Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಕೀರ್ತನೆಗಳು 74:8 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

8 “ನಾವು ಈ ಜನವನ್ನೆಲ್ಲಾ ಸಂಹರಿಸಿಬಿಡೋಣ” ಅಂದುಕೊಂಡಿದ್ದಾರೆ; ದೇಶದಲ್ಲಿರುವ ನಿನ್ನ ಎಲ್ಲಾ ಸಭಾಮಂದಿರಗಳನ್ನು ಸುಟ್ಟುಬಿಟ್ಟಿದ್ದಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

8 ‘ನಾಶ ಮಾಡೋಣ ಈ ಜನರನು’ ಎಂದಾಡಿಕೊಂಡಿಹರು I ದೇಶದ ಸಭಾಮಂದಿರಗಳನ್ನೆಲ್ಲ ಭಸ್ಮಮಾಡಿಹರು II

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

8 ನಾವು ಈ ಜನವನ್ನೆಲ್ಲಾ ಸಂಹರಿಸಿಬಿಡೋಣ ಅಂದುಕೊಂಡಿದ್ದಾರೆ; ದೇಶದಲ್ಲಿರುವ ಎಲ್ಲಾ ದೇವಸಭಾಮಂದಿರಗಳನ್ನು ಸುಟ್ಟುಬಿಟ್ಟಿದ್ದಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

8 ನಮ್ಮನ್ನು ಸಂಪೂರ್ಣವಾಗಿ ಜಜ್ಜಿಹಾಕಲು ಶತ್ರುಗಳು ನಿರ್ಧರಿಸಿ ದೇಶದ ಪ್ರತಿಯೊಂದು ಪವಿತ್ರ ಸ್ಥಳವನ್ನೂ ಸುಟ್ಟುಹಾಕಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

8 “ಅವುಗಳನ್ನು ಒಟ್ಟಾಗಿ ಕೆಡವಿಬಿಡೋಣ,” ಎಂದು ತಮ್ಮ ಹೃದಯದಲ್ಲಿ ಹೇಳಿಕೊಳ್ಳುತ್ತಾರೆ. ದೇಶದಲ್ಲಿರುವ ದೇವರ ಸಭಾಸ್ಥಾನಗಳನ್ನೆಲ್ಲಾ ಸುಟ್ಟುಬಿಟ್ಟಿದ್ದಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಕೀರ್ತನೆಗಳು 74:8
9 ತಿಳಿವುಗಳ ಹೋಲಿಕೆ  

“ಬನ್ನಿರಿ; ಅವರು ಜನಾಂಗವಾಗಿ ಉಳಿಯದಂತೆಯೂ, ಇಸ್ರಾಯೇಲೆಂಬ ಹೆಸರು ಅಳಿದುಹೋಗುವಂತೆ, ಅವರನ್ನು ಸಂಹರಿಸೋಣ” ಅಂದುಕೊಳ್ಳುತ್ತಾರೆ.


ಬಳಿಕ ಯೇಸು ಗಲಿಲಾಯದಲ್ಲೆಲ್ಲಾ ಸಂಚರಿಸಿ ಅಲ್ಲಿಯವರ ಸಭಾಮಂದಿರಗಳಲ್ಲಿ ಉಪದೇಶ ಮಾಡುತ್ತಾ, ದೇವರ ರಾಜ್ಯದ ಸುವಾರ್ತೆಯನ್ನು ಸಾರಿ ಹೇಳುತ್ತಾ ಜನರ ಎಲ್ಲಾ ತರದ ರೋಗಗಳನ್ನೂ ಎಲ್ಲಾ ತರದ ಬೇನೆಗಳನ್ನೂ ವಾಸಿಮಾಡುತ್ತಾ ಬಂದನು.


ಯೆಹೋವನೇ, ಎದೋಮ್ಯರ ಹಾನಿಗಾಗಿ, ಯೆರೂಸಲೇಮಿನ ನಾಶನದ ದಿನವನ್ನು ನೆನಪುಮಾಡಿಕೋ. ಅವರು, “ಅದನ್ನು ಹಾಳುಮಾಡಿರಿ, ಅಸ್ತಿವಾರ ಸಹಿತ ಹಾಳುಮಾಡಿರಿ” ಎಂದು ಹೇಳಿದರಲ್ಲಾ.


ಅದಕ್ಕೆ ಅವನು, “ಇದು ಅಮಾವಾಸ್ಯೆಯಲ್ಲ, ಸಬ್ಬತ್ತಲ್ಲ. ಈ ಹೊತ್ತು ಯಾಕೆ ಹೋಗುತ್ತೀ?” ಎಂದನು. ಅದಕ್ಕೆ ಆಕೆಯು, “ಎಲ್ಲವು ಸರಿಯೇ” ಎಂದು ಹೇಳಿದಳು.


ಯೆರಿಕೋವಿನಲ್ಲಿದ್ದ ಪ್ರವಾದಿ ಮಂಡಳಿಯವರು ಎಲೀಷನನ್ನು ಎದುರುಗೊಂಡು ಅವನಿಗೆ, “ಯೆಹೋವನು ಈ ಹೊತ್ತು ನಿನ್ನ ಯಜಮಾನನನ್ನು ನಿನ್ನ ಬಳಿಯಿಂದ ಮೇಲಕ್ಕೆ ತೆಗೆದುಕೊಳ್ಳುವನೆಂಬುದು ನಿನಗೆ ಗೊತ್ತುಂಟೋ?” ಎಂದು ಕೇಳಿದರು. ಅದಕ್ಕೆ ಅವನು, ನನಗೆ “ಗೊತ್ತುಂಟು ನೀವು ಸುಮ್ಮನಿರಿ” ಎಂದು ಉತ್ತರ ಕೊಟ್ಟನು.


ಬೇತೇಲಿನ ಪ್ರವಾದಿ ಮಂಡಳಿಯವರು ಎಲೀಷನನ್ನು ಎದುರುಗೊಂಡು ಅವನನ್ನು, “ಯೆಹೋವನು ಈ ಹೊತ್ತು ನಿನ್ನ ಯಜಮಾನನನ್ನು ನಿನ್ನ ಬಳಿಯಿಂದ ತೆಗೆದುಕೊಳ್ಳುವನೆಂಬುದು ನಿನಗೆ ಗೊತ್ತುಂಟೋ?” ಎಂದು ಕೇಳಿದರು. ಅದಕ್ಕೆ ಅವನು, “ಗೊತ್ತಿದೆ ನೀವು ಸುಮ್ಮನಿರಿ” ಎಂದನು.


ಇವರು ಯೆಹೋವನ ಧರ್ಮಶಾಸ್ತ್ರವನ್ನು ತೆಗೆದುಕೊಂಡು ಯೆಹೂದ ದೇಶದ ಪಟ್ಟಣದಲ್ಲೆಲ್ಲಾ ಸಂಚಾರ ಮಾಡಿ ಜನರಿಗೆ ಬೋಧಿಸಿದರು.


ಎದೋಮ್ಯರ ಮತ್ತು ಇಷ್ಮಾಯೇಲರ ಪಾಳೆಯಗಳವರು, ಮೋವಾಬ್ಯರು, ಹಗ್ರೀಯರು,


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು