹಾಕಲಾಯಿತು ಮತ್ತು ಅವನ ಪ್ರತಿಷ್ಠೆಯನ್ನು ಕಿತ್ತುಕೊಳ್ಳಲಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ದಾನಿಯೇಲ 5:20
27 ತಿಳಿವುಗಳ ಹೋಲಿಕೆ  

ನಿಮ್ಮಲ್ಲಿ ಒಬ್ಬರಾದರೂ ಪಾಪದಲ್ಲಿ ಸಿಕ್ಕಿ ಮೋಸಹೋಗಿ ಕಠಿಣರಾಗದಂತೆ, ‘ಇಂದು’ ಎಂದು ಕರೆಯಲ್ಪಡುವ ಅವಕಾಶ ಇನ್ನೂ ಇರುವಾಗಲೇ, ಪ್ರತಿದಿನವೂ ಒಬ್ಬರನ್ನೊಬ್ಬರು ಪ್ರೋತ್ಸಾಹಿಸಿರಿ.


ರಾಜನಿಗೂ ಮತ್ತು ರಾಜಮಾತೆಗೂ, “ನೆಲದಲ್ಲಿ ಕುಳಿತುಕೊಳ್ಳಿರಿ, ನಿಮ್ಮ ಅಂದದ ಕಿರೀಟವು ನಿಮ್ಮ ತಲೆಯಿಂದ ಕೆಳಗೆ ಬಿದ್ದಿದೆ” ಎಂದು ಹೇಳಿರಿ.


ಇದಲ್ಲದೆ, ಅರಸನಾದ ನೆಬೂಕದ್ನೆಚ್ಚರನಿಗೆ ಅಧೀನನಾಗಿರುತ್ತೇನೆ ಎಂದು ದೇವರ ಮೇಲೆ ಆಣೆಯಿಟ್ಟು ಪ್ರಮಾಣಮಾಡಿಸಿದ್ದ ನೆಬೂಕದ್ನೆಚ್ಚರನಿಗೆ ವಿರುದ್ಧವಾಗಿ ತಿರುಗಿಬಿದ್ದದ್ದಲ್ಲದೆ ಇಸ್ರಾಯೇಲ್ ದೇವರಾದ ಯೆಹೋವನ ಕಡೆಗೆ ತಿರುಗಿಕೊಳ್ಳದೆ ಹಠಮಾರಿಯಾಗಿ ತನ್ನ ಮನಸ್ಸನ್ನು ಕಠಿಣ ಮಾಡಿಕೊಂಡನು.


ಆದರೆ ಅವರು ದೇವರಾದ ಯೆಹೋವನನ್ನು ನಂಬದೆ, ಆತನ ಆಜ್ಞೆಗಳಿಗೆ ಮಣಿಯದೆ ಇದ್ದ ತಮ್ಮ ಹಿರಿಯರಂತೆ ಯೆಹೋವನ ಮಾತಿಗೆ ಕಿವಿಗೊಡದೆ ಹೋದರು.


ನೀನು ನನ್ನ ಜನರನ್ನು ಇನ್ನೂ ಹೋಗಗೊಡಿಸದೆ ಅವರ ಮುಂದೆ, ಅಡ್ಡಿ ಆತಂಕಗಳನ್ನು ಒಡ್ಡುತ್ತಿರುವೆಯಾ?


ಗರ್ವದಿಂದ ಭಂಗ, ಉಬ್ಬಿನಿಂದ ದೊಬ್ಬು.


ಇವನು ನೀತಿವಂತನೆಂದು ನಿರ್ಣಯಿಸಲ್ಪಟ್ಟವನಾಗಿ ತನ್ನ ಮನೆಗೆ ಹೋದನು. ಆ ಫರಿಸಾಯನು ಅಂಥವನಾಗಿ ಹೋಗಲಿಲ್ಲ ಎಂದು ನಿಮಗೆ ಹೇಳುತ್ತೇನೆ. ತನ್ನನ್ನು ಹೆಚ್ಚಿಸಿಕೊಳ್ಳುವ ಪ್ರತಿಯೊಬ್ಬನು ತಗ್ಗಿಸಲ್ಪಡುವನು, ತನ್ನನ್ನು ತಗ್ಗಿಸಿಕೊಳ್ಳುವವನು ಹೆಚ್ಚಿಸಲ್ಪಡುವನು” ಅಂದನು.


“ಇಸ್ರಾಯೇಲರ ದೇವರೂ ಸೇನಾಧೀಶ್ವರನೂ ಆದ ಯೆಹೋವನು ಇಂತೆನ್ನುತ್ತಾನೆ, ಆಹಾ, ಈ ಪಟ್ಟಣದವರೂ ಮತ್ತು ಇದರ ಸುತ್ತಣ ಎಲ್ಲಾ ಊರುಗಳವರೂ ನನ್ನ ಮಾತುಗಳನ್ನೂ ಕೇಳದೆ, ತಮ್ಮ ಮನಸ್ಸನ್ನು ಕಠಿಣಮಾಡಿಕೊಂಡ ಕಾರಣ, ನಾನು ಈ ಪಟ್ಟಣಕ್ಕೆ ಕೊಟ್ಟ ಶಾಪದ ಕೇಡನ್ನೆಲ್ಲಾ ಇವರಿಗೆ ಬರಮಾಡುವೆನು” ಎಂದು ಸಮಸ್ತ ಜನರಿಗೆ ಸಾರಿದನು.


ಅಹಂಕಾರಿಗಳೆಲ್ಲಾ ಯೆಹೋವನಿಗೆ ಅಸಹ್ಯ, ಅವರಿಗೆ ದಂಡನೆ ಖಂಡಿತ.


ಈಗ ನೆಬೂಕದ್ನೆಚ್ಚರನಾದ ನಾನು ಪರಲೋಕ ರಾಜನನ್ನು ಹೊಗಳಿ, ಕೊಂಡಾಡಿ ಕೀರ್ತಿಸುತ್ತೇನೆ. ಆತನ ಕಾರ್ಯಗಳೆಲ್ಲಾ ಸತ್ಯ, ಆತನ ಮಾರ್ಗಗಳೆಲ್ಲಾ ನ್ಯಾಯ; ಸೊಕ್ಕಿನಿಂದ ನಡೆಯುವವರನ್ನು ತಗ್ಗಿಸಬಲ್ಲನು.


ಯೆಹೋವನು ಇಂತೆನ್ನುತ್ತಾನೆ, “ಐಗುಪ್ತಕ್ಕೆ ಆಧಾರವಾದವರು ಬೀಳುವರು, ಅದರ ಶಕ್ತಿಯ ಅಹಂಕಾರವು ಇಳಿದು ಹೋಗುವುದು; ಅಲ್ಲಿನ ಜನರು ಮಿಗ್ದೋಲಿನಿಂದ ಸೆವೇನೆಯವರೆಗೆ ಖಡ್ಗದಿಂದ ಹತರಾಗುವರು” ಇದು ಕರ್ತನಾದ ಯೆಹೋವನ ನುಡಿ.


ಯುವತಿಯೇ, ದೀಬೋನ್ ಪುರಿಯೇ, ನಿನ್ನ ಮಹಿಮೆಯ ಪದವಿಯಿಂದ ಕೆಳಕ್ಕಿಳಿದು ಬಾಯಾರಿದವಳಾಗಿ ಕುಳಿತುಕೋ! ಮೋವಾಬನ್ನು ಹಾಳುಮಾಡುವವನು ನಿನ್ನ ವಿರುದ್ಧವಾಗಿ ಬಂದು ನಿನ್ನ ಕೋಟೆಕೊತ್ತಲಗಳನ್ನು ಕೆಡವಿದ್ದಾನಲ್ಲಾ.


ಯುವತಿಯೇ, ಬಾಬೆಲ್ ಪುರಿಯೇ, ಕೆಳಕ್ಕಿಳಿದು ಧೂಳಿನಲ್ಲಿ ಕುಳಿತುಕೋ, ಕಸ್ದೀಯರ ಯುವತಿಯೇ, ಸಿಂಹಾಸನರಹಿತಳಾಗಿ ನೆಲದ ಮೇಲೆ ಕುಳಿತುಕೋ! ನಿನ್ನನ್ನು ಇನ್ನು ಕೋಮಲೆ ಮತ್ತು ಸುಕುಮಾರಿ ಎಂದು ಕರೆಯುವುದಿಲ್ಲ.


ಐಗುಪ್ತರಂತೆಯೂ ಫರೋಹನಂತೆಯೂ ನಿಮ್ಮ ಹೃದಯಗಳನ್ನು ಕಠಿಣಪಡಿಸಿಕೊಳ್ಳುವುದೇಕೆ? ಇಸ್ರಾಯೇಲ್ಯರನ್ನು ಕಳುಹಿಸಲೊಲ್ಲದ ಇವರನ್ನು ಯೆಹೋವನು ಎಷ್ಟೋ ವಿಧವಾಗಿ ಬಾಧಿಸಬೇಕಾಯಿತಲ್ಲಾ.


ಯೆಹೋವನು ತನ್ನ ಜನರನ್ನು ಅವರ ಕೈಯಿಂದ ಬಿಡಿಸಿ, ಆ ಐಗುಪ್ತ್ಯರು ಯಾವ ವಿಷಯದಲ್ಲಿ ಗರ್ವಪಡುತ್ತಿದ್ದರೋ, ಆ ವಿಷಯದಲ್ಲಿ ಅವರನ್ನು ತಗ್ಗಿಸಿದ್ದರಿಂದ ಯೆಹೋವನು ಎಲ್ಲಾ ದೇವರುಗಳಿಗಿಂತಲೂ ದೊಡ್ಡವನೆಂದು ಈಗ ತಿಳಿದುಕೊಂಡಿದ್ದೇನೆ” ಅಂದನು.


ಹೀಗಿರಲು ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ಆ ವೃಕ್ಷವು ಬಹಳ ಎತ್ತರವಾಗಿ ಬೆಳೆದು, ತನ್ನ ತುದಿ ಮೋಡಗಳನ್ನು ಮುಟ್ಟುವಷ್ಟು ನೀಳವಾದ ವಿಷಯವಾಗಿ ಉಬ್ಬಿಕೊಂಡಿತ್ತು.


ಆ ಹೋತವು ತನ್ನನ್ನು ಬಹಳವಾಗಿ ಹೆಚ್ಚಿಸಿಕೊಂಡಿತು, ಆದರೆ ಅದು ಪ್ರಾಬಲ್ಯಕ್ಕೆ ಬಂದಾಗಲೇ ಅದರ ದೊಡ್ಡ ಕೊಂಬು ಮುರಿದು ಹೋಯಿತು. ಅದರ ಸ್ಥಾನದಲ್ಲಿ ನಾಲ್ಕು ಅದ್ಭುತವಾದ ಕೊಂಬುಗಳು ಮೊಳೆತು ಚತುರ್ದಿಕ್ಕುಗಳಿಗೆ ಚಾಚಿಕೊಂಡವು.


“ರಾಜನು ತನ್ನ ಇಚ್ಛಾನುಸಾರ ನಡೆದು ತಾನು ಎಲ್ಲಾ ದೇವರುಗಳಿಗಿಂತ ದೊಡ್ಡವನೆಂದು ತನ್ನನ್ನು ಹೆಚ್ಚಿಸಿಕೊಂಡು ಗರ್ವದಿಂದ ಉಬ್ಬಿ, ದೇವಾಧಿ ದೇವನನ್ನು ಮಿತಿಮೀರಿ ದೂಷಿಸಿ ನಿಮ್ಮ ಮೇಲಿನ ದೈವ ಕೋಪವು ತೀರುವ ತನಕ ವೃದ್ಧಿಯಾಗಿರುವನು. ದೈವಸಂಕಲ್ಪವು ನೆರವೇರಲೇ ಬೇಕು.


ಫರೋಹನು ವಿಚಾರಿಸಿದಾಗ, ಇಸ್ರಾಯೇಲ್ಯರ ಪಶುಗಳಲ್ಲಿ ಒಂದೂ ಸಾಯಲಿಲ್ಲವೆಂಬುದನ್ನು ತಿಳಿದುಕೊಂಡನು. ಆದರೂ ಫರೋಹನ ಹೃದಯವು ಕಠಿಣವಾಗಿದ್ದರಿಂದ ಆ ಜನರಿಗೆ ಹೋಗುವುದಕ್ಕೆ ಅಪ್ಪಣೆಕೊಡಲಿಲ್ಲ.


ಆದರೆ ಹಿಜ್ಕೀಯನು ಈ ಉಪಕಾರಕ್ಕೆ ತಕ್ಕಂತೆ ನಡೆಯದೆ ಅಹಂಕಾರಿಯಾದನು. ಆದುದರಿಂದ ಯೆಹೂದದ ಮೇಲೆಯೂ ಯೆರೂಸಲೇಮಿನವರ ಮೇಲೆಯೂ ದೇವರ ಕೋಪವುಂಟಾಯಿತು.


ವೃಕ್ಷದ ಬುಡದ ಮೋಟನ್ನು ಉಳಿಸಿರಿ ಎಂದು ಅಪ್ಪಣೆಯಾಯಿತಲ್ಲಾ; ಇದರ ತಾತ್ಪರ್ಯವೇನೆಂದರೆ ಪರಲೋಕಕ್ಕೆ ಸರ್ವಾಧಿಕಾರ ಉಂಟೆಂಬುವುದನ್ನು ನೀನು ತಿಳಿದುಕೊಂಡ ನಂತರ ನಿನ್ನ ರಾಜ್ಯವು ನಿನಗೆ ಸ್ಥಿರವಾಗುವುದು ಎಂಬುವುದೇ.


ಇದೆಲ್ಲಾ ರಾಜನಾದ ನೆಬೂಕದ್ನೆಚ್ಚರನ ಅನುಭವಕ್ಕೆ ಬಂತು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು