Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಇಬ್ರಿಯರಿಗೆ 7:2 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

2 ಅವನಿಗೆ ಅಬ್ರಹಾಮನು ತಾನು ಜಯಿಸಿಕೊಂಡು ಬಂದಿದ್ದ ಎಲ್ಲಾ ವಸ್ತುಗಳಲ್ಲಿ ಹತ್ತನೆಯ ಒಂದು ಭಾಗವನ್ನು ಕೊಟ್ಟನು. “ಮೆಲ್ಕಿಜೆದೇಕ್”, ಎಂಬ ಹೆಸರಿಗೆ ಮೊದಲು “ನೀತಿಯ ರಾಜ” ಎಂದೂ, ಅನಂತರ “ಸಾಲೇಮಿನ ರಾಜ” ಎಂದರೆ “ಸಮಾಧಾನದ ರಾಜ” ಎಂದೂ ಅರ್ಥ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

2 ಆಗ ಅಬ್ರಹಾಮನು ತಾನು ಗೆದ್ದು ತಂದಿದ್ದ ಎಲ್ಲದರಲ್ಲೂ ದಶಮಾಂಶವನ್ನು ಆತನಿಗೆ ಕೊಟ್ಟು ಗೌರವಿಸಿದನು. ಮೆಲ್ಕಿಸದೇಕ ಎಂಬ ಹೆಸರಿನ ಮೂಲಾರ್ಥ, ‘ನ್ಯಾಯನೀತಿಯ ಅರಸ.’ ಅಲ್ಲದೆ, ಆತನು ಸಾಲೇಮಿನ ಅರಸನೂ ಆಗಿದ್ದನು. ಆದ್ದರಿಂದ ‘ಶಾಂತಿಸಮಾಧಾನದ ಅರಸ’ ಎಂಬ ಅರ್ಥವೂ ಉಂಟು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

2 ಅವನಿಗೆ ಅಬ್ರಹಾಮನು ತಾನು ಜಯಿಸಿಕೊಂಡು ಬಂದಿದ್ದ ಎಲ್ಲಾ ವಸ್ತುಗಳಲ್ಲಿ ಹತ್ತನೆಯ ಒಂದು ಭಾಗವನ್ನು ಕೊಟ್ಟನು. ಅವನ ಹೆಸರಿನ ಅರ್ಥವು ನೀತಿರಾಜ ಎಂಬದು; ಇದಲ್ಲದೆ ಅವನು ಸಾಲೇವಿುನರಾಜ ಅಂದರೆ ಸಮಾಧಾನರಾಜ;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

2 ಅಬ್ರಹಾಮನು ಅವನಿಗೆ ತನ್ನಲ್ಲಿದ್ದ ಎಲ್ಲಾ ವಸ್ತುಗಳಲ್ಲಿ ಹತ್ತನೆಯ ಒಂದು ಭಾಗವನ್ನು ಕೊಟ್ಟನು. ಸಾಲೇಮಿನ ರಾಜನಾದ ಮೆಲ್ಕಿಜೆದೇಕನೆಂಬ ಹೆಸರಿಗೆ ಎರಡು ಅರ್ಥಗಳಿವೆ. ಮೆಲ್ಕಿಜೆದೇಕನೆಂದರೆ, “ನೀತಿರಾಜ” ಎಂಬರ್ಥ. “ಸಾಲೇಮಿನ ರಾಜ”ನೆಂದರೆ “ಸಮಾಧಾನದ ರಾಜ” ಎಂದರ್ಥ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

2 ಅಬ್ರಹಾಮನು ಎಲ್ಲವುಗಳಲ್ಲಿ ಅವನಿಗೆ ಹತ್ತರಲ್ಲಿ ಒಂದು ಭಾಗವನ್ನು ಕೊಟ್ಟನು. ಅವನ ಹೆಸರಿಗೆ ಮೊದಲನೆಯದಾಗಿ, “ನೀತಿರಾಜನು” ಎಂದೂ ತರುವಾಯ “ಸಾಲೇಮಿನ ರಾಜ,” ಅಂದರೆ, “ಸಮಾಧಾನದ ಅರಸನು” ಎಂದರ್ಥ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

2 ತೆಕಾ ಅಬ್ರಾಹಾಮಾನ್ ಅಪ್ನಿ ಜಿಕುನ್ ಹಾನಲ್ಯಾ ಸಗ್ಳ್ಯಾ ಸಾಮಾನಾತ್ನಿ ಧಾತ್ಲೊ ಎಕ್ ವಾಟೊ ದಿಲ್ಯಾನ್, ತೆಜಾ ನಾವಾಚೊ ಅರ್ತ್ “ನಿತಿವಂತ್ ರಾಜಾ” ಥವ್ಡೆಚ್ ನಸ್ತಾನಾ, ತೊ ಸಾಲೆಮಾಚೊ ರಾಜಾ ಮಟ್ಲ್ಯಾರ್ “ಸಮಾಧಾನಾಚೊ ರಾಜಾ”.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಇಬ್ರಿಯರಿಗೆ 7:2
26 ತಿಳಿವುಗಳ ಹೋಲಿಕೆ  

“ಲೇವಿಯರು ದೇವದರ್ಶನದ ಗುಡಾರದ ಸೇವಾಕಾರ್ಯವನ್ನು ಮಾಡುವುದಕ್ಕಾಗಿ ಇಸ್ರಾಯೇಲರಿಂದ ಸಕಲ ಪದಾರ್ಥಗಳ ಹತ್ತನೆಯ ಪಾಲನ್ನು ಗೊತ್ತುಮಾಡಿ ಕೊಟ್ಟಿದ್ದೇನೆ.


ಅವನ ದಿನಗಳಲ್ಲಿ ನೀತಿಯು ವೃದ್ಧಿಯಾಗಲಿ; ಚಂದ್ರನಿರುವವರೆಗೂ ಪರಿಪೂರ್ಣ ಸೌಭಾಗ್ಯವಿರಲಿ.


ನಿನಗೆ ಒಬ್ಬ ಮಗನು ಹುಟ್ಟುವನು, ಅವನು ಸಮಾಧಾನ ಪುರುಷನಾಗಿರುವನು. ನಾನು ಅವನ ಸುತ್ತಣ ಎಲ್ಲಾ ವಿರೋಧಿಗಳನ್ನು ಅಡಗಿಸಿ, ಅವನಿಗೆ ಸಮಾಧಾನವನ್ನು ಅನುಗ್ರಹಿಸುವೆನು. ಅವನಿಗೆ ಸೊಲೊಮೋನನೆಂಬ ಹೆಸರಿರುವುದು. ಅವನ ಕಾಲದಲ್ಲಿ ಇಸ್ರಾಯೇಲರಿಗೆ ಸಮಾಧಾನವನ್ನೂ ಮತ್ತು ಸೌಭಾಗ್ಯವನ್ನೂ ದಯಪಾಲಿಸುವೆನು.


ಇಸ್ರಾಯೇಲರ ಶರಣನೂ, ದೇವರೂ ಆಗಿರುವಾತನು ಹೇಳಿದ್ದೇನೆಂದರೆ, ದೇವರಲ್ಲಿ ಭಯಭಕ್ತಿಯುಳ್ಳವನಾಗಿ ಜನರನ್ನು ನೀತಿಯಿಂದ ಆಳುವವನು,


ದಾವೀದನು ಇಸ್ರಾಯೇಲ್ಯರ ಅರಸನಾಗಿ, ಎಲ್ಲಾ ಪ್ರಜೆಗಳನ್ನು ನೀತಿನ್ಯಾಯಗಳಿಂದ ನಡೆಸುತ್ತಾ ಬಂದನು.


ಕುರಿಹಿಂಡುಗಳಲ್ಲಿ ಹತ್ತರಲ್ಲೊಂದು ಭಾಗವನ್ನು ತೆಗೆದುಕೊಳ್ಳುವನು. ನೀವು ಅವನಿಗೆ ದಾಸರಾಗಿರಬೇಕು.


ನಿಮ್ಮ ಧಾನ್ಯ, ದ್ರಾಕ್ಷಿಗಳಲ್ಲಿ ಹತ್ತರಷ್ಟನ್ನು ತೆಗೆದುಕೊಂಡು ತನ್ನ ಪ್ರಧಾನರಿಗೂ, ಪರಿವಾರದವರಿಗೂ ಕೊಡುವನು.


ಇದಲ್ಲದೆ ನಾನು ಸ್ತಂಭವಾಗಿ ನಿಲ್ಲಿಸಿದ ಈ ಕಲ್ಲು ದೇವರ ಮನೆಯಾಗುವುದು. ಆಗ ನೀನು ನನಗೆ ಕೊಡುವುದರಲ್ಲೆಲ್ಲಾ ಹತ್ತರಲ್ಲಿ ಒಂದು ಭಾಗವನ್ನು ನಿನಗೆ ನಾನು ಖಂಡಿತವಾಗಿ ಕೊಡುವೆನು” ಎಂದು ಹರಕೆಮಾಡಿಕೊಂಡನು.


ಯೇಸುಕ್ರಿಸ್ತನಲ್ಲಿ ನಂಬಿಕೆ ಇಡುವವರನ್ನು ತಮ್ಮೊಡನೆ ಸತ್ಸಂಬಂಧದಲ್ಲಿ ಇರಿಸಿಕೊಳ್ಳುವುದಕ್ಕಾಗಿಯು ತಾನು ಸತ್ಯಸ್ವರೂಪನೂ, ನೀತಿವಂತನೂ ಎಂದು ವ್ಯಕ್ತಪಡಿಸುವ ಸಲುವಾಗಿಯೂ ಪ್ರಸ್ತುತ ಕಾಲದಲ್ಲಿ ದೇವರು ಹೀಗೆ ಮಾಡಿದರು.


ಆತನೇ ನಮಗೆ ಸಮಾಧಾನಪ್ರದನು. ಅಶ್ಶೂರ್ಯರು ನಮ್ಮ ದೇಶದಲ್ಲಿ ನುಗ್ಗಿ, ನಮ್ಮ ಅರಮನೆಗಳನ್ನು ತುಳಿದುಹಾಕುವಾಗ, ನಾವು ಅವರಿಗೆ ವಿರುದ್ಧವಾಗಿ ಏಳು ಪಾಲಕರನ್ನು ಹೌದು ಎಂಟು ಪುರುಷಶ್ರೇಷ್ಠರನ್ನು ನೇಮಿಸುವೆವು.


ದನಗಳಾಗಲಿ ಇಲ್ಲವೇ ಹಿಂಡಿನ ಆಡು ಅಥವಾ ಕುರಿಗಳಾಗಲಿ ಕುರುಬನು ಲೆಕ್ಕಮಾಡಿದ ಎಲ್ಲಾ ಪಶುಗಳಲ್ಲಿ ಪ್ರತಿ ಹತ್ತನೆಯದು ಯೆಹೋವನಿಗೆ ಮೀಸಲಾಗಿರಬೇಕು.


“ಇಗೋ, ಒಬ್ಬ ಕನ್ನಿಕೆಯು ಗರ್ಭಿಣಿಯಾಗಿ ಮಗನನ್ನು ಹೆರುವಳು; ಆತನಿಗೆ ಇಮ್ಮಾನುವೇಲ್ ಎಂದು ಹೆಸರಿಡುವರು. ‘ದೇವರು ನಮ್ಮ ಕೂಡ ಇದ್ದಾನೆಂದು’ ಈ ಹೆಸರಿನ ಅರ್ಥ.”


ಈ ಮೆಲ್ಕಿಜೆದೇಕನು ಸಾಲೇಮಿನ ಅರಸನೂ ಮಹೋನ್ನತನಾದ ದೇವರ ಯಾಜಕನೂ ಆಗಿದ್ದನು. ಈತನು ರಾಜರನ್ನು ಸಂಹಾರ ಮಾಡಿ ಹಿಂದಿರುಗಿ ಬರುತ್ತಿದ್ದ ಅಬ್ರಹಾಮನನ್ನು ಎದುರುಗೊಂಡು ಅವನನ್ನು ಆಶೀರ್ವದಿಸಿದನು.


ಅವನಿಗೆ ತಂದೆಯಿಲ್ಲ, ತಾಯಿಯಿಲ್ಲ, ವಂಶಾವಳಿಯೂ ಇಲ್ಲ. ಹುಟ್ಟು, ಸಾವು ಇಲ್ಲ. ಆತನು ದೇವರ ಕುಮಾರನಿಗೆ ಹೋಲಿಕೆಯಾಗಿದು, ನಿರಂತರವಾಗಿ ಯಾಜಕನಾಗಿರುವನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು