ಕೀರ್ತನೆಗಳು 17:14 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201914 ಯೆಹೋವನೇ, ಇಹಲೋಕವೇ ತಮ್ಮ ಪಾಲೆಂದು ನಂಬಿದ ನರರಿಗೆ ಸಿಕ್ಕದಂತೆ ನಿನ್ನ ಕೈಯಿಂದ ನನ್ನನ್ನು ತಪ್ಪಿಸು; ನಿನ್ನ ಐಶ್ವರ್ಯದಿಂದ ಅವರ ಹೊಟ್ಟೆಯನ್ನು ತುಂಬಿಸಿದ್ದೀಯಲ್ಲಾ. ಅವರು ಸಂತಾನವೃದ್ಧಿಹೊಂದಿ ಉಳಿದ ಆಸ್ತಿಯನ್ನು ತಮ್ಮ ಮಕ್ಕಳಿಗೆ ಬಿಡುತ್ತಾರೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)14 ಇಳೆಯ ಮಾನವರಿಂದ ಪ್ರಭು, ಎನ್ನನು ಕೈಯಾರೆ ಕಾಪಾಡು I ಜಗವೇ ತಮ್ಮ ಪಾಲಿನ ಪರಿಮಿತಿ ಎನ್ನುವವರಿಂದ ಕಾದಿಡು II ಅವರಾದರೊ ನಿನ್ನ ನಿಧಿಯಿಂದ ಉದರ ತುಂಬಿಸಿಕೊಳ್ಳಲಿ I ಮಕ್ಕಳು, ಮರಿಮಕ್ಕಳಿಗೆ ಯಥೇಚ್ಛವಾಗಿ ಉಳಿಸಿಕೊಳ್ಳಲಿ II ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)14 ಯೆಹೋವನೇ, ಇಹಲೋಕವೇ ತಮ್ಮ ಪಾಲೆಂದು ನಂಬಿದ ನರರಿಗೆ ಸಿಕ್ಕದಂತೆ ನಿನ್ನ ಕೈಯಿಂದ ನನ್ನನ್ನು ತಪ್ಪಿಸು; ನಿನ್ನ ಐಶ್ವರ್ಯದಿಂದ ಅವರ ಹೊಟ್ಟೆಯನ್ನು ತುಂಬಿಸಿದ್ದೀಯಲ್ಲಾ. ಅವರು ಸಂತಾನವೃದ್ಧಿಹೊಂದಿ ವಿುಕ್ಕ ಆಸ್ತಿಯನ್ನು ತನ್ನ ಮಕ್ಕಳಿಗೆ ಬಿಡುತ್ತಾರೆ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್14 ಯೆಹೋವನೇ, ಈ ಲೋಕಕ್ಕಾಗಿಯೇ ಜೀವಿಸುವ ಜನರಿಂದ ನನ್ನನ್ನು ತಪ್ಪಿಸಿ ಕಾಪಾಡು. ನಿನ್ನ ಸಹಾಯಕ್ಕಾಗಿ ಮೊರೆಯಿಡುವ ಅನೇಕರು ಕೊರತೆಯಲ್ಲಿದ್ದಾರೆ. ಅವರಿಗೆ ಆಹಾರವನ್ನು ಹೇರಳವಾಗಿ ದಯಪಾಲಿಸು. ಅವರ ಮಕ್ಕಳಿಗೂ ಮೊಮ್ಮಕ್ಕಳಿಗೂ ಬೇಕಾದದ್ದನ್ನೆಲ್ಲಾ ಒದಗಿಸಿಕೊಡು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ14 ಯೆಹೋವ ದೇವರೇ, ಈ ಲೋಕಜೀವನದಲ್ಲಿಯಷ್ಟೇ ಪ್ರತಿಫಲವೆಂದು ತಿಳಿಯುವ ಜನರಿಂದ, ನನ್ನನ್ನು ನಿಮ್ಮ ಹಸ್ತದ ಮೂಲಕ ರಕ್ಷಿಸಿ ಕಾಪಾಡಿರಿ. ಅಂಥ ಜನರಿಗಾಗಿ ನೀವು ಸಂಗ್ರಹಿಸಿ ಇಟ್ಟಿರುವುದು ಅವರ ಹೊಟ್ಟೆ ತುಂಬಲಿ; ಅವರ ಮಕ್ಕಳು ಅದರಿಂದ ಸಮೃದ್ಧಿ ಹೊಂದಲಿ, ಅವರ ಚಿಕ್ಕಮಕ್ಕಳಿಗೂ ಉಳಿದದ್ದು ಸಿಕ್ಕಲಿ. ಅಧ್ಯಾಯವನ್ನು ನೋಡಿ |