Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಸಮುಯೇಲ 16:3 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

3 ಅರಸನು ತಿರುಗಿ ಅವನನ್ನು, “ನಿನ್ನ ಯಜಮಾನನ ಮಗನು ಎಲ್ಲಿದ್ದಾನೆ?” ಎಂದು ಕೇಳಲು ಅವನು, “ತನ್ನ ತಂದೆಯ ರಾಜ್ಯವನ್ನು ಇಸ್ರಾಯೇಲರು ಮರಳಿ ತನಗೇ ಕೊಡುವರೆಂದು ಹೇಳಿ ಅವನು ಯೆರೂಸಲೇಮಿನಲ್ಲೇ ಉಳಿದನು” ಅಂದನು

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

3 ಅರಸನು ಮತ್ತೆ, “ನಿನ್ನ ಯಜಮಾನನ ಮಗ ಎಲ್ಲಿದ್ದಾನೆ?” ಎಂದು ಕೇಳಲು ಅವನು, “ತನ್ನ ತಂದೆಯ ರಾಜ್ಯವನ್ನು ಇಸ್ರಯೇಲರು ಈ ದಿನ ತನಗೆ ಮರಳಿಕೊಡುವರೆಂದು ಹೇಳಿ ಅವನು ಜೆರುಸಲೇಮಿನಲ್ಲೇ ಉಳಿದುಕೊಂಡನು,” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

3 ಅರಸನು ತಿರಿಗಿ ಅವನನ್ನು - ನಿನ್ನ ಯಜಮಾನನ ಮಗನು ಎಲ್ಲಿದ್ದಾನೆಂದು ಕೇಳಲು ಅವನು - ತನ್ನ ತಂದೆಯ ರಾಜ್ಯವನ್ನು ಇಸ್ರಾಯೇಲ್ಯರು ಈಹೊತ್ತು ತನಗೆ ತಿರಿಗಿ ಕೊಡುವರೆಂದು ಹೇಳಿ ಅವನು ಯೆರೂಸಲೇವಿುನಲ್ಲೇ ಉಳುಕೊಂಡನು ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

3 ರಾಜನು, “ಮೆಫೀಬೋಶೆತನು ಎಲ್ಲಿ?” ಎಂದು ಕೇಳಿದನು. ಚೀಬನು ರಾಜನಿಗೆ, “ಮೆಫೀಬೋಶೆತನು ಜೆರುಸಲೇಮಿನಲ್ಲಿಯೇ ಇದ್ದಾನೆ. ಯಾಕೆಂದರೆ ‘ಇಸ್ರೇಲರು ನನ್ನ ತಾತನ ರಾಜ್ಯಾಧಿಕಾರವನ್ನು ಈ ದಿನ ನನಗೆ ಹಿಂದಕ್ಕೆ ಕೊಡುತ್ತಾರೆ’ ಎಂಬುದು ಅವನ ಆಲೋಚನೆಯಾಗಿದೆ” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

3 ಆಗ ಅರಸನು ಅವನನ್ನು, “ನಿನ್ನ ಯಜಮಾನನ ಪುತ್ರನು ಎಲ್ಲಿದ್ದಾನೆ?” ಎಂದು ಕೇಳಿದನು. ಚೀಬನು ಅರಸನಿಗೆ, “ಅವನು ಯೆರೂಸಲೇಮಿನಲ್ಲಿದ್ದಾನೆ. ಏಕೆಂದರೆ ಈ ಹೊತ್ತು ಇಸ್ರಾಯೇಲಿನ ಮನೆಯವರು ನನ್ನ ತಂದೆಯ ರಾಜ್ಯವನ್ನು ನನಗೆ ತಿರುಗಿ ಕೊಡುವರೆಂದು ಹೇಳಿಕೊಂಡನು,” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಸಮುಯೇಲ 16:3
13 ತಿಳಿವುಗಳ ಹೋಲಿಕೆ  

ಅವರ ಗತಿಯನ್ನು ಏನೆಂದು ಹೇಳಲಿ? ಇವರು ಕಾಯಿನನ ಮಾರ್ಗವನ್ನು ಹಿಡಿದವರೂ, ದ್ರವ್ಯಸಂಪಾದನೆಗೋಸ್ಕರ ಬಿಳಾಮನ ಭ್ರಾಂತಿಯಲ್ಲಿ ಪೂರ್ಣವಾಗಿ ಮುಳುಗಿದವರೂ, ಕೋರಹನಂತೆ ಎದುರು ಮಾತನಾಡಿ ನಾಶವಾಗಿ ಹೋಗುವವರು ಆಗಿದ್ದಾರೆ.


ಮಿತ್ರನನ್ನು ನಂಬಬೇಡ, ಆಪ್ತನಲ್ಲಿ ಭರವಸವಿಡಬೇಡ. ನಿನ್ನ ಎದೆಯ ಮೇಲೆ ಒರಗುವವಳಿಗೆ ನಿನ್ನ ರಹಸ್ಯ ತಿಳಿಸಬೇಡ ಭದ್ರವಾಗಿಟ್ಟುಕೋ.


ಸುಳ್ಳು ಸಾಕ್ಷಿಯು ಅಳಿದುಹೋಗುವುದು, ಕೇಳಿದ್ದನ್ನೇ ಹೇಳುವವನ ಸಾಕ್ಷಿಯು ಶಾಶ್ವತವಾಗಿರುವುದು.


ಸೂರೆಮಾಡುವವರೆಲ್ಲರ ದಾರಿಯು ಹೀಗೆಯೇ ಸರಿ; ಕೊಳ್ಳೆಯು ಕೊಳ್ಳೆಗಾರರ ಜೀವವನ್ನೇ ಕೊಳ್ಳೆಮಾಡುವುದು.


ಗುಪ್ತದಲ್ಲಿ ನೆರೆಯವನ ಮೇಲೆ ಚಾಡಿ ಹೇಳುವವನನ್ನು ಸಂಹರಿಸುವೆನು; ಸೊಕ್ಕಿನ ಕಣ್ಣೂ, ಉಬ್ಬಿದ ಮನಸ್ಸೂ ಉಳ್ಳವನನ್ನು ಸಹಿಸುವುದಿಲ್ಲ.


ನನ್ನ ಆಪ್ತಮಿತ್ರರನ್ನು ದೂರಮಾಡಿದಿ; ಅಂಧಕಾರವೇ ನನ್ನ ಒಡನಾಡಿ.


ಅವನು ಚಾಡಿಯನ್ನು ಹೇಳದವನೂ, ಮತ್ತೊಬ್ಬರಿಗೆ ಅನ್ಯಾಯ ಮಾಡದವನೂ, ಯಾರನ್ನೂ ನಿಂದಿಸದವನೂ ಆಗಿರಬೇಕು.


“ಮತ್ತೊಬ್ಬನ ಮೇಲೆ ಸುಳ್ಳುಸಾಕ್ಷಿ ಹೇಳಬಾರದು.


ಆಗ ಅರಸನು ಅವನಿಗೆ, “ಮೆಫೀಬೋಶೆತನ ಆಸ್ತಿಯೆಲ್ಲಾ ನಿನ್ನದೇ” ಎಂದು ಹೇಳಲು ಅವನು, “ಅರಸನೇ ನಿನಗೆ ಸಾಷ್ಟಾಂಗ ನಮಸ್ಕಾರ ಮಾಡುತ್ತೇನೆ. ನನ್ನ ಒಡೆಯನೇ, ನಿನ್ನ ದೃಷ್ಟಿಯಲ್ಲಿ ನನಗೆ ದಯೆ ದೊರಕಲಿ” ಎಂದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು