Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅರಣ್ಯಕಾಂಡ 25:3 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

3 ಹೀಗೆ ಇಸ್ರಾಯೇಲರು ಪೆಗೋರದ ಬಾಳನ ಭಕ್ತರಾದರು. ಯೆಹೋವನ ಕೋಪವು ಅವರ ಮೇಲೆ ಹೆಚ್ಚಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

3 ಹೀಗೆ ಇಸ್ರಯೇಲರು ಪೆಗೋರದ ‘ಬಾಳ್’ ದೇವತೆಯ ಭಕ್ತರಾದರು. ಇದರಿಂದ ಸರ್ವೇಶ್ವರ ಸ್ವಾಮಿ ಕೋಪಗೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

3 ಹೀಗೆ ಇಸ್ರಾಯೇಲ್ಯರು ಪೆಗೋರದ ಬಾಳನ ಭಕ್ತರಾದ ಹಾಗಾಯಿತು. ಆದದರಿಂದ ಅವರ ಮೇಲೆ ಯೆಹೋವನು ಕೋಪಗೊಂಡು ಮೋಶೆಗೆ -

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

3 ಹೀಗೆ ಇಸ್ರಾಯೇಲರು ಬಾಳ್ ಪೆಯೋರಿನೊಂದಿಗೆ ತಾವೇ ಕೂಡಿ ಪೂಜಿಸಿದ್ದರಿಂದ ಯೆಹೋವ ದೇವರು ಇಸ್ರಾಯೇಲಿನ ಮೇಲೆ ಕೋಪಗೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅರಣ್ಯಕಾಂಡ 25:3
13 ತಿಳಿವುಗಳ ಹೋಲಿಕೆ  

ಕಾಡಿನಲ್ಲಿ ದ್ರಾಕ್ಷಿಯ ಹಣ್ಣು ಸಿಕ್ಕಿದಂತೆ ಇಸ್ರಾಯೇಲು ನನಗೆ ಸಿಕ್ಕಿತು; ಹೊಸದಾಗಿ ಫಲಕ್ಕೆ ಬಂದ ಅಂಜೂರದ ಗಿಡದಲ್ಲಿ ಮೊದಲು ಮಾಗಿದ ಹಣ್ಣನ್ನು ಕಂಡ ಹಾಗೆ ನಿಮ್ಮ ಪೂರ್ವಿಕರನ್ನು ಕಂಡೆನು. ಆದರೆ ಅವರು ಬಾಳ್ ಪೆಗೋರಿಗೆ ಬಂದು ಬಾಳ್ ದೇವತೆಯ ಭಕ್ತರಾಗಿ ದೀಕ್ಷೆಗೊಂಡು, ತಾವು ಪ್ರೀತಿಸಿದ ದೇವತೆಯ ಹಾಗೆ ಅಸಹ್ಯರಾದರು.


ನಾವು ಪೆಗೋರದಲ್ಲಿ ಅಪರಾಧಿಗಳಾದದ್ದು ಸಾಕಾಗಲಿಲ್ಲವೋ? ಅದರ ದೆಸೆಯಿಂದ ಯೆಹೋವನ ಸಭೆಗೆ ವ್ಯಾಧಿ ಬಂದರೂ ನಾವು ಇನ್ನೂ ಅದರಿಂದ ಪೂರ್ಣ ಶುದ್ಧರಾಗಲಿಲ್ಲ.


ನಾನು ನಿಮಗೆ ದಯಪಾಲಿಸಿದ ಸ್ವತ್ತನ್ನು ನಿಮ್ಮ ದೋಷದಿಂದಲೇ ಕಳೆದುಕೊಳ್ಳುವಿರಿ. ನೀವು ನೋಡದ ದೇಶದಲ್ಲಿ ನಿಮ್ಮನ್ನು ನಿಮ್ಮ ಶತ್ರುಗಳಿಗೆ ದಾಸರನ್ನಾಗಿ ಮಾಡುವೆನು. ನೀವು ನನ್ನ ರೋಷಾಗ್ನಿಯನ್ನು ಹೆಚ್ಚಿಸಿದ್ದೀರಿ, ಅದು ನಿತ್ಯವೂ ಉರಿಯುತ್ತಿರುವುದು.


ನಿನ್ನ ಕೋಪದ ಬಲವನ್ನೂ, ಭಯಭಕ್ತಿಗೆ ಕಾರಣವಾಗಿರತಕ್ಕ ನಿನ್ನ ರೌದ್ರವನ್ನೂ ಗ್ರಹಿಸುವವರಾರು?


ಆದ್ದರಿಂದ ಯೆಹೋವನ ಕೋಪವು ಇಸ್ರಾಯೇಲರ ಮೇಲೆ ಹೆಚ್ಚಾಯಿತು. ಆತನು, “ಈ ಜನರ ಪೂರ್ವಿಕರಿಗೆ ನಾನು ಕೊಟ್ಟ ಒಡಂಬಡಿಕೆಯನ್ನು ಇವರು ಕೈಕೊಳ್ಳಲಿಲ್ಲ; ನನ್ನ ಮಾತಿಗೆ ಕಿವಿಗೊಡಲಿಲ್ಲ.


ಆಗ ಯೆಹೋವನ ಕೋಪವು ಅವರ ಮೇಲೆ ಹೆಚ್ಚಾಯಿತು. ಆತನು ಅವರನ್ನು ಸೂರೆಮಾಡುವವರ ಕೈಗೆ ಒಪ್ಪಿಸಲು ಅವರು ಅವರನ್ನು ಸೂರೆಮಾಡಿದರು. ಆತನು ಅವರನ್ನು ಸುತ್ತಣ ವೈರಿಗಳಿಗೆ ಮಾರಿಬಿಟ್ಟನು. ಅವರು ಆ ಶತ್ರುಗಳ ಮುಂದೆ ನಿಲ್ಲಲಾರದವರಾದರು.


ಆದಕಾರಣ ಮೋಶೆ ಇಸ್ರಾಯೇಲರ ಮುಖಂಡರಿಗೆ, “ಪೆಗೋರದ ಬಾಳ್ ನನ್ನು ಪೂಜಿಸುವ ಜನರು ನಿಮ್ಮ ವಶದಲ್ಲಿದ್ದರೆ ಅಂಥವನಿಗೆ ಮರಣ ಶಿಕ್ಷೆಯನ್ನು ವಿಧಿಸಬೇಕು” ಎಂದು ಆಜ್ಞಾಪಿಸಿದನು.


ಪೆಗೋರದ ಬಾಳನ ಸಂಗತಿಯಲ್ಲಿ ಬಿಳಾಮನ ಆಲೋಚನೆಯನ್ನು ಅನುಸರಿಸಿ ಇಸ್ರಾಯೇಲರನ್ನು ಯೆಹೋವನಿಗೆ ದ್ರೋಹಿಗಳನ್ನಾಗಿ ಮಾಡಿ ಸಮೂಹದವರಲ್ಲಿ ಘೋರವ್ಯಾಧಿ ಉಂಟಾಗುವಂತೆ ಮಾಡಿದವರು ಇವರೇ ಅಲ್ಲವೇ.


ಈ ಇಸ್ರಾಯೇಲರು ಯೆಹೋವನ ದೃಷ್ಟಿಯಲ್ಲಿ ಕೆಟ್ಟದನ್ನು ಮಾಡಿದರು ಹಾಗೂ ಬಾಳನನ್ನು ಸೇವಿಸಿದರು.


ಅವರು ಯೆಹೋವನನ್ನು ಬಿಟ್ಟು ಬಾಳ್, ಅಷ್ಟೋರೆತ್ ಎಂಬ ದೇವತೆಗಳನ್ನು ಪೂಜಿಸುವವರಾದರು.


ವ್ಯಭಿಚಾರಿಣಿಯರಾಗಿ ನಡೆಯುವ ನಿಮ್ಮ ಕುಮಾರಿಯರನ್ನೂ ವ್ಯಭಿಚಾರ ಮಾಡುವ ನಿಮ್ಮ ವಧುಗಳನ್ನೂ ನಾನು ದಂಡಿಸುವುದಿಲ್ಲ; ನೀವೇ ವ್ಯಭಿಚಾರಿಗಳನ್ನು ಕರೆದುಕೊಂಡು ಓರೆಯಾಗಿ ಹೋಗುತ್ತೀರಿ; ದೇವದಾಸಿಯರೊಂದಿಗೆ ಯಜ್ಞಮಾಡುತ್ತೀರಿ; ಆಹಾ, ವಿವೇಕವಿಲ್ಲದ ಜನರು ಕೆಡವಲ್ಪಡುವರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು