Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ತೀತನಿಗೆ 3:13 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

13 ನ್ಯಾಯಶಾಸ್ತ್ರಿಯಾದ ಜೇನನನ್ನೂ ಮತ್ತು ಅಪೊಲ್ಲೋಸನನ್ನೂ ಜಾಗ್ರತೆಯಾಗಿ ಕಳುಹಿಸಿಕೊಡು; ಅವರಿಗೇನೂ ಕೊರತೆಯಾಗಬಾರದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

13 ಧರ್ಮಶಾಸ್ತ್ರಜ್ಞನಾದ ಜೇನನಿಗೂ ಅಪೊಲೋಸನಿಗೂ ಅವರ ಪ್ರಯಾಣಕ್ಕೆ ಬೇಕಾದ ಸಹಾಯಮಾಡು. ಅವರಿಗೆ ಏನು ಕೊರತೆಯಾಗದಂತೆ ನೋಡಿಕೋ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

13 ನ್ಯಾಯಶಾಸ್ತ್ರಿ ಜೇನನನ್ನೂ ಅಪೊಲ್ಲೋಸನನ್ನೂ ಜಾಗ್ರತೆಯಾಗಿ ಸಾಗಕಳುಹಿಸು; ಅವರಿಗೇನೂ ಕೊರತೆಯಾಗಬಾರದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

13 ವಕೀಲನಾದ ಜೇನನೂ ಅಪೊಲ್ಲೋಸನೂ ಅಲ್ಲಿಂದ ಪ್ರಯಾಣ ಮಾಡುತ್ತಾರೆ. ಅವರ ಪ್ರಯಾಣಕ್ಕೆ ನಿನ್ನಿಂದ ಸಾಧ್ಯವಾದಷ್ಟು ಸಹಾಯಮಾಡು. ಅವರಿಗೆ ಯಾವ ಕೊರತೆಯೂ ಆಗದಂತೆ ನೋಡಿಕೊ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

13 ನಿಯಮ ಪಂಡಿತನಾದ ಜೇನನನ್ನೂ ಅಪೊಲ್ಲೋಸನನ್ನೂ ಜಾಗ್ರತೆಯಾಗಿ ಸಾಗಕಳುಹಿಸು. ಅವರಿಗೇನೂ ಕೊರತೆಯಾಗಬಾರದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

13 ವಕಿಲ್ ಝೆನಾಕ್ ಅನಿ ಅಪೊಲ್ಲೊಕ್ ವಾಟೆರ್ ಜಾತಾನಾ ಪಾಜೆ ಹೊತಲಿ ಸಗ್ಳಿ ಸಾಮಾನಾ ದಿವ್ನ್ ಧಾಡ್ ಕಶ್ಯಾಕ್ ಮಟ್ಲ್ಯಾರ್ ತೆಂಕಾ ಕಾಯ್ಬಿ ಕಮಿ ಹೊವ್ಕ್ ನಾ .

ಅಧ್ಯಾಯವನ್ನು ನೋಡಿ ನಕಲು ಮಾಡಿ




ತೀತನಿಗೆ 3:13
15 ತಿಳಿವುಗಳ ಹೋಲಿಕೆ  

ಅಷ್ಟರೊಳಗೆ ಅಲೆಕ್ಸಾಂದ್ರಿಯದಲ್ಲಿ ಹುಟ್ಟಿದ ಅಪೊಲ್ಲೋಸನೆಂಬ ಒಬ್ಬ ಯೆಹೂದ್ಯನು ಎಫೆಸಕ್ಕೆ ಬಂದನು. ಅವನು ವಾಕ್ಚಾತುರ್ಯವುಳ್ಳವನೂ ಧರ್ಮಶಾಸ್ತ್ರಗಳಲ್ಲಿ ಪ್ರವೀಣನೂ ಆಗಿದ್ದನು.


ಅವರಲ್ಲಿದ್ದ ಒಬ್ಬ ಧರ್ಮೋಪದೇಶಕನು ಆತನನ್ನು ಪರೀಕ್ಷೆ ಮಾಡಬೇಕೆಂದು,


ಅವರು ನಮ್ಮನ್ನು ಬಹಳವಾಗಿ ಸನ್ಮಾನಿಸಿದ್ದಲ್ಲದೆ, ನಾವು ಅಲ್ಲಿಂದ ನಮ್ಮ ಪಯಣ ಮುಂದುವರಿಸಿದಾಗ, ನಮಗೆ ಅವಶ್ಯವಾದ ಪದಾರ್ಥಗಳನ್ನು ತಂದು ಹಡಗಿನಲ್ಲಿಟ್ಟರು.


ಆದ್ದರಿಂದ ಯಾರೂ ಅವನನ್ನು ತಿರಸ್ಕರಿಸಬಾರದು. ಅವನು ನನ್ನ ಬಳಿಗೆ ಬರುವಂತೆ ಅವನನ್ನು ಸಮಾಧಾನದಿಂದ ಕಳುಹಿಸಿರಿ; ಅವನು ಸಹೋದರರೊಂದಿಗೆ ಬರುವುದನ್ನು ಎದುರುನೋಡುತ್ತಾ ಇದ್ದೇನೆ.


ನಾನು ಸ್ಪೇನ್ ದೇಶಕ್ಕೆ ಹೋಗುವಾಗ ನನ್ನ ಮಾರ್ಗದಲ್ಲಿ ನಿಮ್ಮ ದರ್ಶನವನ್ನು ಮಾಡಬೇಕೆಂದು ಬಯಸಿದ್ದೇನೆ. ತರುವಾಯ ನಿಮ್ಮ ಜೊತೆಯಲ್ಲಿ ಸ್ವಲ್ಪ ಮಟ್ಟಿಗೆ ಸಂತೋಷವಾಗಿ ಸಮಯಕಳೆದ ನಂತರ ನೀವು ಆ ದೇಶಕ್ಕೆ ನನ್ನನ್ನು ಕಳುಹಿಸಿಕೊಡುವಿರೆಂದು ನಂಬುತ್ತೇನೆ.


ಆ ದಿನಗಳನ್ನು ಮುಗಿಸಿಕೊಂಡು ನಾವು ಹೊರಡುವಾಗ ಅವರೆಲ್ಲರೂ ತಮ್ಮ ಮಡದಿ ಮಕ್ಕಳು ಸಹಿತವಾಗಿ ಬಂದು ನಮ್ಮನ್ನು ಊರ ಹೊರಕ್ಕೆ ಬೀಳ್ಕೊಟ್ಟರು. ನಾವು ಸಮುದ್ರತೀರದಲ್ಲಿ ಮೊಣಕಾಲೂರಿಕೊಂಡು ಪ್ರಾರ್ಥನೆ ಮಾಡಿ,


“ಸಬ್ಬತ್ ದಿನದಲ್ಲಿ ಸ್ವಸ್ಥಮಾಡುವುದು ಸರಿಯೋ ಅಥವಾ ಸರಿಯಲ್ಲವೋ?” ಎಂದು ಧರ್ಮೋಪದೇಶಕರನ್ನೂ ಫರಿಸಾಯರನ್ನೂ ಕೇಳಿದನು.


ಅಯ್ಯೋ ಧರ್ಮೋಪದೇಶಕರೇ, ದೈವಿಕ ಜ್ಞಾನದ ಬೀಗದ ಕೈಯನ್ನು ನಿಮ್ಮಲ್ಲೇ ಇಟ್ಟುಕೊಂಡಿದ್ದೀರಿ. ನೀವೂ ಒಳಕ್ಕೆ ಪ್ರವೇಶಿಸಲಿಲ್ಲ, ಒಳಕ್ಕೆ ಹೋಗ ಬಯಸುವವರಿಗೂ ಅಡ್ಡಿಮಾಡಿದೀರಿ” ಅಂದನು.


ಇದನ್ನು ಕೇಳಿ ಒಬ್ಬ ಧರ್ಮೋಪದೇಶಕನು ಯೇಸುವಿಗೆ, “ಬೋಧಕನೇ, ಈ ಮಾತುಗಳನ್ನು ಹೇಳುವುದರಿಂದ ನಮ್ಮನ್ನೂ ನಿಂದಿಸಿದ ಹಾಗಾಯಿತು” ಎಂದು ಹೇಳಲು,


ಆಗ ಒಬ್ಬ ಧರ್ಮೋಪದೇಶಕನು ಎದ್ದು ಆತನನ್ನು ಪರೀಕ್ಷಿಸುವುದಕ್ಕಾಗಿ, “ಬೋಧಕನೇ, ನಾನು ನಿತ್ಯಜೀವವನ್ನು ಹೊಂದಿಕೊಳ್ಳಲು ಏನು ಮಾಡಬೇಕು?” ಎಂದು ಕೇಳಲು,


ಆದರೆ ಫರಿಸಾಯರೂ ಧರ್ಮೋಪದೇಶಕರೂ ಅವನಿಂದ ದೀಕ್ಷಾಸ್ನಾನ ಮಾಡಿಸಿಕೊಳ್ಳದೆ ಹೋದದ್ದರಿಂದ ಅವರು ತಮ್ಮ ಕುರಿತಾದ ದೈವಸಂಕಲ್ಪವನ್ನು ನಿರಾಕರಿಸಿದರು.


ಆದುದರಿಂದ ಸಭೆಯವರು ಅವರನ್ನು ಸಾಗ ಕಳುಹಿಸಲು, ಅವರು ಫೊಯಿನಿಕೆ ಮತ್ತು ಸಮಾರ್ಯ ಸೀಮೆಗಳನ್ನು ಹಾದು ಹೋಗುತ್ತಿರುವಾಗ ಅನ್ಯಜನರು ಕರ್ತನ ಕಡೆಗೆ ತಿರುಗಿಕೊಂಡ ಸಂಗತಿಯನ್ನು ಅಲ್ಲಿದ್ದ ಸಹೋದರರಿಗೆ ವಿವರವಾಗಿ ಹೇಳಿ ಅವರೆಲ್ಲರನ್ನು ಬಹಳವಾಗಿ ಸಂತೋಷಪಡಿಸಿದರು.


ಅಪೊಲ್ಲೋಸನು ಕೊರಿಂಥದಲ್ಲಿದ್ದಾಗ ಪೌಲನು ಮಲೆನಾಡಿನಲ್ಲಿ ಸಂಚಾರಮಾಡಿ ಎಫೆಸಕ್ಕೆ ಬಂದು ಕೆಲವು ಮಂದಿ ಶಿಷ್ಯರನ್ನು ಕಂಡು;


ಸಹೋದರ ಅಪೊಲ್ಲೋಸನ ಕುರಿತು; ಅವನು ಸಹೋದರರೊಂದಿಗೆ ನಿಮ್ಮನ್ನು ಭೇಟಿಮಾಡಬೇಕೆಂದು ನಾನು ಬಹಳವಾಗಿ ಅವನನ್ನು ಪ್ರೋತ್ಸಾಹಿಸಿದೆನು. ಆದರೆ ಅವನು ಈಗ ಬರುವುದಿಲ್ಲ ಎಂದು ನಿರ್ಧರಿಸಿದನು. ಆದರೆ ಒಳ್ಳೆ ಅವಕಾಶ ಸಿಕ್ಕಿದಾಗ ಬರುವನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು