ಎಜ್ರ 2:70 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201970 ದೇವಸ್ಥಾನದ ಸೇವೆಗಾಗಿ ಇದ್ದ ಯಾಜಕರು, ಲೇವಿಯರು, ಗಾಯಕರು, ದ್ವಾರಪಾಲಕರು ಮತ್ತು ಸಾಧಾರಣಜನರಲ್ಲಿ ಕೆಲವರು ಅವರವರಿಗೆ ನೇಮಕವಾದ ಪಟ್ಟಣಗಳಲ್ಲಿ ವಾಸಿಸಿದರು; ಬೇರೆ ಎಲ್ಲಾ ಇಸ್ರಾಯೇಲರು ತಮ್ಮ ತಮ್ಮ ಪಟ್ಟಣಗಳಲ್ಲಿ ವಾಸಿಸಿದರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)70 ಹೀಗೆ ಯಾಜಕರು, ಲೇವಿಯರು, ಗಾಯಕರು, ದ್ವಾರಪಾಲಕರು, ದೇವಸ್ಥಾನದ ಪರಿಚಾರಕರು, ಜನಸಾಮಾನ್ಯರಲ್ಲಿ ಕೆಲವರು, ತಮತಮಗೆ ನೇಮಕವಾದ ಪಟ್ಟಣಗಳಲ್ಲಿ ವಾಸಿಸಿದರು. ಉಳಿದ ಎಲ್ಲ ಇಸ್ರಯೇಲರು ತಮ್ಮ ತಮ್ಮ ಪಟ್ಟಣಗಳಲ್ಲೇ ವಾಸಿಸಿದರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)70 ಯಾಜಕ, ಲೇವಿಯ, ಗಾಯಕ, ದ್ವಾರಪಾಲಕ, ದೇವಸ್ಥಾನದಾಸ ಇವರೂ ಸಾಧಾರಣ ಜನರಲ್ಲಿ ಕೆಲವರೂ ತಮತಮಗೆ ನೇಮಕವಾದ ಪಟ್ಟಣಗಳಲ್ಲಿ ವಾಸಿಸಿದರು; ಬೇರೆ ಎಲ್ಲಾ ಇಸ್ರಾಯೇಲ್ಯರು ತಮ್ಮ ತಮ್ಮ ಪಟ್ಟಣಗಳಲ್ಲಿ ವಾಸಿಸಿದರು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್70 ಅವರಲ್ಲಿದ್ದ ಯಾಜಕರು, ಲೇವಿಯರು ಮತ್ತು ಇನ್ನಿತರರು ಜೆರುಸಲೇಮ್ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೆಲೆಸಿದರು. ಇವರೊಳಗೆ ಗಾಯಕರೂ ದ್ವಾರಪಾಲಕರೂ ದೇವಾಲಯದ ಸೇವಕರೂ ಇದ್ದರು. ಉಳಿದ ಇಸ್ರೇಲ್ ಜನರು ತಮ್ಮತಮ್ಮ ಊರುಗಳಲ್ಲಿ ವಾಸಿಸಿದರು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ70 ಯಾಜಕರೂ, ಲೇವಿಯರೂ, ದ್ವಾರಪಾಲಕರೂ, ಹಾಡುಗಾರರೂ, ದೇವಾಲಯದ ಸೇವಕರೂ ತಮ್ಮ ತಮ್ಮ ಪಟ್ಟಣಗಳಲ್ಲಿಯೂ ಉಳಿದ ಇಸ್ರಾಯೇಲರು ತಮ್ಮ ಪಟ್ಟಣಗಳಲ್ಲಿಯೂ ವಾಸವಾಗಿದ್ದರು. ಅಧ್ಯಾಯವನ್ನು ನೋಡಿ |