ಅಪೊಸ್ತಲರ ಕೃತ್ಯಗಳು 15:2 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20192 ಅವರೊಂದಿಗೆ ಪೌಲ ಮತ್ತು ಬಾರ್ನಬರಿಗೆ ಚರ್ಚೆಯೂ ಮಹಾ ವಿವಾದವೂ ಉಂಟಾದಾಗ ಇದರ ವಿಷಯವಾಗಿ ಪೌಲ, ಬಾರ್ನಬರು ಮತ್ತು ತಮ್ಮಲ್ಲಿ ಬೇರೆ ಕೆಲವರು ಯೆರೂಸಲೇಮಿನಲ್ಲಿದ್ದ ಅಪೊಸ್ತಲರ ಮತ್ತು ಸಭೆಯ ಹಿರಿಯರ ಬಳಿಗೆ ಹೋಗಬೇಕೆಂದು ಸಹೋದರರು ತೀರ್ಮಾನಿಸಿದರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)2 ಈ ವಿಷಯವಾಗಿ ಅವರಿಗೂ ಪೌಲ ಮತ್ತು ಬಾರ್ನಬರಿಗೂ ಭಿನ್ನಾಭಿಪ್ರಾಯ ಉಂಟಾಗಿ ತೀವ್ರ ವಿವಾದವೆದ್ದಿತು. ಆದುದರಿಂದ ಈ ಸಮಸ್ಯೆಯ ಬಗ್ಗೆ ಪೌಲ ಮತ್ತು ಬಾರ್ನಬರು ಅಂತಿಯೋಕ್ಯದ ಇನ್ನೂ ಕೆಲವರ ಸಮೇತ ಜೆರುಸಲೇಮಿಗೆ ಹೋಗಿ ಪ್ರೇಷಿತರನ್ನೂ ಪ್ರಮುಖರನ್ನೂ ಕಾಣಬೇಕೆಂದು ತೀರ್ಮಾನಿಸಲಾಯಿತು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)2 ಅವರಿಗೂ ಪೌಲ ಬಾರ್ನಬರಿಗೂ ಭೇದವೂ ಮಹಾ ವಿವಾದವೂ ಉಂಟಾದಾಗ ಇದರ ವಿಷಯವಾಗಿ ಸಹೋದರರು ಪೌಲ ಬಾರ್ನಬರನ್ನೂ ತಮ್ಮಲ್ಲಿ ಬೇರೆ ಕೆಲವರನ್ನೂ ಯೆರೂಸಲೇವಿುನಲ್ಲಿದ್ದ ಅಪೊಸ್ತಲರ ಮತ್ತು ಸಭೆಯ ಹಿರಿಯರ ಬಳಿಗೆ ಹೋಗಬೇಕೆಂದು ನೇವಿುಸಿದರು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್2 ಪೌಲ ಬಾರ್ನಬರು ಈ ಉಪದೇಶಕ್ಕೆ ತಮ್ಮ ವಿರೋಧವನ್ನು ವ್ಯಕ್ತಪಡಿಸಿ ಅವರೊಂದಿಗೆ ವಾದ ಮಾಡಿದರು. ಈ ಸಮಸ್ಯೆಯ ಬಗ್ಗೆ ಅಪೊಸ್ತಲರೊಡನೆ ಮತ್ತು ಹಿರಿಯರೊಡನೆ ಚರ್ಚಿಸಲು ಪೌಲ ಬಾರ್ನಬರನ್ನು ಮತ್ತು ಇತರ ಕೆಲವರನ್ನು ಜೆರುಸಲೇಮಿಗೆ ಕಳುಹಿಸಲು ಸಭೆ ನಿರ್ಧರಿಸಿತು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ2 ಇದರಿಂದ ಪೌಲ, ಬಾರ್ನಬರು ಅವರೊಂದಿಗೆ ಭಿನ್ನಾಭಿಪ್ರಾಯವುಳ್ಳವರಾಗಿ ತೀವ್ರ ವಿವಾದವುಂಟಾಯಿತು. ಈ ಪ್ರಶ್ನೆಯ ವಿಷಯದಲ್ಲಿ ಅಪೊಸ್ತಲರನ್ನೂ ಹಿರಿಯರನ್ನೂ ಭೇಟಿಯಾಗಲು, ತಮ್ಮಲ್ಲಿ ಬೇರೆ ಕೆಲವರು ಪೌಲ, ಬಾರ್ನಬರೊಂದಿಗೆ ಯೆರೂಸಲೇಮಿಗೆ ಹೋಗಬೇಕೆಂದು ನಿರ್ಣಯಿಸಲಾಯಿತು. ಅಧ್ಯಾಯವನ್ನು ನೋಡಿದೆವಾಚಿ ಖರಿ ಖಬರ್2 ಪಾವ್ಲುನ್ ಅನಿ ಬಾರ್ನಾಬಾಸಾನ್ ಹ್ಯಾ ಶಿಕಾಪಾಕ್ನಿ ಅಪ್ಲೊ ವಿರೊದ್ ದಾಕ್ವುನ್ ತೆಂಚ್ಯಾ ವಾಂಗ್ಡಾ ವಾದ್ ಕರ್‍ಲ್ಯಾನಿ, ಹ್ಯಾ ನಮುನ್ಯಾಚ್ಯಾ ವಿಶಯಾತ್ ಅಪೊಸ್ತಲಾಂಚ್ಯಾ ವಾಂಗ್ಡಾ ಅನಿ ಪುರ್ವಜ್ ಲೊಕಾಂಚ್ಯಾ ವಾಂಗ್ಡಾ ಚರ್ಚಾ ಕರುಕ್ ಸಾಟ್ನಿ ಪಾವ್ಲುಕ್ ಅನಿ ಬಾರ್ನಾಬಾಸಾಕ್ ಹುರಲ್ಯಾ ಉಲ್ಲ್ಯಾ ಲೊಕಾಂಚ್ಯಾ ವಾಂಗ್ಡಾ ಜೆರುಜಲೆಮಾಕ್ ಧಾಡುಚೆ ಮನುನ್ ತಾಂಡ್ಯಾಚ್ಯಾ ಲೊಕಾನಿ ಚಿಂತ್ಲ್ಯಾನಿ. ಅಧ್ಯಾಯವನ್ನು ನೋಡಿ |