2 ಪೇತ್ರನು 2:13 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201913 ತಮ್ಮ ದುರ್ನೀತಿಗೆ ಸರಿಯಾದ ದುಷ್ಫಲವನ್ನು ಹೊಂದುವರು. ದುಂದುಗಾರಿಕೆಯಲ್ಲಿ ಹಗಲನ್ನು ಕಳೆಯುವುದೇ ಸುಖವೆಂದೆಣಿಸುತ್ತಾರೆ. ಇವರು ನಿಮ್ಮೊಂದಿಗೆ ಔತಣ ಮಾಡುತ್ತಿರುವಾಗ ವಂಚಕರಾಗಿದ್ದು ಉಂಡು ಕುಡಿದು ಕಳಂಕಕ್ಕೂ, ಅವಮಾನಕ್ಕೂ ಕಾರಣರಾಗಿದ್ದಾರೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)13 ತಾವು ಮಾಡಿದ ಕೇಡಿಗೆ ಪ್ರತಿಯಾಗಿ ಕೇಡನ್ನೇ ಪಡೆಯುತ್ತಾರೆ. ಇವರು ಹಾಡುಹಗಲಿನಲ್ಲೇ ಏನುಬೇಕಾದರೂ ಮಾಡಿ, ದೈಹಿಕ ವ್ಯಾಮೋಹಗಳನ್ನು ತಣಿಸುವುದೇ ಸುಖವೆಂದು ಎಣಿಸುತ್ತಾರೆ. ವಂಚಕರಾದ ಇವರು ಪ್ರೇಮಭೋಜನಗಳಲ್ಲಿ ನಿಮ್ಮ ಸಂಗಡ ಸೇರಿ ತಿಂದುಕುಡಿಯುವಾಗ ನಿಮಗೆ ಕಳಂಕವನ್ನೂ ಮಾನನಷ್ಟವನ್ನೂ ತರುತ್ತಾರೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)13 ದುಂದುಗಾರಿಕೆಯಲ್ಲಿ ಹಗಲನ್ನು ಕಳೆಯುವದೇ ಸುಖವೆಂದೆಣಿಸುತ್ತಾರೆ. ಇವರು ನಿಮ್ಮ ಸಂಗಡ ಸೇರಿ ಔತಣಮಾಡುತ್ತಿರುವಾಗ ವಂಚಕರಾಗಿದ್ದು ಉಂಡು ಕುಡಿದು ಕಳಂಕಕ್ಕೂ ಅವಮಾನಕ್ಕೂ ಕಾರಣರಾಗಿದ್ದಾರೆ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್13 ಅವರಿಂದ ಅನೇಕ ಜನರು ಸಂಕಟಕ್ಕೆ ಒಳಗಾಗುವರು. ಅವರು ಮಾಡಿದ್ದಕ್ಕೆ ಅದೇ ಪ್ರತಿಫಲವಾಗಿರುವುದು. ಈ ಸುಳ್ಳುಬೋಧಕರು ಜನರೆಲ್ಲರ ಎದುರಿನಲ್ಲಿ ಕೆಟ್ಟದ್ದನ್ನು ಮಾಡಲು ಸಂತೋಷಿಸುತ್ತಾರೆ. ತಮ್ಮನ್ನು ಸಂತಸಗೊಳಿಸುವ ಕೆಟ್ಟಕಾರ್ಯಗಳಿಂದ ಅವರು ಆನಂದಿಸುತ್ತಾರೆ. ಅವರು ನಿಮ್ಮ ಮಧ್ಯದಲ್ಲಿ ಕೊಳಕಾದ ಕಲೆಗಳಂತಿದ್ದಾರೆ. ನೀವು ಒಟ್ಟಾಗಿ ಊಟ ಮಾಡುವಾಗ ಅವರು ನಿಮಗೆ ಅಪಮಾನಕರವಾಗಿದ್ದಾರೆ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ13 ತಮ್ಮ ದುರ್ನೀತಿಗೆ ಸರಿಯಾದ ದುಷ್ಫಲವನ್ನು ಹೊಂದುವರು. ದುಂದುಗಾರಿಕೆಯನ್ನು ಹಗಲಲ್ಲಿ ಕಳೆಯುವುದೇ ಸುಖವೆಂದೆಣಿಸುತ್ತಾರೆ. ಇವರು ನಿಮ್ಮ ಸಂಗಡ ಸೇರಿ ಔತಣ ಮಾಡುತ್ತಿರುವಾಗ ವಂಚಕರಾಗಿದ್ದು ಕಳಂಕಕ್ಕೂ, ನಿಂದೆಗೂ ಕಾರಣರಾಗಿದ್ದಾರೆ. ಅಧ್ಯಾಯವನ್ನು ನೋಡಿದೆವಾಚಿ ಖರಿ ಖಬರ್13 ಅನಿ ತೆಂಚ್ಯಾ ವೈನಾ ಲೈ ಕಸ್ಟಾತ್ ಪಡ್ತಾತ್. ತೆನಿ ಕರ್ತಲ್ಯಾ ಚುಕೆಕ್ ತೆಂಕಾ ತೆಚ್ ದೆನೆ ಹೊವ್ನ್ ರ್‍ಹಾತಾ.ಝುಟಿ ಶಿಕಾಪಾಕಾರಿ ಲೊಕಾಂಚ್ಯಾ ಫಿಡ್ಯಾತ್ ಬುರ್ಶಿಕಾಮಾ ಕರುಕ್ ಖುಸಿ ಹೊತಾತ್.ಅಪ್ನಾಕ್ನಿ ಸಮಾಧಾನ ಕರ್ತಲ್ಯಾ ಬುರ್ಶಾ ಕಾಮಾನಿ ತೆನಿ ಆನಂದಿತ್ ಹೊತಾತ್ ತುಮಿ ಎಕಾಕ್ಡೆ ಗೊಳಾ ಹೊವ್ನ್ ಜೆವಾನ್ ಕರ್ತನಾ ತೆನಿ ತುಮ್ಕಾ ಅವಮಾನ್ ಸಾರ್ಕೆ ಹೊವ್ನ್ ಹಾತ್, ಅನಿ ತೆನಿ ತುಮ್ಚ್ಯಾ ಮದ್ದಿ ಬುರ್ಶಿ ಡಾಗಾ ಸಾರ್ಕೆ ಹೊವ್ನ್ ಹಾತ್. ಅಧ್ಯಾಯವನ್ನು ನೋಡಿ |