ಆದಿಕಾಂಡ 40:22 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201922 ಆದರೆ ಮುಖ್ಯ ಅಡಿಗೆಭಟ್ಟನನ್ನು ಫರೋಹನು ಗಲ್ಲಿಗೆ ಹಾಕಿಸಿದನು. ಹೀಗೆ ಯೋಸೇಫನು ಹೇಳಿದಂತೆಯೇ ಆಯಿತು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)22 ಆದರೆ ಮುಖ್ಯ ಅಡಿಗೆಭಟ್ಟನನ್ನು ನೇಣು ಹಾಕಿಸಿದ. ಹೀಗೆ ಜೋಸೆಫನು ಹೇಳಿದ ಅರ್ಥ ಕಾರ್ಯಗತವಾಯಿತು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)22 ಆದರೆ ಮುಖ್ಯ ಭಕ್ಷ್ಯಕಾರನನ್ನು ಫರೋಹನು ಗಲ್ಲಿಗೆ ಹಾಕಿಸಿದನು. ಹೀಗೆ ಯೋಸೇಫನು ಹೇಳಿದ್ದಂತೆಯೇ ಆಯಿತು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್22 ಆದರೆ ಫರೋಹನು ಭಕ್ಷ್ಯಗಾರನನ್ನು ಕೊಲ್ಲಿಸಿದನು. ಯೋಸೇಫನು ಹೇಳಿದಂತೆಯೇ ಪ್ರತಿಯೊಂದು ನಡೆಯಿತು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ22 ಆದರೆ ಮುಖ್ಯ ರೊಟ್ಟಿಗಾರನನ್ನು ಗಲ್ಲಿಗೇರಿಸಿದನು. ಹೀಗೆ ಯೋಸೇಫನು ಹೇಳಿದ ಹೇಳಿದಂತೆಯೇ ಆಯಿತು. ಅಧ್ಯಾಯವನ್ನು ನೋಡಿ |
ಹೌದು, ಬೇಲ್ತೆಶಚ್ಚರನೆಂಬ ಅಡ್ಡ ಹೆಸರನ್ನು ರಾಜನಿಂದ ಹೊಂದಿದ ಈ ದಾನಿಯೇಲನಲ್ಲಿ ಪರಮಬುದ್ಧಿಯೂ, ಜ್ಞಾನವೂ, ವಿವೇಕವೂ, ಕನಸುಗಳ ಅರ್ಥವನ್ನು ತಿಳಿಸುವ ಜಾಣತನವೂ, ಒಗಟುಬಿಡಿಸುವ ಚಮತ್ಕಾರವೂ, ಕಠಿಣವಾದ ಸಂಗತಿಗಳನ್ನು ತಿಳಿಸುವ ಚಾತುರ್ಯವೂ ತೋರಿಬಂದವು. ಆದುದರಿಂದಲೇ ಆತನನ್ನು ಹಾಗೆ ನೇಮಿಸಿದನು. ಈಗ ಆ ದಾನಿಯೇಲನನ್ನು ಕರೆಯಿಸಿದರೆ ಅವನು ಬರಹದ ಅರ್ಥವನ್ನು ವಿವರಿಸುವನು” ಎಂದಳು.