ದಾನಿಯೇಲ 11:35 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201935 ಜ್ಞಾನಿಗಳಲ್ಲಿಯೂ ಕೆಲವರು ಅಂತ್ಯಕಾಲದವರೆಗೆ ಬೀಳುತ್ತಿರುವರು. ಆದುದರಿಂದ ಜನರು ಶೋಧಿಸಲ್ಪಟ್ಟು, ಶುದ್ಧಿಹೊಂದಿ ಶುಭ್ರರಾಗುವರು. ಅಂತ್ಯವು ನಿಶ್ಚಿತಕಾಲದಲ್ಲೇ ಆಗುವುದು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)35 ಅಂತ್ಯಕಾಲದವರೆಗೆ ಬುದ್ಧಿವಂತ ನಾಯಕರಲ್ಲಿ ಕೆಲವರು ಸಾವಿಗೆ ತುತ್ತಾಗುವರು. ಇದರಿಂದ ಜನರು ಶೋಧಿಸಲ್ಪಟ್ಟು, ಶುದ್ಧಿಹೊಂದಿ ಶುಭ್ರರಾಗುವರು. ಅಂತ್ಯವು ಕ್ಲುಪ್ತಕಾಲದಲ್ಲೇ ಬರುವುದು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)35 ಜ್ಞಾನಿಗಳಲ್ಲಿಯೂ ಕೆಲವರು ಅಂತ್ಯಕಾಲದವರೆಗೆ ಬೀಳುತ್ತಿರುವರು; ಅದರಿಂದ ಜನರು ಶೋಧಿಸಲ್ಪಟ್ಟು ಶುದ್ಧಹೊಂದಿ ಶುಭ್ರರಾಗುವರು; ಅಂತ್ಯವು ಕ್ಲುಪ್ತಕಾಲದಲ್ಲೇ ಆಗುವದು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್35 ಜ್ಞಾನಿಗಳಾದ ಕೆಲವು ಯೆಹೂದ್ಯರು ತಪ್ಪುಗಳನ್ನು ಮಾಡಿ ಬಿದ್ದುಹೋಗುವರು. ಆದರೆ ಹಿಂಸೆ ನಡೆಯಬೇಕು. ಏಕೆಂದರೆ ಅಂತ್ಯಕಾಲ ಬರುವವರೆಗೆ ಅವರು ದೃಢಚಿತ್ತರೂ ಶುದ್ಧರೂ ನಿಷ್ಕಳಂಕರೂ ಆಗಬೇಕು. ಸರಿಯಾದ ಸಮಯಕ್ಕೆ ಅಂತ್ಯಕಾಲ ಬರುವದು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ35 ಇದಲ್ಲದೆ ಅಂತ್ಯಕಾಲದವರೆಗೆ ಜ್ಞಾನಿಗಳನ್ನು ಶೋಧಿಸುವುದಕ್ಕೂ ಅದರಲ್ಲಿ ಅನೇಕರು ಬೀಳುವರು; ಏಕೆಂದರೆ ಇದು ನೇಮಕವಾದ ಸಮಯದಲ್ಲಿ ಬರುವುದು. ಅಧ್ಯಾಯವನ್ನು ನೋಡಿ |