Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಸಮುಯೇಲ 19:20 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

20 ಒಡೆಯನೇ, ನಿನ್ನ ಸೇವಕನಾದ ನಾನು ಪಾಪಮಾಡಿದೆನೆಂದು ಒಪ್ಪಿಕೊಳ್ಳುತ್ತೇನೆ. ಆದ್ದರಿಂದಲೆ ನಾನು ಈ ಹೊತ್ತು ಅರಸನನ್ನು ಎದುರುಗೊಳ್ಳುವುದಕ್ಕೆ ಎಲ್ಲಾ ಯೋಸೇಫ್ಯರಲ್ಲಿ ಮೊದಲಿಗನಾಗಿ ಬಂದಿದ್ದೇನೆ” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

20 ಒಡೆಯರೇ, ತಮ್ಮ ಸೇವಕನಾದ ನಾನು ಪಾಪಮಾಡಿದೆನೆಂದು ಒಪ್ಪಿಕೊಳ್ಳುತ್ತೇನೆ. ಆದುದರಿಂದಲೇ ನಾನು ಈ ದಿನ ಅರಸನನ್ನು ಸ್ವಾಗತಿಸುವುದಕ್ಕೆ ಎಲ್ಲಾ ಜೋಸೇಫ್ಯರಲ್ಲಿ ಮೊದಲಿಗನಾಗಿ ಬಂದಿದ್ದೇನೆ,” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

20 ಒಡೆಯನೇ, ನಿನ್ನ ಸೇವಕನಾದ ನಾನು ಪಾಪ ಮಾಡಿದೆನೆಂದು ಒಪ್ಪಿಕೊಳ್ಳುತ್ತೇನೆ. ಆದದರಿಂದಲೇ ನಾನು ಈಹೊತ್ತು ಅರಸನನ್ನು ಎದುರುಗೊಳ್ಳುವದಕ್ಕೆ ಎಲ್ಲಾ ಯೋಸೇಫ್ಯರಲ್ಲಿ ಮೊದಲಾಗಿ ಬಂದಿದ್ದೇನೆ ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

20 ನಾನು ಪಾಪಮಾಡಿದ್ದೇನೆಂದು ಒಪ್ಪಿಕೊಳ್ಳುತ್ತೇನೆ. ಆದ ಕಾರಣವೇ, ನನ್ನ ರಾಜನಾದ ಒಡೆಯನೇ, ನಿನ್ನನ್ನು ಭೇಟಿಮಾಡಲು ಬಂದ ಯೋಸೇಫ್ಯರ ಕುಲದಲ್ಲಿ ನಾನೇ ಮೊದಲಿಗನು” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

20 ಏಕೆಂದರೆ ಪಾಪ ಮಾಡಿದೆನೆಂದು ನಿನ್ನ ಸೇವಕನಾಗಿರುವ ನಾನು ತಿಳಿದಿದ್ದೇನೆ. ಆದ್ದರಿಂದ ಇಗೋ, ನಾನು ಅರಸನಾದ ನನ್ನ ಒಡೆಯನನ್ನು ಎದುರುಗೊಳ್ಳಲು ಯೋಸೇಫ್ಯರಲ್ಲಿ ಎಲ್ಲರಿಗಿಂತ ಮುಂದಾಗಿ ಈ ದಿನ ಬಂದಿದ್ದೇನೆ,” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಸಮುಯೇಲ 19:20
12 ತಿಳಿವುಗಳ ಹೋಲಿಕೆ  

ನನ್ನ ಜನರು ತಮ್ಮ ದೋಷಫಲವನ್ನು ಅನುಭವಿಸಿ, ನನ್ನ ಪ್ರಸನ್ನತೆಯನ್ನು ಬೇಡಿಕೊಳ್ಳುವ ತನಕ, ನಾನು ನನ್ನ ವಾಸಸ್ಥಾನಕ್ಕೆ ಹಿಂದಿರುಗಿ ಹೋಗುವೆನು; ಅವರು ಇಕ್ಕಟ್ಟಿಗೆ ಸಿಕ್ಕಿದ ಕೂಡಲೆ ನನ್ನನ್ನು ಆಶ್ರಯಿಸುವರು.


ಎಫ್ರಾಯೀಮನ್ನು ಬಲ್ಲೆ, ಇಸ್ರಾಯೇಲ್ ನನಗೆ ಮರೆಯಾಗಿಲ್ಲ; ಎಫ್ರಾಯೀಮೇ, ನೀನೀಗ ವ್ಯಭಿಚಾರ ಮಾಡಿದ್ದಿ, ಇಸ್ರಾಯೇಲ್ ಹೊಲೆಯಾಗಿದೆ.


ಲೆಬನೋನಿನಲ್ಲಿ ವಾಸಿಸುವವಳೇ, ದೇವದಾರುಗಳಲ್ಲಿ ಗೂಡು ಮಾಡಿಕೊಂಡಿರುವವಳೇ, ಪ್ರಸವವೇದನೆಯಂತಿರುವ ಸಂಕಟವು ನಿನಗೆ ಸಂಭವಿಸುವಾಗ ನಿನ್ನ ಸ್ಥಿತಿಯು ಎಷ್ಟೋ ದುಃಖಕರವಾಗಿರುವುದು!


ಯಾರೊಬ್ಬಾಮನು ಎಫ್ರಾಯೀಮ್ ಬೆಟ್ಟದ ಸೀಮೆಯಲ್ಲಿನ ಶೆಕೆಮ್ ಪಟ್ಟಣವನ್ನು ಭದ್ರಪಡಿಸಿ ಅಲ್ಲಿ ವಾಸಿಸಿದನು. ಅಲ್ಲಿಂದ ಪೆನೂವೇಲಿಗೆ ಹೋಗಿ ಅದನ್ನೂ ಭದ್ರಪಡಿಸಿದನು.


ಯಾರೊಬ್ಬಾಮನು ಹಿಂತಿರುಗಿ ಬಂದಿದ್ದಾನೆಂಬ ವರ್ತಮಾನವು ಇಸ್ರಾಯೇಲರಿಗೆ ತಿಳಿದಾಗ ಅವರೆಲ್ಲರೂ ಅವನನ್ನು ನೆರೆದ ಸಭೆಯ ಮುಂದೆ ಕರೆಯಿಸಿ ತಮ್ಮ ಅರಸನನ್ನಾಗಿ ನೇಮಿಸಿಕೊಂಡರು. ದಾವೀದನ ಕುಟುಂಬದವರನ್ನು ಯೆಹೂದ ಕುಲವೇ ಹೊರತು ಬೇರೆ ಯಾವ ಕುಲವೂ ಹಿಂಬಾಲಿಸಲಿಲ್ಲ.


ಇಸ್ರಾಯೇಲ್ಯರೆಲ್ಲರೂ ತಮ್ಮ ತಮ್ಮ ನಿವಾಸಗಳಿಗೆ ಓಡಿ ಹೋಗಿದ್ದರು. ಇಸ್ರಾಯೇಲರ ಕುಲಗಳ ಎಲ್ಲಾ ಜನರು ತಮ್ಮತಮ್ಮೊಳಗೆ ಜಗಳವಾಡಿ “ಅರಸನಾದ ದಾವೀದನು ನಮ್ಮನ್ನು ಫಿಲಿಷ್ಟಿಯರ ಕೈಗೂ, ಬೇರೆ ಎಲ್ಲಾ ವೈರಿಗಳ ಕೈಗೂ ಸಿಕ್ಕದಂತೆ ತಪ್ಪಿಸಿ ಕಾಪಾಡಿದನು. ಆದರೆ ಅವನು ಅಬ್ಷಾಲೋಮನ ದೆಸೆಯಿಂದ ದೇಶವನ್ನು ಬಿಟ್ಟು ಓಡಿಹೋಗಬೇಕಾಯಿತು.


ಅರಸನಾದ ದಾವೀದನು ಬಹುರೀಮಿಗೆ ಬಂದಾಗ ಸೌಲನ ವಂಶದವನೂ, ಗೇರನ ಮಗನೂ ಆದ ಶಿಮ್ಮೀಯು ದಾವೀದನನ್ನು ಶಪಿಸುತ್ತಾ, ಆ ಊರಿನಿಂದ ಹೊರಗೆ ಬಂದನು.


ಆ ದಿನದಲ್ಲಿ ಅವನು ಅವರನ್ನು ಆಶೀರ್ವದಿಸಿ, “ನಿಮ್ಮ ಹೆಸರಿನಲ್ಲಿ ಇಸ್ರಾಯೇಲರು ಆಶೀರ್ವದಿಸಲ್ಪಡುವರು. ಎಫ್ರಾಯೀಮ್ ಹಾಗೂ ಮನಸ್ಸೆಯ ಹಾಗೆ ದೇವರು ನಿಮ್ಮನ್ನೂ ಆಶೀರ್ವದಿಸಲಿ” ಎಂದು ಹೇಳಿ ಎಫ್ರಾಯೀಮನನ್ನು ಮನಸ್ಸೆಯ ಮುಂದೆ ನಿಲ್ಲಿಸಿದನು.


ಮನಸ್ಸೆಯು ಚೊಚ್ಚಲ ಮಗನಾಗಿದ್ದರೂ, ಇಸ್ರಾಯೇಲನು ತನ್ನ ಕೈಗಳನ್ನು ಅಡ್ಡವಾಗಿ ಚಾಚಿ ಕಿರಿಯವನಾದ ಎಫ್ರಾಯೀಮನ ತಲೆಯ ಮೇಲೆ ಬಲಗೈಯನ್ನೂ, ಮನಸ್ಸೆಯ ತಲೆಯ ಮೇಲೆ ಎಡಗೈಯನ್ನೂ ಇಟ್ಟನು.


ಚೆರೂಯಳ ಮಗನಾದ ಅಬೀಷೈಯು, “ಯೆಹೋವನ ಅಭಿಷಿಕ್ತನನ್ನು ಶಪಿಸಿದ್ದಕ್ಕಾಗಿ ಶಿಮ್ಮಿಗೆ ಮರಣದಂಡನೆಯಾಗಬೇಕಲ್ಲವೇ” ಎಂದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು