Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 23:3 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

3 “ಸುಣ್ಣ ಬಳಿದ ಗೋಡೆಯೇ, ದೇವರು ನಿನ್ನನ್ನು ಹೊಡೆಯುವನು. ನೀನು ಧರ್ಮಶಾಸ್ತ್ರನುಸಾರವಾಗಿ, ನನ್ನನ್ನು ವಿಚಾರಣೆಮಾಡುವುದಕ್ಕೆ ಕುಳಿತುಕೊಂಡು ಧರ್ಮಶಾಸ್ತ್ರದ ವಿರುದ್ಧವಾಗಿ ನನ್ನನ್ನು ಹೊಡೆಯುವುದಕ್ಕೆ ಅಪ್ಪಣೆಕೊಡುತ್ತೀಯೋ?” ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

3 ಪೌಲನು ಅವನಿಗೆ, ‘ಸುಣ್ಣಬಳಿದ ಗೋಡೆ ನೀನು; ದೇವರು ನಿನ್ನನ್ನು ಹೊಡೆಯದೆ ಬಿಡರು; ಧರ್ಮಶಾಸ್ತ್ರದ ಪ್ರಕಾರ ನ್ಯಾಯವಿಚಾರಣೆ ಮಾಡಲು ಕುಳಿತಿರುವ ನೀನು ಅದೇ ಧರ್ಮಶಾಸ್ತ್ರವನ್ನು ಉಲ್ಲಂಘಿಸಿ ನನ್ನನ್ನು ಹೊಡೆಯುವಂತೆ ಆಜ್ಞಾಪಿಸುತ್ತಿರುವೆಯಾ?” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

3 ಪೌಲನು ಅವನಿಗೆ - ಎಲೈ ಸುಣ್ಣಾ ಹಚ್ಚಿದ ಗೋಡೆಯೇ, ದೇವರು ನಿನ್ನನ್ನು ಹೊಡೆಯುವನು. ನೀನು ಧರ್ಮಶಾಸ್ತ್ರಾನುಸಾರವಾಗಿ ನನ್ನ ವಿಚಾರಣೆ ಮಾಡುವದಕ್ಕೆ ಕೂತುಕೊಂಡು ಧರ್ಮಶಾಸ್ತ್ರ ವಿರುದ್ಧವಾಗಿ ನನ್ನನ್ನು ಹೊಡೆಯುವದಕ್ಕೆ ಅಪ್ಪಣೆಕೊಡುತ್ತೀಯೋ? ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

3 ಪೌಲನು ಅನನೀಯನಿಗೆ, “ದೇವರು ನಿನ್ನನ್ನು ಸಹ ಹೊಡೆಯುವನು! ಸುಣ್ಣ ಬಳಿದ ಗೋಡೆ ನೀನು! ಮೋಶೆಯ ಧರ್ಮಶಾಸ್ತ್ರಕ್ಕನುಸಾರವಾಗಿ ನ್ಯಾಯತೀರ್ಪು ಮಾಡಲು ಅಲ್ಲಿ ಕುಳಿತುಕೊಂಡು ನನಗೆ ಹೊಡೆಯಲು ಅವರಿಗೆ ಹೇಳುತ್ತಿರುವೆಯಾ! ಮೋಶೆಯ ಧರ್ಮಶಾಸ್ತ್ರಕ್ಕೆ ಅದು ವಿರುದ್ಧವಾದದ್ದು” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

3 ಆಗ ಪೌಲನು ಅವನಿಗೆ, “ಸುಣ್ಣ ಬಳಿದ ಗೋಡೆಯೇ, ದೇವರು ನಿನ್ನನ್ನು ಹೊಡೆಯುವರು. ಮೋಶೆಯ ನಿಯಮದ ಪ್ರಕಾರ ನನ್ನ ನ್ಯಾಯವಿಚಾರಣೆ ಮಾಡಲು ನೀನು ಕುಳಿತುಕೊಂಡು, ನಿಯಮಕ್ಕೆ ವಿರುದ್ಧವಾಗಿ ನನ್ನನ್ನು ಹೊಡೆಯಬೇಕೆಂದು ಆಜ್ಞಾಪಿಸುತ್ತೀಯೋ?” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

3 ತೆಕಾ ಪಾವ್ಲುನ್ ದೆವ್ ತುಕಾಬಿ ಮಾರ್‍ತಾ! ತಿಯಾ ಚುನ್ನೊ ಲಾವಲ್ಲ್ಯಾ ಭಿತ್ತಿ ಸಾರ್ಕೊ ಹಾಸ್ ಕಶ್ಯಾಕ್ ಮಟ್ಲ್ಯಾರ್, ಮೊಯ್ಜೆಚ್ಯಾ ಖಾಯ್ದ್ಯಾಚ್ಯಾ ಸಾರ್ಕೆ ಝಡ್ತಿ ಕರುಕ್ ಬಸಲ್ಲೊ ತಿಯಾ ಮಾಕಾ ಮಾರಾ ಮನುನ್ ತೆಂಕಾ ಸಾಂಗುಲೈ ಕಾಯ್? ತಿಯಾ ಮೊಯ್ಜೆಚ್ಯಾ ಖಾಯ್ದ್ಯಾಕ್ನಿ ಮೊಡುಲೈಯ್! ಮಟ್ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 23:3
14 ತಿಳಿವುಗಳ ಹೋಲಿಕೆ  

ಅವನು ಅವರಿಗೆ “ನಮ್ಮ ಧರ್ಮಶಾಸ್ತ್ರವು ಮೊದಲು ಒಬ್ಬನನ್ನು ವಿಚಾರಿಸಿ ಅವನು ಮಾಡುವುದೇನೆಂದು ತಿಳಿದುಕೊಳ್ಳದೆ ಅವನ ವಿಷಯವಾಗಿ ಖಂಡನೆ ಮಾಡುವುದುಂಟೇ?” ಎಂದು ಹೇಳಿದ್ದಕ್ಕೆ,


ಅವರು ನ್ಯಾಯವನ್ನು ಕಹಿಮಾಡುವವರು ಮತ್ತು ಧರ್ಮವನ್ನು ನೆಲಕ್ಕೆ ಕೆಡವಿಬಿಡುವವರು!”


ಇದಲ್ಲದೆ ನಾನು ಲೋಕದಲ್ಲಿ ದೃಷ್ಟಿಸಿ ನ್ಯಾಯಸ್ಥಾನದಲ್ಲಿಯೂ, ಧರ್ಮಸ್ಥಾನದಲ್ಲಿಯೂ ಅಧರ್ಮವಿರುವುದೆಂದು ನೋಡಿದೆನು.


ಧರ್ಮಶಾಸ್ತ್ರದ ನೆಪದಿಂದ ಕೇಡುಕಲ್ಪಿಸುವ ದುಷ್ಟ ಅಧಿಪತಿಗಳಿಗೂ, ನಿನಗೂ ಸಂಬಂಧವೇನು?


“‘ನ್ಯಾಯವಿಚಾರಣೆ, ತೂಕ, ಅಳತೆ ಮತ್ತು ಪರಿಮಾಣಗಳಲ್ಲಿ ನೀವು ನ್ಯಾಯವಿರುದ್ಧವಾಗಿ ನಡೆಯಬಾರದು.


“‘ವ್ಯಾಜ್ಯವನ್ನು ವಿಚಾರಿಸುವಾಗ ಅನ್ಯಾಯವಾದ ತೀರ್ಪನ್ನು ಮಾಡಬಾರದು. ಬಡವನ ಬಡತನವನ್ನಾಗಲಿ ಅಥವಾ ದೊಡ್ಡ ಮನುಷ್ಯನ ಘನತೆಯನ್ನಾಗಲಿ ಲಕ್ಷ್ಯಮಾಡದೆ, ಪಕ್ಷಪಾತವಿಲ್ಲದೆ ತೀರ್ಪನ್ನು ಕೊಡಬೇಕು.


ಆಗ ಅನ್ನನು ಆತನನ್ನು ಇನ್ನೂ ಕಟ್ಟಿರಲಾಗಿ ಮಹಾಯಾಜಕನಾದ ಕಾಯಫನ ಬಳಿಗೆ ಕಳುಹಿಸಿದನು.


ಆಗ ಕೆನಾನನ ಮಗನಾದ ಚಿದ್ಕೀಯನು ಮೀಕಾಯೆಹುವಿನ ಬಳಿಗೆ ಹೋಗಿ ಅವನ ಕೆನ್ನೆಗೆ ಒಂದು ಏಟು ಹಾಕಿ, “ಯೆಹೋವನ ಆತ್ಮವು ನನ್ನನ್ನು ಬಿಟ್ಟು ನಿನ್ನೊಂದಿಗೆ ಮಾತನಾಡುವುದಕ್ಕೋಸ್ಕರ ಯಾವ ಮಾರ್ಗವಾಗಿ ಬಂದಿತು?” ಎನ್ನಲು


ಹತ್ತಿರ ನಿಂತಿದ್ದವರು; “ದೇವರು ನೇಮಿಸಿದ ಮಹಾಯಾಜಕನನ್ನು ನೀನು ಬೈಯುತ್ತೀಯಾ?” ಅನ್ನಲು,


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು