Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಆದಿಕಾಂಡ 38:29 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

29 ಅದು ಕೈಯನ್ನು ಹಿಂದಕ್ಕೆ ತೆಗೆಯಲು, ಅದರೊಡನೆ ಇದ್ದ ಮತ್ತೊಂದು ಶಿಶುವು ಹೊರಗೆ ಬಂದಿತು. ಸೂಲಗಿತ್ತಿಯು ಇದನ್ನು ಕಂಡು, “ನೀನು ಛೇದಿಸಿಕೊಂಡು ಬಂದೆಯಾ?” ಎಂದು ಹೇಳಿ, ಅದಕ್ಕೆ “ಪೆರೆಚ್” ಎಂದು ಹೆಸರಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

29 ಆದರೆ ಅದು ಕೈಯನ್ನು ಹಿಂದಕ್ಕೆ ತೆಗೆದುಕೊಂಡಿತು. ಅದರೊಡನೆ ಇದ್ದ ಇನ್ನೊಂದು ಕೂಸು ಹೊರಗೆ ಬಂದಿತು. ಇದನ್ನು ಕಂಡ ಸೂಲಗಿತ್ತಿ, “ನೀನು ಕಿತ್ತುಕೊಂಡು ಬಂದಿರುತ್ತೀಯಲ್ಲಾ,” ಎಂದಳು. ಈ ಕಾರಣ ಆ ಮಗುವಿಗೆ ‘ಪೆರೆಚ್’ ಎಂದು ಹೆಸರಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

29 ಸೂಲಗಿತ್ತಿಯು ಇದನ್ನು ಕಂಡು - ನೀನು ಛೇದಿಸಿಕೊಂಡು ಬಂದದ್ದೇನು ಎಂದು ಹೇಳಿದ್ದದರಿಂದ ಅದಕ್ಕೆ ಪೆರೆಚ್ ಎಂದು ಹೆಸರಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

29 ಆದರೆ ಆ ಮಗು ತನ್ನ ಕೈಯನ್ನು ಹಿಂದಕ್ಕೆ ಎಳೆದುಕೊಂಡಿತು. ಆಮೇಲೆ ಮತ್ತೊಂದು ಮಗುವು ಮೊದಲು ಹುಟ್ಟಿತು. ಆದ್ದರಿಂದ ದಾದಿಯು, “ನೀನು ಮೊದಲನೆಯವನನ್ನು ಛೇದಿಸಿಕೊಂಡು ಬಂದೆ” ಅಂದಳು. ಆದ್ದರಿಂದ ಅವರು ಆ ಮಗುವಿಗೆ “ಪೆರೆಚ್” ಎಂದು ಹೆಸರಿಟ್ಟರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

29 ಆ ಮಗುವು ತನ್ನ ಕೈಯನ್ನು ಹಿಂದಕ್ಕೆ ಎಳೆದಾಗ, ಅವನ ಸಹೋದರನು ಹೊರಗೆ ಬಂದನು. ಆಗ ಅವಳು, “ನೀನು ಕಿತ್ತುಕೊಂಡು ಹೊರಗೆ ಬಂದೆಯಾ?” ಎಂದಳು. ಹೀಗೆ ಅವನಿಗೆ ಪೆರೆಚ್ ಎಂದು ಹೆಸರಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಆದಿಕಾಂಡ 38:29
10 ತಿಳಿವುಗಳ ಹೋಲಿಕೆ  

ಯೆಹೂದನಿಗೆ ತಾಮಾರಳಲ್ಲಿ ಪೆರೆಚನು, ಜೆರಹನು ಹುಟ್ಟಿದರು. ಪೆರೆಚನ ಮಗನು ಹೆಚ್ರೋನನು.


ಯೆಹೂದನ ಸೊಸೆಯಾದ ತಾಮಾರಳು ಅವನಿಂದ ಪೆರೆಚ್ ಮತ್ತು ಜೆರಹ ಎಂಬವರನ್ನು ಹೆತ್ತಳು.


ಯೆಹೂದನ ಕುಲದಲ್ಲಿ ಉಳಿದ ಕುಟುಂಬಗಳು ಯಾವುವೆಂದರೆ: ಶೇಲಹನ ವಂಶಸ್ಥರಾದ ಶೇಲಾನ್ಯರು, ಪೆರೆಹನ ವಂಶಸ್ಥರಾದ ಪೆರೆಚ್ಯರು, ಜೆರಹನ ವಂಶಸ್ಥರಾದ ಜೆರಹಿಯರು ಇವರೇ.


ಯೆಹೂದನ ಮಕ್ಕಳು: ಏರ್, ಓನಾನ್, ಶೇಲಾಹ, ಪೆರೆಚ್, ಜೆರಹ. ಇವರಲ್ಲಿ ಏರ್, ಓನಾನ್ ಎಂಬವರು ಕಾನಾನ್ ದೇಶದಲ್ಲೇ ಸತ್ತು ಹೋಗಿದ್ದರು. ಪೆರೆಚನ ಮಕ್ಕಳು: ಹೆಚ್ರೋನ್, ಹಾಮೂಲ್.


ಯೆರೂಸಲೇಮಿನಲ್ಲಿ ವಾಸಿಸುತ್ತಿದ್ದ ಪೆರೆಚ್ ಸಂತಾನದ ರಣವೀರರು ನಾನೂರ ಆರುವತ್ತೆಂಟು ಮಂದಿ.


ಯೆಹೋವನು ಈ ಸ್ತ್ರೀಯ ಮೂಲಕ ನಿನಗೆ ಅನುಗ್ರಹಿಸುವ ಸಂತಾನದಿಂದ ನಿನ್ನ ಮನೆಯು ಯೆಹೂದನಿಗೆ ತಾಮಾರಳಿಂದ ಹುಟ್ಟಿದ ಪೆರೆಚನ ಮನೆಗೆ ಸಮಾನವಾಗಲಿ” ಅಂದರು.


ನಹಶೋನನು ಅಮ್ಮಿನಾದಾಬನ ಮಗನು; ಅಮ್ಮಿನಾದಾಬನು ಅದ್ಮಿನನ ಮಗನು; ಅದ್ಮಿನನು ಆರ್ನೈಯನ ಮಗನು; ಆರ್ನೈಯನು ಎಸ್ರೋನನ ಮಗನು; ಎಸ್ರೋನನು ಪೆರೆಚನ ಮಗನು;


ಯೆರೂಸಲೇಮಿನಲ್ಲಿ, ಯೆಹೂದ ಮತ್ತು ಬೆನ್ಯಾಮೀನ್ ಕುಲಗಳವರಲ್ಲಿ ಕೆಲವರು ವಾಸವಾಗಿದ್ದರು. ಯೆಹೂದ ಕುಲದವರಲ್ಲಿ: ಅತಾಯನು, ಇವನು ಉಜ್ಜೀಯನ ಮಗ; ಇವನು ಜೆಕರ್ಯನ ಮಗ; ಇವನು ಅಮರ್ಯನ ಮಗ; ಇವನು ಶೆಫಟ್ಯನ ಮಗ; ಇವನು ಮಹಲಲೇಲನ ಮಗ, ಇವನು ಪೆರೆಚ್ ಸಂತಾನದವನು.


ಯೆಹೂದ ಕುಲದ ಊತೈ ಅಮ್ಮೀಹೂದನ ಮಗ. ಅಮ್ಮಿಹೂದನು ಒಮ್ರಿಯ ಮಗ. ಇವನು ಇಮ್ರಿಯ, ಮಗ. ಇವನು ಬಾನಿಯ ಮಗ. ಇವನು ಯೆಹೂದನ ಮಗನಾದ ಪೆರೆಚನ ಸಂತಾನದವನು.


ಆಕೆಯು ಹೆರುವಾಗ ಒಂದು ಮಗುವು ಮುಂದಕ್ಕೆ ಕೈಚಾಚಲು ಸೂಲಗಿತ್ತಿಯು, “ಇದು ಮೊದಲು ಹೊರಗೆ ಬಂದದ್ದು” ಎಂದು ಹೇಳಿ ಅದರ ಕೈಗೆ ಕೆಂಪು ದಾರವನ್ನು ಕಟ್ಟಿದಳು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು