ಎಸ್ತೇರಳು 6:3 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20193 ಆಗ ಅರಸನು, “ಇದಕ್ಕಾಗಿ ಮೊರ್ದೆಕೈಗೆ ಯಾವ ಸ್ಥಾನಮಾನಗಳು ದೊರಕಿದವು?” ಎಂದು ವಿಚಾರಿಸಿದಾಗ ಅವನ ಸಾನ್ನಿಧ್ಯಸೇವಕರಾದ ಪರಿವಾರದವರು, “ಏನೂ ದೊರಕಲಿಲ್ಲ” ಎಂದು ಹೇಳಿದರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)3 ಆಗ ಅರಸನು, “ಈ ಸತ್ಕಾರ್ಯಕ್ಕಾಗಿ ಮೊರ್ದೆಕೈಯನಿಗೆ ಯಾವ ಸನ್ಮಾನ ಮಾಡಲಾಯಿತೆಂದು ವಿಚಾರಿಸಿದಾಗ, ಅವನ ಆಸ್ಥಾನಸೇವಕರು ಯಾವುದೂ ಇಲ್ಲವೆಂದು ಉತ್ತರವಿತ್ತರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)3 ಆಗ ಅರಸನು - ಇದಕ್ಕಾಗಿ ಮೊರ್ದೆಕೈಗೆ ಯಾವ ಸ್ಥಾನಮಾನಗಳು ದೊರಕಿದವೆಂದು ವಿಚಾರಿಸಿದಾಗ ಅವನ ಸಾನ್ನಿಧ್ಯಸೇವಕರಾದ ಪರಿವಾರದವರು - ಏನೂ ದೊರಕಲಿಲ್ಲ ಎಂದು ಹೇಳಿದರು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್3 ಇದನ್ನು ಕೇಳುತ್ತಿದ್ದ ಅರಸನು, “ಮೊರ್ದೆಕೈ ಹೀಗೆ ಮಾಡಿದುದಕ್ಕೆ ಯಾವ ಗೌರವ ಮತ್ತು ಬಹುಮಾನಗಳು ಕೊಡಲ್ಪಟ್ಟವು?” ಎಂದು ವಿಚಾರಿಸಿದನು. “ಮೊರ್ದೆಕೈಗೆ ಏನೂ ಕೊಡಲಿಲ್ಲ” ಎಂದು ಸೇವಕರು ಉತ್ತರಿಸಿದರು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ3 ಆಗ ಅರಸನು, “ಈ ಸತ್ಕಾರ್ಯಕ್ಕಾಗಿ ಮೊರ್ದೆಕೈಯನಿಗೆ ಯಾವ ಸನ್ಮಾನ ಮಾಡಲಾಯಿತು?” ಎಂದು ವಿಚಾರಿಸಿದನು. ಅರಸನ ಸೇವಕರು, “ಮೊರ್ದೆಕೈಯನಿಗೆ ಏನೂ ಮಾಡಿಲ್ಲ,” ಎಂದು ಹೇಳಿದರು. ಅಧ್ಯಾಯವನ್ನು ನೋಡಿ |
ನೀನು, ಗೂಢಾರ್ಥಗಳನ್ನು ವಿವರಿಸಿ ಕಠಿಣವಾದ ಸಂಗತಿಗಳನ್ನು ಬಿಡಿಸಿ ತಿಳಿಸುವವನಾಗಿದ್ದೀ ಎಂಬ ಸಮಾಚಾರವು ನನಗೆ ಮುಟ್ಟಿದೆ; ಈ ಬರಹವನ್ನು ಓದಿ ಇದರ ಅಭಿಪ್ರಾಯವನ್ನು ನನಗೆ ತಿಳಿಸಲು ನಿನ್ನಿಂದಾದರೆ ನಾನೀಗ ನಿನಗೆ ಧೂಮ್ರವಸ್ತ್ರವನ್ನು ಹೊದಿಸಿ, ನಿನ್ನ ಕೊರಳಿಗೆ ಚಿನ್ನದ ಹಾರವನ್ನು ಹಾಕಿಸಿ, ನಿನ್ನನ್ನು ರಾಜ್ಯದ ಮೂವರು ಮುಖ್ಯಾಧಿಕಾರಿಗಳಲ್ಲಿ ಒಬ್ಬನನ್ನಾಗಿ ನೇಮಿಸುವೆನು” ಎಂದು ಹೇಳಿದನು.
ಹೀಗಿರಲು ರಾಜನು ಗಟ್ಟಿಯಾಗಿ ಕೂಗಿಕೊಂಡು ಮಂತ್ರವಾದಿ, ಪಂಡಿತ, ಶಾಕುನಿಕರನ್ನು ಕರೆಯಿಸಿ ಬಾಬೆಲಿನ ಆ ವಿದ್ವಾಂಸರಿಗೆ, “ಯಾರು ಈ ಬರಹವನ್ನು ಓದಿ, ಇದರ ಅರ್ಥವನ್ನು ನನಗೆ ತಿಳಿಸುತ್ತಾನೋ ಅವನಿಗೆ ನಾನು ಧೂಮ್ರವಸ್ತ್ರವನ್ನು ಹೊದಿಸಿ, ಅವನ ಕೊರಳಿಗೆ ಚಿನ್ನದ ಹಾರವನ್ನು ಹಾಕಿಸಿ, ಅವನನ್ನು ರಾಜ್ಯದ ಮೂವರು ಮುಖ್ಯಾಧಿಕಾರಿಗಳಲ್ಲಿ ಒಬ್ಬನನ್ನಾಗಿ ನೇಮಿಸುವೆನು” ಎಂದು ಹೇಳಿದನು.