Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಎಸ್ತೇರಳು 2:13 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

13 ಅರಸನ ಬಳಿಗೆ ಹೋಗುವ ಸರದಿ ಯಾರಿಗೆ ಬರುವುದೋ ಆಕೆಯು ಅಂತಃಪುರದಿಂದ ಅರಮನೆಗೆ ತೆಗೆದುಕೊಂಡು ಹೋಗುವುದಕ್ಕೋಸ್ಕರ ಏನು ಕೇಳಿದರೂ ಕೊಡಲ್ಪಡುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

13 ಹೀಗೆ ತನ್ನ ಸರದಿ ಬಂದಾಗ ತನ್ನೊಡನೆ ತೆಗೆದುಕೊಂಡು ಹೋಗಲು ಇಷ್ಟಪಡುವುದನ್ನೆಲ್ಲಾ ಆಕೆಗೆ ಒದಗಿಸಲಾಗುತ್ತಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

13 ಅರಸನ ಬಳಿಗೆ ಹೋಗುವ ಸರತಿ ಯಾವಾಕೆಗೆ ಬರುವದೋ ಆಕೆಯು ಅಂತಃಪುರದಿಂದ ಅರಮನೆಗೆ ತೆಗೆದುಕೊಂಡು ಹೋಗುವದಕ್ಕೋಸ್ಕರ ಏನು ಕೇಳಿದರೂ ಕೊಡಲ್ಪಡುವದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

13 ರಾಜನ ಬಳಿಗೆ ಹೋಗುವಾಗ ಆಕೆಗೆ ಏನುಬೇಕೋ ಅದನ್ನು ಅಂತಃಪುರದಿಂದ ಕೊಡಲ್ಪಡುತ್ತಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

13 ಈ ಪ್ರಕಾರ ಕನ್ಯೆಯು ಅರಸನ ಬಳಿಗೆ ಪ್ರವೇಶಿಸುವಾಗ ಸ್ತ್ರೀಯರ ಮನೆಯೊಳಗಿಂದ ತನ್ನ ಸಂಗಡ ಅರಸನ ಅರಮನೆಗೆ ಹೋಗಲು ಅವಳು ಏನು ಬೇಡುವಳೋ ಅದು ಅವಳಿಗೆ ಒದಗಿಸಲಾಗುತ್ತಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಎಸ್ತೇರಳು 2:13
3 ತಿಳಿವುಗಳ ಹೋಲಿಕೆ  

ಕನ್ಯೆಯರ ಲೇಪನಕಾಲವು ಪೂರೈಸುವುದಕ್ಕೆ ಗಂಧರಸಪ್ರಯೋಗದಲ್ಲಿ ಆರು ತಿಂಗಳೂ, ಪರಿಮಳದ್ರವ್ಯ ಕಾಂತಿವರ್ಧಕದ್ರವ್ಯಗಳ ಪ್ರಯೋಗದಲ್ಲಿ ಆರು ತಿಂಳಗಳೂ ಅಂತು ಹನ್ನೆರಡು ತಿಂಗಳು ಕಳೆದವು. ಈ ಕಾಲ ಮುಗಿದನಂತರ ರಾಜನ ಅರಮನೆಯ ನಿಯಮದ ಮೇರೆಗೆ ತನ್ನನ್ನು ಸಿದ್ಧಪಡಿಸಿಕೊಂಡ ಪ್ರತಿಯೊಬ್ಬ ಕನ್ಯೆಯು ಅರಸನಾದ ಅಹಷ್ವೇರೋಷನ ಬಳಿಗೆ ಹೋಗಬೇಕಾಗಿತ್ತು.


ಆಕೆಯು ಅಲ್ಲಿಗೆ ಸಾಯಂಕಾಲ ಹೋದವಳು ಮರುದಿನ ಬೆಳಿಗ್ಗೆ ಅರಸನ ಉಪಪತ್ನಿಯರ ಪಾಲಕನಾದ ಶವಷ್ಗಜನೆಂಬ ರಾಜಕಂಚುಕಿಯ ವಶದಲ್ಲಿದ್ದ ಎರಡನೆಯ ಅಂತಃಪುರಕ್ಕೆ ಬರುವಳು. ಅರಸನು ಅವಳನ್ನು ಮೆಚ್ಚಿ ಹೆಸರು ಹೇಳಿ ಕರೆಯಿಸಿದ ಹೊರತಾಗಿ ಒಬ್ಬಳೂ ಅರಸನ ಬಳಿಗೆ ಪುನಃ ಹೋಗುವ ಹಾಗಿರಲಿಲ್ಲ.


ಅವನು ಆಕೆಯ ಕ್ಷೇಮವನ್ನು ಮತ್ತು ಆಕೆ ಮುಂದೆ ಏನು ಮಾಡಬೇಕು ಎಂದು ವಿಚಾರಿಸುವುದಕ್ಕಾಗಿ ಪ್ರತಿದಿನವೂ ಅಂತಃಪುರದ ಪ್ರಾಕಾರದ ಮುಂದೆ ತಿರುಗಾಡುತ್ತಿದ್ದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು