ಅರಣ್ಯಕಾಂಡ 29:29 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201929 “‘ಆರನೆಯ ದಿನದಲ್ಲಿ ನಿತ್ಯ ಸರ್ವಾಂಗಹೋಮವನ್ನೂ ಅದಕ್ಕೆ ನೇಮಕವಾದ ಧಾನ್ಯದ್ರವ್ಯಗಳನ್ನೂ, ಪಾನದ್ರವ್ಯಗಳನ್ನೂ ಮಾತ್ರವಲ್ಲದೆ ದೋಷವಿಲ್ಲದ ಎಂಟು ಹೋರಿ, ಎರಡು ಟಗರು, ಹದಿನಾಲ್ಕು ಪೂರ್ಣಾಂಗವಾದ ಒಂದು ವರ್ಷದ ಕುರಿಮರಿಗಳನ್ನೂ ಸಮರ್ಪಿಸಬೇಕು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)29 ‘ಆರನೆಯ ದಿನ, ದೈನಿಕ ದಹನಬಲಿಯನ್ನೂ ಅದಕ್ಕೆ ಸಂಬಂಧಿಸಿದ ಧಾನ್ಯ ಹಾಗು ಪಾನರ್ಪಣೆಗಳ ಜೊತೆಗೆ ಕಳಂಕರಹಿತವಾದ ಎಂಟು ಹೋರಿ, ಎರಡು ಟಗರು, ವರ್ಷದ ಹದಿನಾಲ್ಕು ಕುರಿಗಳನ್ನೂ ಸಮರ್ಪಿಸಬೇಕು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)29 ಆರನೆಯ ದಿನದಲ್ಲಿ ನೀವು ನಿತ್ಯಸರ್ವಾಂಗಹೋಮವನ್ನೂ ಅದಕ್ಕೆ ನೇಮಕವಾದ ಧಾನ್ಯದ್ರವ್ಯಪಾನದ್ರವ್ಯಗಳನ್ನೂ ಮಾತ್ರವಲ್ಲದೆ ಎಂಟು ಹೋರಿ, ಎರಡು ಟಗರು, ಹದಿನಾಲ್ಕು ಪೂರ್ಣಾಂಗವಾದ ವರುಷದ ಕುರಿ ಇವುಗಳನ್ನೂ; ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್29 “ಈ ಉತ್ಸವದ ಆರನೆಯ ದಿನದಲ್ಲಿ ನೀವು ಎಂಟು ಹೋರಿಗಳನ್ನು, ಎರಡು ಟಗರುಗಳನ್ನು ಮತ್ತು ಒಂದು ವರ್ಷದ ಹದಿನಾಲ್ಕು ಗಂಡು ಕುರಿಮರಿಗಳನ್ನು ಅರ್ಪಿಸಬೇಕು. ಇವುಗಳೆಲ್ಲ ಪೂರ್ಣಾಂಗವುಳ್ಳವುಗಳಾಗಿರಬೇಕು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ29 “ ‘ಆರನೆಯ ದಿವಸದಲ್ಲಿ ದೋಷವಿಲ್ಲದ ಎಂಟು ಹೋರಿಗಳನ್ನೂ ಎರಡು ಟಗರುಗಳನ್ನೂ ಒಂದು ವರ್ಷದ ಹದಿನಾಲ್ಕು ಕುರಿಮರಿಗಳನ್ನೂ, ಅಧ್ಯಾಯವನ್ನು ನೋಡಿ |
ಉತ್ಸವಗಳಲ್ಲಿಯೂ, ಅಮಾವಾಸ್ಯೆಗಳಲ್ಲಿಯೂ, ಸಬ್ಬತ್ ದಿನಗಳಲ್ಲಿಯೂ ಇಸ್ರಾಯೇಲ್ ವಂಶದವರಿಗೆ ನೇಮಕವಾದ ಎಲ್ಲಾ ಹಬ್ಬಗಳಲ್ಲಿಯೂ ಸರ್ವಾಂಗಹೋಮ ಪಶು, ಧಾನನೈವೇದ್ಯ ಪಾನನೈವೇದ್ಯ, ಇವುಗಳನ್ನು ಒದಗಿಸುವುದು ಅರಸನ ಕರ್ತವ್ಯವಾಗಿದೆ; ಇಸ್ರಾಯೇಲ್ ವಂಶದ ದೋಷ ನಿವಾರಣೆಗಾಗಿ ಅವನು ದೋಷಪರಿಹಾರಕ ಯಜ್ಞಪಶು, ಧಾನ್ಯನೈವೇದ್ಯ, ಸರ್ವಾಂಗಹೋಮ ಪಶು, ಸಮಾಧಾನ ಯಜ್ಞಪಶು, ಇವುಗಳನ್ನು ಒಪ್ಪಿಸತಕ್ಕದ್ದು.