ಆದಿಕಾಂಡ 30:31 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201931 ಅದಕ್ಕೆ ಲಾಬಾನನು, “ನಿನಗೆ ನಾನೇನು ಕೊಡಬೇಕು ಹೇಳು” ಅನ್ನಲು ಯಾಕೋಬನು, “ನನಗೆ ಏನೂ ಕೊಡಬೇಡ, ನೀನು ನನಗೆ ಈ ಒಂದು ಕಾರ್ಯ ಮಾತ್ರ ಮಾಡಿದರೆ ಸಾಕು, ನಾನು ಪುನಃ ನಿನ್ನ ಹಿಂಡನ್ನು ಮೇಯಿಸಿ ಕಾಯುವೆನು” ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)31 ಆಗ ಲಾಬಾನನು, “ನಿನಗೆ ನಾನೇನು ಕೊಡಬೇಕು ಹೇಳು?” ಎಂದನು. ಯಕೋಬನು, “ನನಗೇನೂ ಕೊಡಬೇಕಾಗಿಲ್ಲ; ಒಂದೇ ಒಂದು ಕಾರ್ಯಕ್ಕೆ ಒಪ್ಪಿಗೆ ನೀಡಿದರೆ, ನಾನು ಮತ್ತೆ ನಿಮ್ಮ ಮಂದೆಯನ್ನು ಮೇಯಿಸಿಕೊಂಡು ಬರುತ್ತೇನೆ; ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)31 ನಾನು ಸ್ವಂತ ಮನೆಗೋಸ್ಕರ ಯಾವಾಗ ಸಂಪಾದನೆ ಮಾಡಿಕೊಳ್ಳಲಿ ಎಂದು ಹೇಳಿದನು. ಲಾಬಾನನು - ನಿನಗೆ ನಾನೇನು ಕೊಡಬೇಕು ಹೇಳು ಅನ್ನಲು ಯಾಕೋಬನು - ನನಗೆ ಏನೂ ಕೊಡಬೇಡ; ಒಂದು ಕೆಲಸ ಮಾತ್ರ ಮಾಡಿದರೆ ನಾನು ತಿರಿಗಿ ನಿನ್ನ ಹಿಂಡನ್ನು ಮೇಯಿಸಿ ಕಾಯುವೆನು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್31 ಲಾಬಾನನು “ಹಾಗಾದರೆ ನಾನು ನಿನಗೇನು ಕೊಡಬೇಕು” ಎಂದು ಕೇಳಿದನು. ಯಾಕೋಬನು, “ನೀನು ನನಗೆ ಏನೂ ಕೊಡಬೇಕಾಗಿಲ್ಲ. (ನಾನು ಕೆಲಸ ಮಾಡಿದ್ದಕ್ಕೆ ನೀನು ಸಂಬಳ ಕೊಟ್ಟರೆ ಸಾಕು.) ಇದೊಂದು ಕಾರ್ಯವನ್ನು ಮಾಡು; ನಾನು ಹೋಗಿ ನಿನ್ನ ಕುರಿಗಳನ್ನು ನೋಡಿಕೊಳ್ಳುವೆ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ31 ಅದಕ್ಕೆ ಲಾಬಾನನು, “ನಿನಗೆ ನಾನು ಏನು ಕೊಡಲಿ?” ಎಂದನು. ಯಾಕೋಬನು, “ಏನೂ ಕೊಡಬೇಡ, ಒಂದು ವಿಷಯದಲ್ಲಿ ಒಪ್ಪಿಕೊಂಡರೆ, ನಾನು ಮತ್ತೆ ನಿನ್ನ ಮಂದೆಯನ್ನು ಮೇಯಿಸಿ ಕಾಯುವೆನು. ಅಧ್ಯಾಯವನ್ನು ನೋಡಿ |