ಅಪೊಸ್ತಲರ ಕೃತ್ಯಗಳು 18:27 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201927 ಆ ಮೇಲೆ ಅಖಾಯಕ್ಕೆ ಹೋಗಬೇಕೆಂದು ಅವನಿಗೆ ಮನಸ್ಸಾದಾಗ ಸಹೋದರರು ಅವನನ್ನು ಪ್ರೋತ್ಸಾಹಗೊಳಿಸಿ ಅಲ್ಲಿದ್ದ ಶಿಷ್ಯರಿಗೆ ಇವನನ್ನು ಸೇರಿಸಿಕೊಳ್ಳಬೇಕೆಂದು ಪತ್ರಿಕೆಯನ್ನು ಬರೆದುಕೊಟ್ಟರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)27 ಇವನು ಅಖಾಯಕ್ಕೆ ಹೋಗಲು ಇಷ್ಟಪಟ್ಟಾಗ ಭಕ್ತಾದಿಗಳು ಅವನನ್ನು ಪ್ರೋತ್ಸಾಹಿಸಿ, ಅಖಾಯದ ಭಕ್ತಾದಿಗಳಿಗೆ ಪತ್ರ ಬರೆದು, ಇವನನ್ನು ಸ್ವಾಗತಿಸುವಂತೆ ಬಿನ್ನವಿಸಿದರು. ಇವನು ಅಲ್ಲಿಗೆ ಹೋಗಿ ದೇವರ ಕೃಪೆಯಿಂದ ವಿಶ್ವಾಸಿಗಳಾಗಿದ್ದವರಿಗೆ ಬಹುವಾಗಿ ನೆರವಾದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)27 ಆಮೇಲೆ ಅಖಾಯಕ್ಕೆ ಹೋಗಬೇಕೆಂದು ಅವನಿಗೆ ಮನಸ್ಸಾದಾಗ ಸಹೋದರರು ಅವನನ್ನು ಪ್ರೋತ್ಸಾಹಗೊಳಿಸಿ ಅಲ್ಲಿದ್ದ ಶಿಷ್ಯರಿಗೆ ಇವನನ್ನು ಸೇರಿಸಿಕೊಳ್ಳಬೇಕೆಂದು ಪತ್ರಿಕೆಯನ್ನು ಬರೆದುಕೊಟ್ಟರು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್27 ಅಪೊಲ್ಲೋಸನು ಅಖಾಯ ಪ್ರಾಂತ್ಯಕ್ಕೆ ಹೋಗಲು ಅಪೇಕ್ಷಿಸಿದಾಗ ಎಫೆಸದ ಸಹೋದರರು ಅವನನ್ನು ಪ್ರೋತ್ಸಾಹಿಸಿದರು. ಅಲ್ಲದೆ ಅಖಾಯದಲ್ಲಿದ್ದ ಯೇಸುವಿನ ಶಿಷ್ಯರಿಗೆ ಅವರು ಪತ್ರವನ್ನು ಬರೆದು, ಅಪೊಲ್ಲೋಸನನ್ನು ಸ್ವೀಕರಿಸಿಕೊಳ್ಳಬೇಕೆಂದು ಅವರನ್ನು ಕೇಳಿಕೊಂಡರು. ಅಖಾಯದಲ್ಲಿ ಈ ಶಿಷ್ಯರು ದೇವರ ಕೃಪೆಯಿಂದಾಗಿ ಯೇಸುವಿನಲ್ಲಿ ನಂಬಿಕೆಯಿಟ್ಟಿದ್ದರು. ಅಪೊಲ್ಲೋಸನು ಅಲ್ಲಿಗೆ ಹೋಗಿ ಅವರಿಗೆ ಬಹಳ ನೆರವು ನೀಡಿದನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ27 ಅಪೊಲ್ಲೋಸನು ಅಖಾಯಕ್ಕೆ ಹೋಗಲು ಬಯಸಿದಾಗ, ಸಹೋದರರು ಅವನನ್ನು ಪ್ರೋತ್ಸಾಹಿಸಿ, ಅವನನ್ನು ಸ್ವೀಕರಿಸುವಂತೆ ಅಲ್ಲಿಯ ಶಿಷ್ಯರಿಗೆ ಪತ್ರವನ್ನು ಬರೆದುಕೊಟ್ಟರು. ಅವನು ಅಲ್ಲಿಗೆ ತಲುಪಿದಾಗ ದೇವರ ಕೃಪೆಯಿಂದ ವಿಶ್ವಾಸವಿಟ್ಟವರಿಗೆ ಅವನು ಬಹಳ ಸಹಾಯಮಾಡಿದನು. ಅಧ್ಯಾಯವನ್ನು ನೋಡಿದೆವಾಚಿ ಖರಿ ಖಬರ್27 ಹೆ ಸಗ್ಳೆ ಹೊಲ್ಯಾ ಮಾನಾ ಅಪೊಲ್ಲೊಸಾನ್ ಅಖಾಯಾಕ್ ಜಾವ್ಚೆ ಮನುನ್ ನಿರ್ದಾರ್ ಕರ್‍ಲ್ಯಾನ್, ತನ್ನಾ ಎಫೆಸಾತ್ಲ್ಯಾ ವಿಶ್ವಾಸಿ ಲೊಕಾನಿ ಅಖಾಯಿಯಾತ್ಲ್ಯಾ ವಿಶ್ವಾಸಿ ಲೊಕಾಕ್ನಿ ಚಿಟ್ ಲಿವ್ನ್ ಮಜ್ಜತ್ ಕರುನ್ ತೆಕಾ ಸ್ವಾಗತ್ ಕರುಕ್ ಮನುನ್ ಘೆಟ್ಲ್ಯಾನಿ, ತೊ ಥೈ ಪಾವಲ್ಯಾ ತನ್ನಾ ದೆವಾಚ್ಯಾ ಮೊಟ್ಯಾ ಕುರ್ಪೆ ವೈನಾ ಥೈ ಹೊತ್ತ್ಯಾ ವಿಶ್ವಾಸಿ ಲೊಕಾಕ್ನಿ ಎಕ್ ಮಜತ್ಕಾರಿ ಹೊಲೊ. ಅಧ್ಯಾಯವನ್ನು ನೋಡಿ |