Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಎಜ್ರ 8:20 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

20 ದಾವೀದನೂ ಅವನ ಮುಖ್ಯಸ್ಥರನ್ನು ಲೇವಿಯರೊಂದಿಗೆ ಸೇವೆಗಾಗಿ ಕೊಟ್ಟು ದೇವಸ್ಥಾನ ಪರಿಚಾರಕರಲ್ಲಿ ಇನ್ನೂರಿಪ್ಪತ್ತು ಜನರನ್ನೂ ನಮ್ಮ ಬಳಿಗೆ ಕರೆದುಕೊಂಡು ಬಂದರು. ಇವರೆಲ್ಲರ ಹೆಸರುಗಳು ಪಟ್ಟಿಯಲ್ಲಿದ್ದವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

20 ಹಾಗು ದಾವೀದನೂ ಅವನ ಸರದಾರರೂ ಲೇವಿಯರ ಸಹಾಯಕ್ಕಾಗಿ ಕೊಟ್ಟ ದೇವಸ್ಥಾನ ಪರಿಚಾರಕರಲ್ಲಿ ಇನ್ನೂರ ಇಪ್ಪತ್ತು ಮಂದಿಯನ್ನು ನಮ್ಮ ಬಳಿಗೆ ಕರೆದುಕೊಂಡು ಬಂದರು. ಇವರೆಲ್ಲರ ಹೆಸರುಗಳು ಪಟ್ಟಿಯಲ್ಲಿದ್ದವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

20 ಲೇವಿಯರ ಸಹಾಯಕ್ಕಾಗಿ ಕೊಟ್ಟ ದೇವಸ್ಥಾನದಾಸರಲ್ಲಿ ಇನ್ನೂರಿಪ್ಪತ್ತು ಮಂದಿಯನ್ನೂ ನಮ್ಮ ಬಳಿಗೆ ಕರಕೊಂಡು ಬಂದರು. ಇವರೆಲ್ಲರ ಹೆಸರುಗಳು ಪಟ್ಟಿಯಲ್ಲಿದ್ದವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

20 ಇನ್ನೂರಿಪ್ಪತ್ತು ಮಂದಿ ದೇವಾಲಯದ ಸೇವಕರು; (ಇವರ ಪೂರ್ವಿಕರು ದಾವೀದನ ಕಾಲದಲ್ಲಿ ಲೇವಿಯರಿಗೆ ಸಹಾಯಕರಾಗಿ ಆರಿಸಲ್ಪಟ್ಟವರಾಗಿದ್ದರು. ಅವರೆಲ್ಲರ ಹೆಸರುಗಳನ್ನು ಪಟ್ಟಿಮಾಡಲಾಗಿದೆ.)

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

20 ದಾವೀದನೂ, ಪ್ರಧಾನರೂ, ಲೇವಿಯರನ್ನು ಸೇವಿಸುವುದಕ್ಕೆ ನೇಮಿಸಿದ ದೇವಾಲಯದ ಸೇವಕರಲ್ಲಿ ಇನ್ನೂರ ಇಪ್ಪತ್ತು ಮಂದಿ ಸೇವಕರನ್ನೂ, ನಮ್ಮ ಬಳಿಗೆ ಕರೆದುಕೊಂಡು ಬಂದರು. ಅವರೆಲ್ಲರ ಹೆಸರುಗಳು ದಾಖಲೆಯಾಗಿದ್ದವು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಎಜ್ರ 8:20
7 ತಿಳಿವುಗಳ ಹೋಲಿಕೆ  

ದೇವಸ್ಥಾನದಾಸರಲ್ಲಿ: ಜೀಹ ಸಂತಾನದವರು ಮತ್ತು ಹಸೂಫ, ಟಬ್ಬಾವೋತ್,


ಅವನೊಡನೆ ಕೆಲವು ಜನರು ಇಸ್ರಾಯೇಲರೂ, ಯಾಜಕರೂ, ಲೇವಿಯರೂ, ಗಾಯಕರೂ, ದ್ವಾರಪಾಲಕರೂ ಮತ್ತು ದೇವಸ್ಥಾನದಾಸರೂ ಅರ್ತಷಸ್ತ ಅರಸನ ಆಳ್ವಿಕೆಯ ಏಳನೆಯ ವರ್ಷದಲ್ಲಿ ಯೆರೂಸಲೇಮಿಗೆ ಬಂದರು.


ಆಗ ಅವರ ಪಟ್ಟಣಗಳನ್ನೂ, ಸ್ವಾಸ್ತ್ಯವನ್ನೂ ಮೊದಲು ಸ್ವಾಧೀನಮಾಡಿಕೊಂಡವರು ಇಸ್ರಾಯೇಲ್ಯರು, ಯಾಜಕರು ಲೇವಿಯರು ಮತ್ತು ದೇವಾಲಯದ ಸೇವಕರು ಇವರೇ.


ನನ್ನ ನಿಜವಾದ ಜೊತೆ ಸೇವಕನೇ, ಆ ಸ್ತ್ರೀಯರಿಗೆ ಸಹಾಯಕನಾಗಿರಬೇಕೆಂದು ನಿನ್ನನ್ನೂ ಕೇಳಿಕೊಳ್ಳುತ್ತೇನೆ. ಅವರು ಕ್ಲೇಮೆನ್ಸ್ ಮುಂತಾದ ನನ್ನ ಜೊತೆಕೆಲಸದವರ ಸಹಿತವಾಗಿ ನನ್ನ ಜೊತೆ ಸುವಾರ್ತೆಗೋಸ್ಕರ ಪ್ರಯಾಸಪಟ್ಟವರು. ಅವರವರ ಹೆಸರುಗಳು ಜೀವಬಾಧ್ಯರ ಪಟ್ಟಿಯಲ್ಲಿ ಬರೆದಿವೆ.


ಅವರ ತರುವಾಯ ನಾನು ಕಾಸಿಫ್ಯ ಊರಿನ ಮುಖ್ಯಸ್ಥನಾದ ಇದ್ದೋವಿನ ಬಳಿಗೆ ಹೋಗಬೇಕೆಂದು ಅಪ್ಪಣೆಮಾಡಿ, ನಮ್ಮ ಬಳಿಗೆ ದೇವಾಲಯ ಸೇವಕರನ್ನು ಕಳುಹಿಸುವ ಹಾಗೆ, ಅವರು ಇದ್ದೋವಿಗೂ ಕಾಸಿಫ್ಯ ಊರಿನಲ್ಲಿ ವಾಸಿಸುತ್ತಿದ್ದ ಅವನ ಸಹೋದರರಾದ ದೇವಸ್ಥಾನದ ಪರಿಚಾರಕರಿಗೂ ಹೇಳತಕ್ಕ ಮಾತುಗಳನ್ನು ಹೇಳಿಕೊಟ್ಟೆನು. ಆ ಊರಿನವರು ದೇವದಾಸವರ್ಗದವರಷ್ಟೆ.


ಮೆರಾರೀಯರಲ್ಲಿ ಹಷಬ್ಯನನ್ನೂ ಅವನೊಡನೆ ಯೆಶಾಯನನ್ನೂ, ಅವರ ಪುತ್ರ ಸಹೋದರರಲ್ಲಿ ಇಪ್ಪತ್ತು ಜನರು,


“ನೀನು ಲೇವಿಯರನ್ನು ಆರೋನನಿಗೂ ಮತ್ತು ಅವನ ಮಕ್ಕಳಿಗೂ ಒಪ್ಪಿಸಬೇಕು. ಇಸ್ರಾಯೇಲರಲ್ಲಿ ಆರೋನನಿಗೆ ಸಂಪೂರ್ಣವಾಗಿ ಒಪ್ಪಿಸಲ್ಪಟ್ಟವರು ಇವರೇ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು