2 ಪೇತ್ರನು 2:21 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201921 ಅವರು ನೀತಿಮಾರ್ಗವನ್ನು ತಿಳಿದು ತಮಗೆ ಕೊಡಲ್ಪಟ್ಟ ಪರಿಶುದ್ಧ ಆಜ್ಞೆಯನ್ನು ಬಿಟ್ಟು ದೂರ ಹೋಗುವುದಕ್ಕಿಂತ ಆ ಮಾರ್ಗವನ್ನು ತಿಳಿಯದೆ ಹೋಗಿದ್ದರೆ ಚೆನ್ನಾಗಿತ್ತು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)21 ಅವರು ನೀತಿಯ ಮಾರ್ಗವನ್ನು ಅರಿತುಕೊಂಡು ತಾವು ಸ್ವೀಕರಿಸಿದ ಪವಿತ್ರ ಆಜ್ಞೆಯನ್ನು ತಿರಸ್ಕರಿಸುವುದಕ್ಕಿಂತ ಅದನ್ನು ಅರಿಯದವರಾಗಿದ್ದರೆ ಒಳ್ಳೆಯದಾಗುತ್ತಿತ್ತು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)21 ಅವರು ನೀತಿ ಮಾರ್ಗವನ್ನು ತಿಳಿದು ತಮಗೆ ಕೊಡಲ್ಪಟ್ಟ ಪರಿಶುದ್ಧ ಆಜ್ಞೆಯಿಂದ ತೊಲಗಿಹೋಗುವದಕ್ಕಿಂತ ಆ ಮಾರ್ಗವನ್ನು ತಿಳಿಯದಿದ್ದರೆ ಮೇಲಾಗಿತ್ತು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್21 ಹೌದು, ಆ ಜನರು ಸರಿಯಾದ ಮಾರ್ಗವನ್ನು ತಿಳಿಯದೆ ಹೋಗಿದ್ದರೇ ಒಳ್ಳೆಯದಾಗುತ್ತಿತ್ತು. ಸರಿಯಾದ ಮಾರ್ಗವನ್ನು ಅರಿತುಕೊಂಡು, ಪವಿತ್ರ ಬೋಧನೆಗಳಿಗೆ ವಿಮುಖರಾಗುವುದಕ್ಕಿಂತ ಅದನ್ನು ತಿಳಿದುಕೊಳ್ಳದಿದ್ದರೇ ಚೆನ್ನಾಗಿರುತ್ತಿತ್ತು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ21 ಅವರು ನೀತಿಮಾರ್ಗವನ್ನು ತಿಳಿದುಕೊಂಡ ಮೇಲೆ ತಮಗೆ ಕೊಡಲಾದ ಪವಿತ್ರ ಆಜ್ಞೆಯಿಂದ ತೊಲಗಿ ಹೋಗುವುದಕ್ಕಿಂತ ಆ ಮಾರ್ಗವನ್ನು ತಿಳಿಯದೆ ಇದ್ದಿದ್ದರೆ ಮೇಲಾಗಿತ್ತು. ಅಧ್ಯಾಯವನ್ನು ನೋಡಿದೆವಾಚಿ ಖರಿ ಖಬರ್21 ತ್ಯಾ ಲೊಕಾನಿ ನಿತಿವಂತ್ಪಾನಾಚಿ ವಾಟ್ ಕಳ್ವುನ್ ಘೆವ್ನ್ ಅಪ್ನಾಕ್ ದಿವ್ನ್ ಹೊಲ್ಲ್ಯಾ ಪವಿತ್ರ್ ಹುಕುಮಾಕ್ನಿ ಸೊಡುನ್ ಜಾತಲ್ಯಾಕಿಂತಾ ಬರಿ ಹೊತ್ತಿ ವಾಟ್ ಕಳಿ ನಸ್ತಾನಾ ರಾಲ್ಯಾರುಚ್ ಬರೆ ಹೊಯ್ ಹೊತ್ತೆ, ಖರಿ ವಾಟ್ ಕಳ್ವುನ್ ಘೆವ್ನ್ ಬಿ ಪವಿತ್ರ್ ಶಿಕಾಪಾಕ್ನಿ ಧುರ್ ಕರ್ತಲ್ಯಾಕಿಂತಾ ತೆ ಕಳ್ವುನ್ ಗೆಯ್ ನಸ್ತಾನಾ ಹೊತ್ತೆಚ್ ಬರೆ ಹೊತಾ. ಅಧ್ಯಾಯವನ್ನು ನೋಡಿ |