ಎಜ್ರ 10:3 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20193 ಸ್ವಾಮಿಯಾದ ನೀನೂ ನಮ್ಮ ದೇವರ ಆಜ್ಞೆಯನ್ನು ಗೌರವಿಸುವವನೂ. ನೀನು ಹೇಳಿಕೊಟ್ಟ ಬುದ್ಧಿವಾದಕ್ಕೆ ಅನುಸಾರವಾಗಿ ಎಲ್ಲಾ ಹೆಂಡತಿಯರನ್ನೂ, ಅವರ ಮಕ್ಕಳನ್ನೂ ಕಳುಹಿಸಿಬಿಡುವುದಾಗಿ ಈಗಲೇ ನಮ್ಮ ದೇವರೊಂದಿಗೆ ಒಡಂಬಡಿಕೆಯನ್ನು ಮಾಡಿಕೊಂಡು ಧರ್ಮಶಾಸ್ತ್ರಕ್ಕೆ ಅನುಸಾರವಾಗಿ ನಡೆಯೋಣ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)3 ನೀನು ಹಾಗು ನಮ್ಮ ದೇವರ ಆಜ್ಞೆಯನ್ನು ಗೌರವಿಸುವವರು ಹೇಳಿಕೊಟ್ಟ ಬುದ್ಧಿವಾದಾನುಸಾರ ಅಂಥ ಎಲ್ಲ ಹೆಂಡತಿಯರನ್ನೂ ಅವರ ಮಕ್ಕಳನ್ನೂ ಕಳುಹಿಸಿಬಿಡುವುದಾಗಿ, ಈಗಲೇ ನಮ್ಮ ದೇವರಿಗೆ ಪ್ರತಿಜ್ಞೆಮಾಡಿ, ಧರ್ಮಶಾಸ್ತ್ರಕ್ಕನುಸಾರ ನಡೆಯೋಣ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)3 ಸ್ವಾವಿುಯಾದ ನೀನೂ ನಮ್ಮ ದೇವರ ಆಜ್ಞೆಯನ್ನು ಗೌರವಿಸುವವರೂ ಹೇಳಿಕೊಟ್ಟ ಬುದ್ಧಿವಾದಾನುಸಾರ ಇಂಥ ಎಲ್ಲಾ ಹೆಂಡತಿಯರನ್ನೂ ಅವರ ಮಕ್ಕಳನ್ನೂ ಕಳುಹಿಸಿಬಿಡುವದಾಗಿ ಈಗಲೇ ನಮ್ಮ ದೇವರಿಗೆ ಪ್ರತಿಜ್ಞೆಮಾಡಿ ಧರ್ಮಶಾಸ್ತ್ರಕ್ಕನುಸಾರವಾಗಿ ನಡೆಯೋಣ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್3 ಈಗ ನಾವು ದೇವರ ಮುಂದೆ ಅನ್ಯರಾದ ಹೆಂಡತಿಯರನ್ನೂ ಅವರ ಮಕ್ಕಳನ್ನೂ ತೊರೆದುಬಿಡುತ್ತೇವೆಂದು ಒಡಂಬಡಿಕೆ ಮಾಡೋಣ. ಹೀಗೆ ಮಾಡುವುದರಿಂದ ಎಜ್ರನ ಮತ್ತು ದೇವರ ಕಟ್ಟಳೆಗಳನ್ನು ಗೌರವಿಸುವವರ ಸಲಹೆಯನ್ನು ನಾವು ಅನುಸರಿಸುವವರಾಗಿರುತ್ತೇವೆ; ನಾವು ದೇವರ ಕಟ್ಟಳೆಗೆ ವಿಧೇಯರಾಗುತ್ತೇವೆ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ3 ಆದಕಾರಣ ನಮ್ಮ ಒಡೆಯನಾದ ನಿನ್ನ ಯೋಚನೆಯ ಪ್ರಕಾರವಾಗಿಯೂ, ನಮ್ಮ ದೇವರ ಆಜ್ಞೆಗೆ ಭಯಪಡುವವರ ಯೋಚನೆಯ ಪ್ರಕಾರವಾಗಿಯೂ ಆ ಸಮಸ್ತ ಸ್ತ್ರೀಯರನ್ನೂ, ಅವರಿಂದ ಹುಟ್ಟಿದವರನ್ನೂ ಕಳುಹಿಸಿಬಿಡಲು, ಈಗಲೇ ನಮ್ಮ ದೇವರ ಮುಂದೆ ಒಡಂಬಡಿಕೆ ಮಾಡಿಕೊಂಡು, ದೇವರ ನಿಯಮದ ಪ್ರಕಾರ ನಡೆಯೋಣ. ಅಧ್ಯಾಯವನ್ನು ನೋಡಿ |
“ನಮ್ಮ ಪೂರ್ವಿಕರು ಈ ಗ್ರಂಥದಲ್ಲಿ ಬರೆದಿರುವ ಯೆಹೋವನ ಆಜ್ಞೆಗಳನ್ನೆಲ್ಲಾ ಕೈಕೊಳ್ಳದೆ ಹೋದುದರಿಂದಲೇ ಯೆಹೋವನು ತನ್ನ ಮಹಾರೌದ್ರವನ್ನು ನಮ್ಮ ಮೇಲೆ ಸುರಿದಿದ್ದಾನೆ; ಆದುದರಿಂದ ನೀವು ನನಗೋಸ್ಕರವೂ ಹಾಗೂ ಇಸ್ರಾಯೇಲ್ಯರಲ್ಲಿ, ಯೆಹೂದ್ಯರಲ್ಲಿ ಉಳಿದಿರುವವರಿಗೋಸ್ಕರವೂ ಯೆಹೋವನ ಬಳಿಗೆ ಹೋಗಿ ನಮಗೆ ಸಿಕ್ಕಿರುವ ಈ ಗ್ರಂಥದ ವಾಕ್ಯಗಳ ಅರ್ಥವನ್ನು ವಿವರವಾಗಿ ತಿಳಿದು ಬರಲು” ಆಜ್ಞಾಪಿಸಿದನು.