ಅಪೊಸ್ತಲರ ಕೃತ್ಯಗಳು 21:3 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20193 ಮುಂದೆ ಕುಪ್ರದ್ವೀಪವನ್ನು ಕಂಡು ಎಡಗಡೆಗೆ ಬಿಟ್ಟು ಸಿರಿಯದೇಶದ ಕಡೆಗೆ ಸಾಗಿ ತೂರ್ ಪಟ್ಟಣಕ್ಕೆ ಬಂದು ಇಳಿದೆವು. ಏಕೆಂದರೆ, ಅಲ್ಲಿ ಸರಕನ್ನು ಇಳಿಸಬೇಕಾಗಿತ್ತು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)3 ಸೈಪ್ರಸನ್ನು ಸಮೀಪಿಸಿದಾಗ ಅದನ್ನು ಎಡಕ್ಕೆ ಬಿಟ್ಟು ಸಿರಿಯ ದೇಶದ ಕಡೆಗೆ ಸಾಗಿ, ಟೈರ್ ಎಂಬಲ್ಲಿ ಬಂದು ಇಳಿದೆವು. ಇಲ್ಲಿ ಹಡಗಿನ ಸರಕನ್ನು ಇಳಿಸಬೇಕಾಗಿತ್ತು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)3 ಮುಂದೆ ಕುಪ್ರದ್ವೀಪವನ್ನು ಕಂಡು ಅದನ್ನು ಎಡಗಡೆಗೆ ಬಿಟ್ಟು ಸಿರಿಯದೇಶದ ಕಡೆಗೆ ಸಾಗಿ ತೂರ್‍ಪಟ್ಟಣಕ್ಕೆ ಬಂದು ಇಳಿದೆವು. ಯಾಕಂದರೆ ಅಲ್ಲಿ ಸರಕನ್ನು ಇಳಿಸಬೇಕಾಗಿತ್ತು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್3 ನಾವು ಸೈಪ್ರಸ್ ದ್ವೀಪದ ಸಮೀಪದಲ್ಲಿ ನೌಕಾಯಾನ ಮಾಡಿದೆವು. ಅದು ನಮ್ಮ ಉತ್ತರದಿಕ್ಕಿನಲ್ಲಿ ಕಾಣುತ್ತಿತ್ತು. ಆದರೆ ನಾವು ಹಡಗನ್ನು ಅಲ್ಲಿ ನಿಲ್ಲಿಸದೆ ಸಿರಿಯ ದೇಶಕ್ಕೆ ಪ್ರಯಾಣ ಮಾಡಿ ಟೈರ್ ಪಟ್ಟಣದಲ್ಲಿ ಹಡಗನ್ನು ನಿಲ್ಲಿಸಿದೆವು. ಯಾಕೆಂದರೆ ಹಡಗಿನಿಂದ ಸರಕನ್ನು ಇಳಿಸಬೇಕಾಗಿತ್ತು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ3 ಸೈಪ್ರಸ್ ಹತ್ತಿರ ಬಂದು ಅದರ ದಕ್ಷಿಣಕ್ಕೆ ಪ್ರಯಾಣಮಾಡಿ ಸಿರಿಯಕ್ಕೆ ಹೋದೆವು. ನಮ್ಮ ನೌಕೆಯಲ್ಲಿದ್ದ ಸರಕುಗಳನ್ನು ಇಳಿಸಬೇಕಾಗಿದ್ದ ಟೈರ್ ಎಂಬಲ್ಲಿ ಬಂದು ಇಳಿದೆವು. ಅಧ್ಯಾಯವನ್ನು ನೋಡಿದೆವಾಚಿ ಖರಿ ಖಬರ್3 ಅಮಿ ಸೈಪ್ರಸ್ ದ್ವಿಪಾಕ್ ಬಗುನ್ ಢಾವ್ಯಾಭಾಜುಕ್ ಸೊಡುನ್ ಸಿರಿಯಾ ದೆಶ್ಯಾಕ್ಡೆ ಜಾವ್ನ್, ತಿರ್ ಶಾರಾತ್ ಢೊನ್ ಇಬೆಕರ್ಲ್ಯಾಂವ್, ಕಶ್ಯಾಕ್ ಮಟ್ಲ್ಯಾರ್, ಥೈ ಢೊನಾತ್ನಾ ಸಾಮಾನ್ ಉತರ್ತಲೆ ಹೊತ್ತೆ. ಅಧ್ಯಾಯವನ್ನು ನೋಡಿ |