ಗಲಾತ್ಯದವರಿಗೆ 2:6 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20196 ಆದರೆ ಗಣ್ಯವ್ಯಕ್ತಿಗಳಾಗಿದ್ದವರಿಂದ ನನಗೇನೂ ದೊರೆಯಲಿಲ್ಲ. ಅವರು ಹಿಂದಿನ ಕಾಲದಲ್ಲಿ ಎಂಥವರಾಗಿದ್ದರೋ ನನಗೆ ಲಕ್ಷ್ಯವಿಲ್ಲ. ದೇವರಿಗೆ ಮನುಷ್ಯರನ್ನು ಮೆಚ್ಚಿಸಬೇಕಾಗಿಲ್ಲ. ಗಣ್ಯವ್ಯಕ್ತಿಗಳೆಂದು ಎನಿಸಿಕೊಂಡವರು ನನಗೇನನ್ನೂ ತಿಳಿಸಿಕೊಡಲಿಲ್ಲ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)6 ಅಲ್ಲಿದ್ದ ಗಣ್ಯವ್ಯಕ್ತಿಗಳು ಕೂಡ (ಅವರು ಹಿಂದೆ ಎಂಥವರಾಗಿದ್ದರು ಎಂಬುದು ನನಗೆ ಮುಖ್ಯವಲ್ಲ; ದೇವರು ಮುಖನೋಡಿ ಮಣೆ ಹಾಕುವವರಲ್ಲ) ನನಗೆ ಯಾವ ಹೊಸ ಸಲಹೆ ನೀಡಲಿಲ್ಲ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)6 ಆದರೆ ಮಾನಿಷ್ಠರೆನಿಸಿಕೊಂಡವರಿಂದ ನನಗೇನೂ ದೊರೆಯಲಿಲ್ಲ. ಅವರು ಹಿಂದಿನ ಕಾಲದಲ್ಲಿ ಎಂಥವರಾಗಿದ್ದರೋ ನನಗೆ ಲಕ್ಷ್ಯವಿಲ್ಲ. ದೇವರು ಮುಖದಾಕ್ಷಿಣ್ಯ ಮಾಡುವವನಲ್ಲ. ಮಾನಿಷ್ಠರೆನಿಸಿಕೊಂಡವರು ನನ್ನ ಮಾತಿಗೆ ಒಪ್ಪಿದರೇ ಹೊರತು ನನಗೇನೂ ಕಲಿಸಲಿಲ್ಲ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್6 ನಾನು ಬೋಧಿಸುವ ಸುವಾರ್ತೆಗೆ ಅವರೇನೂ ಸೇರಿಸಲಿಲ್ಲ. (ಅವರು ಪ್ರಮುಖರಾಗಿದ್ದರೊ ಪ್ರಮುಖರಾಗಿರಲಿಲ್ಲವೊ ಅದು ನನಗೆ ಮುಖ್ಯವಲ್ಲ. ದೇವರಿಗೆ ಎಲ್ಲಾ ಜನರು ಒಂದೇ ಆಗಿದ್ದಾರೆ.) ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ6 ಅಲ್ಲಿದ್ದ ಸಭೆಯ ನಾಯಕರೂ ಸಹ ನನ್ನ ಸಂದೇಶದ ಬಗ್ಗೆ ನನಗೆ ಏನೂ ಹೇಳಲಿಲ್ಲ. ಅವರು ಎಂಥವರು ಎಂಬುದು ನನಗೆ ಮುಖ್ಯವಲ್ಲ; ಏಕೆಂದರೆ, ದೇವರು ಪಕ್ಷಪಾತಿಯಲ್ಲ. ಅಧ್ಯಾಯವನ್ನು ನೋಡಿದೆವಾಚಿ ಖರಿ ಖಬರ್6 ಖರೆ ಕೊನ್ ಲೈ ಮೊಟೆ ಮನುನ್ ಘೆಟಲ್ಲೆ ತೆ, ಅದ್ದಿ ಮೊಟೆ ಅಸ್ತಿಲ್, ತೆ ಮಾಕಾ ಸಮಂದ್ ಪಡಲ್ಲೆ ನಾ, ಕಶ್ಯಾಕ್ ಮಟ್ಲ್ಯಾರ್, ದೆವ್ ತೊಂಡ್ ಬಗುನ್ ನ್ಯಾಯ್ ನಿರ್ನಯ್ ಕರಿನಾ, ಮಾಜ್ಯಾ ಶಿಕಾಪಾಚ್ಯಾ ವಿಶಯಾತ್ ತೆನಿ ಅನಿ ಕಾಯ್ಬಿ ಜಾಸ್ತಿಚೆ ಮಾಕಾ ಸಾಂಗುಕ್ ದಿವ್ಕನ್ಯಾತ್. ಅಧ್ಯಾಯವನ್ನು ನೋಡಿ |