ಜೆಕರ್ಯ 14:4 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20194 ಯೆರೂಸಲೇಮಿನ ಪೂರ್ವದಿಕ್ಕಿಗೆ ಎದುರಾಗಿರುವ ಎಣ್ಣೆಯ ಮರಗಳ ಗುಡ್ಡದ ಮೇಲೆ ಆತನ ಪಾದಗಳು ನಿಂತಿರಲು, ಆ ಗುಡ್ಡವು ಪೂರ್ವದಿಂದ ಪಶ್ಚಿಮದ ಉದ್ದಕ್ಕೂ ಸೀಳಿಹೋಗಿ ಮಧ್ಯದಲ್ಲಿ ದೊಡ್ಡ ಡೊಂಗರವಾಗುವುದು. ಗುಡ್ಡದ ಅರ್ಧಭಾಗವು ಉತ್ತರಕ್ಕೂ, ಅರ್ಧಭಾಗವು ದಕ್ಷಿಣಕ್ಕೂ ಸರಿದುಕೊಳ್ಳುವುದು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)4 ಅವರ ಪಾದಗಳು ಜೆರುಸಲೇಮಿಗೆ ಪೂರ್ವಕ್ಕಿರುವ ಓಲಿವ್ ಗುಡ್ಡದ ಮೇಲೆ ನಿಲ್ಲುವುದು. ಆ ಗುಡ್ಡವು ಇಬ್ಭಾಗವಾಗಿ ಪೂರ್ವಪಶ್ಚಿಮದ ಉದ್ದಕ್ಕೂ ಇನ್ನರ್ಧ ಭಾಗವು ದಕ್ಷಿಣಕ್ಕೂ ಸರಿದುಕೊಳ್ಳುವುದು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)4 ಯೆರೂಸಲೇವಿುಗೆ ಮೂಡಲಲ್ಲಿ ಎದುರಾಗಿರುವ ಎಣ್ಣೆಯ ಮರಗಳ ಗುಡ್ಡದ ಮೇಲೆ ಆತನ ಪಾದಗಳು ನಿಂತಿರಲು ಆ ಗುಡ್ಡವು ಮೂಡಲಿಂದ ಪಡುವಲಿಗೆ ಉದ್ದಕ್ಕೂ ಸೀಳಿಹೋಗಿ ಮಧ್ಯದಲ್ಲಿ ದೊಡ್ಡ ಡೊಂಗರವಾಗುವದು; ಗುಡ್ಡದ ಅರ್ಧಭಾಗವು ಬಡಗಲಿಗೆ, ಅರ್ಧಭಾಗವು ತೆಂಕಲಿಗೆ ಸರಿದುಕೊಳ್ಳುವದು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್4 ಅದೇ ಸಮಯದಲ್ಲಿ ಜೆರುಸಲೇಮಿಗೆ ಪೂರ್ವದಲ್ಲಿರುವ ಆಲೀವ್ ಮರಗಳ ಬೆಟ್ಟದ ಮೇಲೆ ನಿಂತುಕೊಳ್ಳುವನು. ಆ ಬೆಟ್ಟವು ಇಬ್ಭಾಗವಾಗುವದು. ಅದರ ಒಂದು ಭಾಗವು ಉತ್ತರಕ್ಕೆ ಹೋಗುವದು, ಇನ್ನೊಂದು ಭಾಗವು ದಕ್ಷಿಣದ ಕಡೆಗೆ ಹೋಗುವದು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ4 ಆ ದಿವಸದಲ್ಲಿ ಆತನ ಪಾದಗಳು ಯೆರೂಸಲೇಮಿನ ಮುಂದೆ ಪೂರ್ವದಿಕ್ಕಿನಲ್ಲಿರುವ ಓಲಿವ್ ಮರಗಳ ಗುಡ್ಡದ ಮೇಲೆ ನಿಲ್ಲುವುವು. ಆ ಗುಡ್ಡವು, ಅದರ ನಡುವೆಯಿಂದ ಪೂರ್ವಕ್ಕೂ ಪಶ್ಚಿಮಕ್ಕೂ ಸೀಳಿ ಬಹುದೊಡ್ಡ ತಗ್ಗಾಗುವುದು. ಅರ್ಧ ಗುಡ್ಡವು ಉತ್ತರಕ್ಕೂ ಅರ್ಧ ದಕ್ಷಿಣಕ್ಕೂ ಸರಿದುಕೊಳ್ಳುವುದು. ಅಧ್ಯಾಯವನ್ನು ನೋಡಿ |