ಆದಿಕಾಂಡ 30:33 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201933 ಹೀಗಿದ್ದರೆ ಬರುವ ಕಾಲದಲ್ಲಿ ನನ್ನ ಸಂಬಳಕ್ಕಾಗಿ ನಾನು ನಿನ್ನ ಮುಂದೆ ಬಂದಾಗ ನನ್ನ ಪ್ರಾಮಾಣಿಕತೆಯೇ ನನಗೆ ಸಾಕ್ಷಿ ಕೊಡುವುದು. ಆಡುಗಳಲ್ಲಿ ಚುಕ್ಕೆ ಮಚ್ಚೆಗಳಿಲ್ಲದ್ದು, ಕುರಿಗಳಲ್ಲಿ ಕಪ್ಪಿಲ್ಲದ್ದು, ನನ್ನ ಬಳಿಯಲ್ಲಿ ಸಿಕ್ಕಿದರೆ ಅದನ್ನು ಕದ್ದದ್ದೆಂದು ಎಣಿಸಬಹುದು” ಎಂದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)33 ಇನ್ನು ಮೇಲೆ ನೀವು ಬಂದು ನನ್ನವುಗಳನ್ನು ಪರೀಕ್ಷಿಸುವಾಗ ನಾನು ಪ್ರಮಾಣಿಕನೋ ಇಲ್ಲವೋ ಎಂಬುದು ಪ್ರತ್ಯಕ್ಷವಾಗುವುದು. ಆಡುಗಳಲ್ಲಿ ಚುಕ್ಕೆ ಮಚ್ಚೆ ಇಲ್ಲದ್ದೂ ಕುರಿಗಳಲ್ಲಿ ಕಪ್ಪಲ್ಲದ್ದೂ ನನ್ನವುಗಳಲ್ಲಿ ಸಿಕ್ಕಿದರೆ, ಅದನ್ನು ಕದ್ದು ತಂದದ್ದೆಂದು ಎಣಿಸಬಹುದು,” ಎಂದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)33 ನೀನು ಇನ್ನು ಮೇಲೆ ಬಂದು ನಾನು ಪಡೆದದ್ದನ್ನು ಪರೀಕ್ಷಿಸುವಾಗ ನಾನು ಪ್ರಾಮಾಣಿಕನೋ ಅಪ್ರಾಮಾಣಿಕನೋ ಎಂಬದು ಪ್ರತ್ಯಕ್ಷವಾಗುವದು. ಆಡುಗಳಲ್ಲಿ ಚುಕ್ಕೆ ಮಚ್ಚೆಯಿಲ್ಲದ್ದೂ ಕುರಿಗಳಲ್ಲಿ ಕಪ್ಪಲ್ಲದ್ದೂ ನನ್ನ ಬಳಿಯಲ್ಲಿ ಸಿಕ್ಕಿದರೆ ಅದನ್ನು ಕದ್ದದ್ದೆಂದು ಎಣಿಸಬಹುದು ಅಂದನು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್33 ಮುಂದಿನ ದಿನಗಳಲ್ಲಿ ನೀನು ಬಂದು ಪರೀಕ್ಷಿಸಿದಾಗ ನಾನು ಯಥಾರ್ಥನೊ ಇಲ್ಲವೊ ಎಂಬುದನ್ನು ನೀನು ಸುಲಭವಾಗಿ ಕಂಡುಕೊಳ್ಳಬಹುದು. ನಾನೇನಾದರೂ ಚುಕ್ಕೆಯಿಲ್ಲದ ಮೇಕೆಗಳನ್ನಾಗಲಿ ಅಥವಾ ಕಪ್ಪಿಲ್ಲದ ಕುರಿಗಳನ್ನಾಗಲಿ ಹೊಂದಿದ್ದರೆ, ನಾನು ಅದನ್ನು ಕದ್ದುಕೊಂಡದ್ದೆಂದು ನೀನು ಪರಿಗಣಿಸಬಹುದು” ಎಂದು ಹೇಳಿದನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ33 ಹೀಗಿದ್ದರೆ ಬರುವ ಕಾಲದಲ್ಲಿ ನನ್ನ ಸಂಬಳಕ್ಕಾಗಿ ನಾನು ನಿನ್ನ ಮುಂದೆ ಬಂದಾಗ, ನನ್ನ ಪ್ರಾಮಾಣಿಕತೆಯೇ ನನಗೆ ಸಾಕ್ಷಿಕೊಡುವುದು. ಮೇಕೆಗಳಲ್ಲಿ ಚುಕ್ಕೆ ಮತ್ತು ಮಚ್ಚೆ ಕುರಿಗಳಲ್ಲಿ ಕಂದು ಬಣ್ಣವಿಲ್ಲದವುಗಳು ನನ್ನ ಬಳಿಯಲ್ಲಿದ್ದರೆ, ಅವು ಕದ್ದವುಗಳು ಎಂದು ಎಣಿಕೆಯಾಗಿರಲಿ,” ಎಂದನು. ಅಧ್ಯಾಯವನ್ನು ನೋಡಿ |