ಆಮೋಸ 9:13 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201913 ಯೆಹೋವನು ಇಂತೆನ್ನುತ್ತಾನೆ, “ಇಗೋ, ದಿನಗಳು ಬರುವವು, ಆ ಕಾಲದಲ್ಲಿ ಉಳುವವನು ಕೊಯ್ಯುವವನನ್ನೂ, ದ್ರಾಕ್ಷಿಯನ್ನು ತುಳಿಯುವವನು ಬಿತ್ತುವವನನ್ನೂ ಹಿಂದಟ್ಟುವರು. ಆಗ ಬೆಟ್ಟಗಳು ಹೊಸ ಸಿಹಿ ದ್ರಾಕ್ಷಾರಸವನ್ನು ಸುರಿಸುವವು, ಎಲ್ಲಾ ಗುಡ್ಡಗಳು ಕರಗುವವು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)13 ಕಾಲ ಬರುವುದು: ಆಗ - ಹೊಸ ಬಿತ್ತನೆಯಾಗುವುದು ಕೊಯ್ಯುವವನ ಹಿಂದೆಯೆ; ಹೊಸ ಫಸಲು ಸಿದ್ಧವಾಗುವುದು ದ್ರಾಕ್ಷೆ ತುಳಿಯುವವನ ಮುಂದೆಯೆ. ಸುರಿಸುವುವು ದ್ರಾಕ್ಷಾರಸವನು ಬೆಟ್ಟಗಳು ಕರಗುವಂತಿರುವುವು ಅದರಿಂದ ಎಲ್ಲ ಗುಡ್ಡಗಳು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)13 ಯೆಹೋವನು ಇಂತೆನ್ನುತ್ತಾನೆ - ಆಹಾ, ಮುಂದಿನ ಕಾಲದಲ್ಲಿ ಉಳುವವನು ಕೊಯ್ಯುವವನ ಹಿಂದೆ, ದ್ರಾಕ್ಷೆತುಳಿಯುವವನು ಬಿತ್ತುವವನ ಹಿಂದೆ ಒತ್ತಿಕೊಂಡು ಹೋಗುವರು; ಬೆಟ್ಟಗಳು ದ್ರಾಕ್ಷಾರಸವನ್ನು ಸುರಿಸುವವು, ಎಲ್ಲಾ ಗುಡ್ಡಗಳು ಕರಗುತ್ತವೋ ಎಂಬಂತಿರುವವು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್13 ಯೆಹೋವನು ಹೇಳುವುದೇನೆಂದರೆ, “ಒಂದು ಸಮಯವು ಬರುವುದು, ಆಗ ಉಳುವವನು ಕೊಯ್ಯುವವನನ್ನೇ ಮೀರಿಸಿ ಮುಂದೆ ಹೋಗುವನು. ದ್ರಾಕ್ಷಿನೆಡುವವನು ದ್ರಾಕ್ಷಿಯನ್ನು ಕೊಯ್ಯುವನನ್ನೇ ಮೀರಿಸಿ ಮುಂದೆ ಹೋಗುವನು. ಬೆಟ್ಟಗಳಿಂದಲೂ ಪರ್ವತಗಳಿಂದಲೂ ಸಿಹಿ ದ್ರಾಕ್ಷಾರಸವು ಹರಿದುಬರುವುದು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ13 ಯೆಹೋವ ದೇವರು ಹೇಳುವುದೇನೆಂದರೆ: “ದಿನಗಳು ಬರುವುವು,” “ಆಗ ಉಳುವವನು ಕೊಯ್ಯುವವನನ್ನೂ, ದ್ರಾಕ್ಷಿ ಮಾರುವವನು ಬೀಜ ಹಾಕುವವನನ್ನೂ ಹಿಂದಟ್ಟುವರು. ಆಗ ಬೆಟ್ಟಗಳು ಹೊಸ ಸಿಹಿ ದ್ರಾಕ್ಷಾರಸವನ್ನು ಸುರಿಯುವುವು, ಗುಡ್ಡಗಳೆಲ್ಲಾ ಕರಗುವುವು. ಅಧ್ಯಾಯವನ್ನು ನೋಡಿ |