Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅರಣ್ಯಕಾಂಡ 22:37 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

37 ಬಾಲಾಕನು ಬಿಳಾಮನನ್ನು ಕಂಡಾಗ, “ನಿನ್ನನ್ನು ಅವಸರದಿಂದ ಕರೆಯುವುದಕ್ಕೆ ದೂತರನ್ನು ಕಳುಹಿಸಿದೆನಲ್ಲಾ? ನೀನು ಏಕೆ ಆಗಲೇ ಬರಲಿಲ್ಲ? ನಿನ್ನನ್ನು ಘನಪಡಿಸುವುದಕ್ಕೆ ನಾನು ಸಮರ್ಥನಲ್ಲವೆಂದು ಭಾವಿಸುತ್ತೀಯೋ?” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

37 ಅಲ್ಲಿ ಬಿಳಾಮನನ್ನು ಕಂಡು, “ತಮ್ಮನ್ನು ತುರ್ತಾಗಿ ಕರೆದುತರಲು ನಾನು ದೂತರನ್ನು ಕಳಿಸಿದೆನಲ್ಲವೆ? ತಾವೇಕೆ ಆಗಲೇ ಬರಲಿಲ್ಲ? ತಮಗೆ ಯೋಗ್ಯವಾದ ಸತ್ಕಾರ್ಯ ನೀಡಲು ನಾನು ಅಸಮರ್ಥನೇ?” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

37 ಬಾಲಾಕನು ಬಿಳಾಮನನ್ನು ಕಂಡಾಗ - ನಿನ್ನನ್ನು ಅವಸರದಿಂದ ಕರಿಸುವದಕ್ಕೆ ದೂತರನ್ನು ಕಳುಹಿಸಿದೆನಲ್ಲಾ; ನೀನು ಯಾಕೆ ಆಗಲೇ ಬರಲಿಲ್ಲ; ನಿನ್ನನ್ನು ಘನಪಡಿಸುವದಕ್ಕೆ ನಾನು ಸಮರ್ಥನಲ್ಲವೆಂದು ಭಾವಿಸುತ್ತೀಯೋ? ಎಂದು ಹೇಳಿದ್ದಕ್ಕೆ

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

37 ಬಾಲಾಕನು ಬಿಳಾಮನನ್ನು ಕಂಡಾಗ, “ನಿನ್ನನ್ನು ಅವಸರದಿಂದ ಕರೆಸುವುದಕ್ಕೆ ದೂತರನ್ನು ಕಳುಹಿಸಿದೆನಲ್ಲಾ. ನೀನು ಆಗಲೇ ಯಾಕೆ ಬರಲಿಲ್ಲ? ನಿನ್ನನ್ನು ಘನಪಡಿಸುವುದಕ್ಕೆ ನಾನು ಸಮರ್ಥನಲ್ಲವೆಂದು ನೀನು ಭಾವಿಸಿಕೊಂಡಿರುವಿಯಾ?” ಎಂದು ಕೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

37 ಬಾಲಾಕನು ಬಿಳಾಮನಿಗೆ, “ನಾನು ನಿನಗೆ ತುರ್ತಾಗಿ ಬರುವಂತೆ ಹೇಳಿ ಕಳುಹಿಸಲಿಲ್ಲವೋ? ನೀನು ನನ್ನ ಬಳಿಗೆ ಏಕೆ ಬರಲಿಲ್ಲ? ನಾನು ನಿನ್ನನ್ನು ಘನಪಡಿಸಲು ನಿಶ್ಚಯವಾಗಿ ಸಾಮರ್ಥ್ಯವುಳ್ಳವನಲ್ಲವೋ?” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅರಣ್ಯಕಾಂಡ 22:37
8 ತಿಳಿವುಗಳ ಹೋಲಿಕೆ  

ಆದಕಾರಣ ನನ್ನನ್ನು ಬಿಟ್ಟು ನಿನ್ನ ಊರಿಗೆ ಹೋಗಿಬಿಡು. ನಿನ್ನನ್ನು ಬಹಳವಾಗಿ ಸನ್ಮಾನಿಸಿ ಘನಪಡಿಸುವೆನೆಂದು ಹೇಳಿಕೊಂಡೆನು. ಆದರೆ ನಿನಗೆ ಸನ್ಮಾನಮಾಡದಂತೆ ಯೆಹೋವನು ಅಡ್ಡಿಮಾಡಿದ್ದಾನೆ” ಎಂದು ಹೇಳಿದನು.


ಒಬ್ಬನೇ ದೇವರಿಂದ ಬರುವ ಮಹಿಮೆಯನ್ನು ಅಪೇಕ್ಷಿಸದೇ ನಿಮ್ಮ ನಿಮ್ಮೊಳಗೇ ಪ್ರಶಂಸೆಯನ್ನು ಸ್ವೀಕರಿಸುವವರಾದ ನೀವು ಅದನ್ನು ನಂಬಲು ಹೇಗೆ ಸಾಧ್ಯ?


“ಇವೆಲ್ಲವುಗಳ ಅಧಿಕಾರವನ್ನೂ ಇವುಗಳ ವೈಭವವನ್ನೂ ನಿನಗೆ ಕೊಡುವೆನು; ಇದೆಲ್ಲಾ ನನಗೆ ಕೊಡಲ್ಪಟ್ಟಿದೆ, ಇದನ್ನು ನನ್ನ ಮನಸ್ಸು ಬಂದವನಿಗೆ ಕೊಡುತ್ತೇನೆ;


ಏಕೆಂದರೆ ಉದ್ಧಾರವು ಪೂರ್ವದಿಂದಾಗಲಿ, ಪಶ್ಚಿಮದಿಂದಾಗಲಿ, ಅರಣ್ಯದಿಂದಾಗಲಿ ಬರುವುದಿಲ್ಲ.


ಬಿಳಾಮನು ಬಂದ ವರ್ತಮಾನವನ್ನು ಬಾಲಾಕನು ಕೇಳಿ ಅವನನ್ನು ಎದುರುಗೊಳ್ಳುವುದಕ್ಕಾಗಿ ತನ್ನ ದೇಶದ ಗಡಿಯಾದ ಅರ್ನೋನ್ ನದಿಯ ತೀರದಲ್ಲಿರುವ ಮೋವಾಬ್ಯರ ಪಟ್ಟಣಕ್ಕೆ ಹೋದನು.


ಅದಕ್ಕೆ ಬಿಳಾಮನು ಬಾಲಾಕನಿಗೆ, “ನೋಡು, ನಾನು ನಿನ್ನ ಬಳಿಗೆ ಬಂದಿದ್ದೇನೆ. ಆದರೆ ನಾನಾಗಿ ಏನಾದರೂ ಹೇಳುವುದಕ್ಕೆ ನನಗೆ ಶಕ್ತಿಯಿಲ್ಲ. ದೇವರು ನನ್ನಿಂದ ಹೇಳಿಸಿದ ಮಾತನ್ನೇ ಹೇಳುವೆನು” ಎಂದು ಹೇಳಿದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು