ಇಬ್ರಿಯರಿಗೆ 5:5 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20195 ಅದೇ ರೀತಿಯಾಗಿ ಕ್ರಿಸ್ತನು, ಸಹ ತನ್ನನ್ನು ಘನಪಡಿಸಿಕೊಂಡು ತಾನೇ ಮಹಾಯಾಜಕನನ್ನಾಗಿ ಮಾಡಿಕೊಳ್ಳಲಿಲ್ಲ. ಆದರೆ “ನೀನು ನನ್ನ ಮಗನು, ಈ ಹೊತ್ತು ನಾನು ನಿನಗೆ ತಂದೆಯಾದೆನು” ಎಂದು ದೇವರೇ ಹೇಳಿದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)5 ಅದೇ ರೀತಿ ಕ್ರಿಸ್ತಯೇಸು, ಪ್ರಧಾನಯಾಜಕನೆಂಬ ಉನ್ನತ ಪದವಿಗೆ ತನ್ನನ್ನೇ ಏರಿಸಿಕೊಳ್ಳಲಿಲ್ಲ. “ನೀನೇ ನನ್ನ ಪುತ್ರನು; ನಾನೇ ನಿನ್ನನ್ನು ಪಡೆದಿದ್ದೇನೆ,” ಎಂದ ದೇವರೇ ಅವರನ್ನು ಆ ಪದವಿಗೆ ಏರಿಸಿದರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)5 ಹಾಗೆಯೇ ಕ್ರಿಸ್ತನು ಸಹ ತನ್ನನ್ನು ಘನಪಡಿಸಿಕೊಂಡು ತನ್ನನ್ನು ತಾನೇ ಮಹಾಯಾಜಕನನ್ನಾಗಿ ಮಾಡಿಕೊಳ್ಳಲಿಲ್ಲ; ಆದರೆ - ನನಗೆ ನೀನು ಮಗನು; ನಾನೇ ಈಹೊತ್ತು ನಿನ್ನನ್ನು ಪಡೆದಿದ್ದೇನೆ ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್5 ಕ್ರಿಸ್ತನೂ ಇದೇ ರೀತಿ ನೇಮಿಸಲ್ಪಟ್ಟನು. ಆತನು ಪ್ರಭಾವದ ಪ್ರಧಾನಯಾಜಕನಾಗಿ ತನ್ನನ್ನು ತಾನೇ ಆರಿಸಿಕೊಳ್ಳಲಿಲ್ಲ. ಆದರೆ ದೇವರು ಆತನನ್ನು ಆರಿಸಿದನು. ದೇವರು ಕ್ರಿಸ್ತನಿಗೆ ಹೀಗೆ ಹೇಳಿದನು: “ನೀನು ನನ್ನ ಮಗನು. ಈ ದಿನ ನಾನು ನಿನ್ನ ತಂದೆಯಾದೆನು.” ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ5 ಅದೇ ರೀತಿಯಾಗಿ ಕ್ರಿಸ್ತ ಯೇಸು ಮಹಾಯಾಜಕರಾಗುವ ಮಹಿಮೆಯನ್ನು ತಮ್ಮ ಮೇಲೆ ತಾವೇ ತೆಗೆದುಕೊಳ್ಳಲಿಲ್ಲ. ಆದರೆ ದೇವರು, “ನೀನು ನನ್ನ ಪುತ್ರನು, ಇಂದು ನಾನು ನಿನ್ನ ತಂದೆಯಾಗಿದ್ದೇನೆ!” ಎಂದು ಹೇಳಿದರು. ಅಧ್ಯಾಯವನ್ನು ನೋಡಿದೆವಾಚಿ ಖರಿ ಖಬರ್5 ತೆಚ್ಯಾ ಸಾರ್ಕೆಚ್ ಕ್ರಿಸ್ತಾನ್‍ಬಿ ಶ್ರೆಸ್ಟ್ ಯಾಜಕಾಚೆ ಮೊಟೆಪಾನ್ ಅಪ್ನಿಚ್ ಹೊವ್ನ್ ಘೆವ್ಕ್ ನಾ, ತೆಕಾ ಯಾಜಕ್ ಕರುನ್ ನೆಮಲ್ಲ್ಯಾ ತ್ಯಾ ದೆವಾನ್ ತೆಕಾ, ತಿಯಾ ಮಾಜೊ ಲೆಕ್, ಆಜ್ಚ್ಯಾ ದಿಸಿ ಮಿಯಾ ತುಕಾ ಬಾಬಾ ಹೊಲಾ ಮಟ್ಲ್ಯಾನ್. ಅಧ್ಯಾಯವನ್ನು ನೋಡಿ |