ಎಸ್ತೇರಳು 8:14 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201914 ಈ ರಾಜಾಜ್ಞೆಯು ಶೂಷನ್ ಕೋಟೆಯಲ್ಲಿ ಪ್ರಕಟವಾದಾಗಲೇ ಅಂಚೆಯವರು ಅರಮನೆಯ ಸವಾರಿಕುದುರೆಗಳನ್ನು ಹತ್ತಿಕೊಂಡು ಅರಸನ ಅಪ್ಪಣೆಯಿಂದ ಪ್ರೇರಿತರಾಗಿ ಅತಿ ಶೀಘ್ರವಾಗಿ ಹೊರಟರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)14 ಅರಸನ ಈ ರಾಜಾಜ್ಞೆ ಶೂಷನ್ ನಗರದಲ್ಲಿ ಪ್ರಕಟವಾದ ಕೂಡಲೆ ಅದರಿಂದ ಪ್ರೇರಿತರಾದ ಅಂಚೆಯವರು ಅರಮನೆಯ ಸವಾರಿ ಕುದುರೆಗಳನ್ನೇರಿ ಅತಿಶೀಘ್ರವಾಗಿ ಧಾವಿಸಿದರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)14 ಈ ರಾಜಾಜ್ಞೆಯು ಶೂಷನ್ ಕೋಟೆಯಲ್ಲಿ ಪ್ರಕಟವಾದಾಗಲೇ ಅರಮನೆಯ ಸವಾರಿ ಕುದುರೆಗಳನ್ನು ಹತ್ತಿಕೊಂಡಿದ್ದ ಅಂಚೆಯವರು ಅರಸನ ಅಪ್ಪಣೆಯಿಂದ ಪ್ರೇರಿತರಾಗಿ ಅತಿಶೀಘ್ರವಾಗಿ ಹೊರಟರು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್14 ಈ ಆಜ್ಞೆಯನ್ನು ಜನರಿಗೆ ತಲುಪಿಸಲು ಅರಸನು ಸಂದೇಶ ವಾಹಕರನ್ನು ಅವಸರಪಡಿಸಿದನು. ಶೂಷನ್ ನಗರದಲ್ಲೂ ಇದು ಪ್ರಕಟವಾಯಿತು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ14 ಅಂಚೆಯವರು ಅರಸನ ಆಜ್ಞೆಯಿಂದ ಪ್ರೇರಿತರಾಗಿ ಅರಮನೆಯ ಕುದುರೆಗಳ ಮೇಲೆ ಅತಿ ಶೀಘ್ರವಾಗಿ ಹೊರಟರು. ಈ ಆಜ್ಞೆಯು ಶೂಷನ್ ನಗರದ ಅರಮನೆಯಲ್ಲಿ ಕೊಡಲಾಗಿತ್ತು. ಅಧ್ಯಾಯವನ್ನು ನೋಡಿ |
ಅರಸನ ಮತ್ತು ಅವನ ಪದಾಧಿಕಾರಿಗಳಿಂದ ಪತ್ರಗಳನ್ನು ತೆಗೆದುಕೊಂಡು ಹೋದ ದೂತರು ಇಸ್ರಾಯೇಲ್ ಮತ್ತು ಯೆಹೂದ ದೇಶಗಳಲ್ಲೆಲ್ಲಾ ಸಂಚರಿಸಿ ರಾಜಾಜ್ಞೆಯಂತೆ ಹೀಗೆಂದು ಪ್ರಕಟಿಸಿದರು: “ಇಸ್ರಾಯೇಲರೇ, ಅಬ್ರಹಾಮ್, ಇಸಾಕ್ ಮತ್ತು ಇಸ್ರಾಯೇಲರ ದೇವರಾದ ಯೆಹೋವನ ಕಡೆಗೆ ತಿರುಗಿಕೊಳ್ಳಿರಿ. ಆಗ ಆತನು ನಿಮ್ಮಲ್ಲಿ ಅಶ್ಶೂರದ ಅರಸನ ಕೈಗೆ ಸಿಕ್ಕದಂತೆ ತಪ್ಪಿಸಿಕೊಂಡು ಉಳಿದಿರುವ ನಿಮ್ಮ ಕಡೆಗೆ ತಿರುಗಿಕೊಳ್ಳುವನು.