ಅಪೊಸ್ತಲರ ಕೃತ್ಯಗಳು 19:31 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201931 ಇದಲ್ಲದೆ ಆಸ್ಯಸೀಮೆಯ ಅಧಿಕಾರಿಗಳಲ್ಲಿ ಕೆಲವರು ಪೌಲನ ಸ್ನೇಹಿತರಾಗಿದ್ದುದರಿಂದ ಅವನ ಬಳಿಗೆ ಜನರನ್ನು ಕಳುಹಿಸಿ; ನೀನು ನಾಟಕ ಶಾಲೆಯೊಳಗೆ ಹೋಗ ಬೇಡ ಎಂದು ಬೇಡಿಕೊಂಡರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)31 ಇದೂ ಅಲ್ಲದೆ, ಪೌಲನ ಸ್ನೇಹಿತರಾದ ಕೆಲವು ಸ್ಥಳೀಯ ಅಧಿಕಾರಿಗಳು, ಕ್ರೀಡಾಂಗಣಕ್ಕೆ ಹೋಗುವ ಸಾಹಸವನ್ನು ಮಾಡಕೂಡದೆಂದು ವಿನಂತಿಸಿ, ಪೌಲನಿಗೆ ಹೇಳಿಕಳುಹಿಸಿದರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)31 ಇದಲ್ಲದೆ ಆಸ್ಯಸೀಮೆಯ ಅಧಿಕಾರಿಗಳಲ್ಲಿ ಕೆಲವರು ಅವನಿಗೆ ಸ್ನೇಹಿತರಾಗಿದ್ದದರಿಂದ ಅವನ ಬಳಿಗೆ ಜನರನ್ನು ಕಳುಹಿಸಿ - ನೀನು ನಾಟಕಶಾಲೆಯೊಳಗೆ ಹೋಗಿ ನಿನ್ನನ್ನು ಅಪಾಯಕ್ಕೆ ಗುರಿಮಾಡಿಕೊಳ್ಳಬೇಡ ಎಂದು ಬೇಡಿಕೊಂಡರು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್31 ಅಲ್ಲದೆ, ಪೌಲನ ಸ್ನೇಹಿತರಾಗಿದ್ದ ಈ ದೇಶದ ನಾಯಕರುಗಳಲ್ಲಿ ಕೆಲವರು ಅವನಿಗೆ ಒಂದು ಸಂದೇಶವನ್ನು ಕಳುಹಿಸಿ ಕ್ರೀಡಾಂಗಣದೊಳಗೆ ಹೋಗಬಾರದೆಂದು ತಿಳಿಸಿದರು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ31 ಪೌಲನ ಸ್ನೇಹಿತರಾಗಿದ್ದ ಏಷ್ಯಾ ಸೀಮೆಯ ಕೆಲವು ಅಧಿಕಾರಿಗಳೂ ಈ ಕ್ರೀಡಾಂಗಣದೊಳಗೆ ಹೋಗುವ ಸಾಹಸ ಮಾಡಬಾರದೆಂದು ವಿನಂತಿಸಿ ಅವನಿಗೆ ಸಂದೇಶ ಕಳುಹಿಸಿದರು. ಅಧ್ಯಾಯವನ್ನು ನೋಡಿದೆವಾಚಿ ಖರಿ ಖಬರ್31 ತವ್ಡೆ ನಸ್ತಾನಾ ಆಸ್ಯಾ ಸಿಮೆತ್ಲ್ಯಾ ಅಧಿಕಾರಿತ್ನಿ ಉಲ್ಲಿ ಲೊಕಾ ಪಾವ್ಲುಚಿ ವಾಂಗ್ಡಿಯಾ ಹೊಲ್ಲ್ಯಾ ಸಾಟ್ನಿ ತೆಂಚ್ಯಾಕ್ನಾ, ತೆಕಾ ಲೊಕಾ ಗೊಳಾ ಹೊಲ್ಲ್ಯಾ ಜಾಗ್ಯಾರ್ ಜಾತಲೆ ನಕ್ಕೊ ಮನುನ್ ಸಾಂಗ್ಲ್ಯಾನಿ. ಅಧ್ಯಾಯವನ್ನು ನೋಡಿ |