ಅಪೊಸ್ತಲರ ಕೃತ್ಯಗಳು 5:4 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20194 ಆ ಆಸ್ತಿ ಮೊದಲು ನಿನ್ನದಾಗಿಯೇ ಇತ್ತಲ್ಲವೇ. ಮಾರಿದ ಮೇಲೆ ಬಂದ ಹಣವು ನಿನ್ನ ಅಧೀನದಲ್ಲೇ ಇತ್ತಲ್ಲವೇ, ನೀನು ಈ ಕಾರ್ಯವನ್ನು ನಿನ್ನ ಹೃದಯದಲ್ಲಿ ಯೋಚಿಸಿಕೊಂಡದ್ದು ಏಕೆ? ನೀನು ಸುಳ್ಳಾಡಿದ್ದು ಮನುಷ್ಯರಿಗಲ್ಲ, ದೇವರಿಗೆ” ಅಂದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)4 ಮಾರುವುದಕ್ಕೆ ಮೊದಲು ಆಸ್ತಿ ನಿನಗೇ ಸೇರಿತ್ತು; ಮಾರಿದ ನಂತರವೂ ಅದರ ಹಣ ನಿನ್ನದೇ ಆಗಿತ್ತು. ಹೀಗಿರುವಲ್ಲಿ ಇಂಥಾ ದುಷ್ಟಯೋಚನೆ ಮಾಡಲು ನೀನೇಕೆ ಮನಸ್ಸುಮಾಡಿದೆ? ನೀನು ಸುಳ್ಳಾಡಿರುವುದು ಮನುಷ್ಯರಿಗಲ್ಲ, ದೇವರಿಗೆ,” ಎಂದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)4 ಆ ಆಸ್ತಿ ಇದ್ದಾಗ ನಿನ್ನದಾಗಿಯೇ ಇತ್ತಲ್ಲವೇ. ಮಾರಿದ ಮೇಲೆಯೂ ಬಂದ ಹಣವು ನಿನ್ನ ಅಧೀನದಲ್ಲೇ ಇತ್ತಲ್ಲವೇ. ನೀನು ಈ ಕಾರ್ಯವನ್ನು ನಿನ್ನ ಹೃದಯದಲ್ಲಿ ಯೋಚಿಸಿಕೊಂಡದ್ದು ಯಾಕೆ? ನೀನು ಸುಳ್ಳಾಡಿದ್ದು ಮನುಷ್ಯರಿಗಲ್ಲ, ದೇವರಿಗೆ ಆಡಿದಿ ಅಂದನು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್4 ನೀನು ಜಮೀನನ್ನು ಮಾರುವುದಕ್ಕಿಂತ ಮೊದಲು ಅದು ನಿನ್ನದೇ ಆಗಿತ್ತು. ನೀನು ಮಾರಿದ ಮೇಲೆಯೂ ಬಂದ ಹಣ ನಿನ್ನದೇ ಆಗಿತ್ತು. ಈ ಕೆಟ್ಟಕಾರ್ಯವನ್ನು ಮಾಡಲು ನೀನು ಯಾಕೆ ಯೋಚಿಸಿಕೊಂಡೆ? ನೀನು ಸುಳ್ಳು ಹೇಳಿದ್ದು ದೇವರಿಗೆ, ಮನುಷ್ಯರಿಗಲ್ಲ!” ಎಂದು ಹೇಳಿದನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ4 ಮಾರುವುದಕ್ಕಿಂತ ಮೊದಲು ಅದು ನಿನ್ನ ಅಧೀನದಲ್ಲಿತ್ತಲ್ಲವೇ? ಮಾರಿದ ನಂತರವೂ ಆ ಹಣ ನಿನ್ನ ಅಧೀನದಲ್ಲಿಯೇ ಇತ್ತಲ್ಲವೇ? ಇಂಥ ಕಾರ್ಯ ಮಾಡಲು ನಿನ್ನ ಹೃದಯದಲ್ಲಿ ಯೋಚನೆ ಬಂದದ್ದು ಏಕೆ? ನೀನು ಸುಳ್ಳು ಹೇಳಿದ್ದು ಮನುಷ್ಯರಿಗಲ್ಲ, ದೇವರಿಗೇ,” ಎಂದು ನುಡಿದನು. ಅಧ್ಯಾಯವನ್ನು ನೋಡಿದೆವಾಚಿ ಖರಿ ಖಬರ್4 ಅದ್ದಿ ಹಿ ಆಸ್ತಿ ತುಜ್ಯಾ ನಾವಾರ್ ಹೊತ್ತೆ ನ್ಹಯ್?, ಅನಿ ತಿ ಆಸ್ತಿ ಅಶೆ ಇಕುನ್ ಗಾವಲ್ಲೆ ಪೈಸೆ ತುಜೆಚ್ ಹೊಲ್ಲೆ ಹೊತ್ತೆ ತುಜ್ಯಾ ಮನಾತ್ ಅಶೆ ಕಶ್ಯಾಕ್ ಯೆವ್ಜಲೈ? ತಿಯಾ ಮಾನ್ಸಾಕ್ ಝುಟೆ ಸಾಂಗುಕ್ ನ್ಹಯ್ ದೆವಾಕುಚ್ ಝುಟೆ ಸಾಂಗ್ಲಯ್. ಅಧ್ಯಾಯವನ್ನು ನೋಡಿ |